Ramesh Jarkiholi: ಸರ್ಕಾರ ಬೀಳಿಸಿದ್ದಕ್ಕೆ ಈ ರೀತಿ ಷಡ್ಯಂತ್ರ; ನಾಳೆ ನಮ್ಮ ಅಸ್ತ್ರ ಪ್ರಯೋಗ: ರಮೇಶ್​ ಜಾರಕಿಹೊಳಿ

ನಾಳೆ ನಮ್ಮ ಅಸ್ತ್ರ ಪ್ರಯೋಗ ಆಗಲಿದೆ. ಇದಕ್ಕೆ ನಾನು ಹೆದರುವುದಿಲ್ಲ. ದೂರು ನೀಡಿದವರಿಗೆ ಶಿಕ್ಷೆಯಾಗಲಿದೆ. ನಮ್ಮ ಆಟ ಈಗ ಶುರುವಾಗಲಿದೆ

ರಮೇಶ್​ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ

 • Share this:
  ಬೆಂಗಳೂರು (ಮಾ. 30): ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಸಿದ ಸಿಡಿ ಸಂತ್ರಸ್ತ ಯುವತಿ ತಮ್ಮ ವಕೀಲ ಜಗದೀಶ್​ ಮೂಲಕ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಎಫ್​​ಐಆರ್​ ದಾಖಲಾದರೆ, ಸಚಿವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ. ಈ ಬೆಳವಣಿಗೆ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರು, ಇದೆಲ್ಲಾ ಷಡ್ಯಂತ್ರ. ಈ ಷಡ್ಯಂತ್ರದ ಕೊನೆ ಅಸ್ತ್ರವೇ ಈ ದೂರು. ಇದು ಬರುತ್ತದೆ ಎಂದು ಮೊದಲೇ ತಿಳಿದಿತ್ತು. ಇದಕ್ಕೆ ಪ್ರತಿಯಾಗಿ ನಾವೇನು ಮಾಡಬೇಕು ಎಂದು ಕೂಡ ನಾವು ಯೋಚಿಸಿದ್ದೇವು. ನಾಳೆ ನಮ್ಮ ಅಸ್ತ್ರ ಪ್ರಯೋಗ ಆಗಲಿದೆ. ಇದಕ್ಕೆ ನಾನು ಹೆದರುವುದಿಲ್ಲ. ದೂರು ನೀಡಿದವರಿಗೆ ಶಿಕ್ಷೆಯಾಗಲಿದೆ. ನಮ್ಮ ಆಟ ಈಗ ಶುರುವಾಗಲಿದೆ ಎಂದರು.

  ನಾನು ಹೋರಾಟಗಾರ ಇದಕ್ಕೆಲ್ಲ ಹೆದರುವುದಿಲ್ಲ.ಸರ್ಕಾರ ಬೀಳಿಸಿ ಸರ್ಕಾರ ರಚನೆ ಮಾಡುವ ಶಕ್ತಿ ಇದ್ದವರು ನಾವು. ಈ ರೀತಿಯ ಹತ್ತು ವಿಡಿಯೋ, ದೂರು ಬಂದರೂ ಹೆದರುವುದಿಲ್ಲ. ಆಕೆ ದೂರು ಕೊಡೋ ಹಾಗಿದ್ದರೆ ಮೊದಲೇ ನೀಡಬೇಕಿತ್ತು. ಈಗ ಎಲ್ಲೋ ಕೂತು ಕಂಪ್ಲೇಂಟ್ ಕೊಡುತ್ತಿದ್ದಾಳೆ. ನಾನು ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ನಮ್ಮ ವಕೀಲರನ್ನು ಭೇಟಿಯಾದ ನಂತರ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ .ಈ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು.

  ನನ್ನ ಬಳಿ ಸುಪ್ರೀಂಕೋರ್ಟ್ ಲಾಯರ್ ಇದ್ದಾರೆ. ಈ ಕುರಿತು ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಾನು ಮೊದಲು ದೂರು ಕೊಟ್ಟಿದ್ದೇನೆ. ನನ್ನ ಎಫ್​ಐಆರ್​​ ಮೊದಲು ತನಿಖೆ ಆಗಲಿ. ನನ್ನದು ತಪ್ಪು ‌ಇದ್ದರೆ ನಾನೇ ಪೊಲೀಸ್ ಠಾಣೆಗೆ ಬರುತ್ತೇನೆ,.
  ಸರ್ಕಾರ ಬೀಳಿಸಿದ್ದಕ್ಕೆ ಹೀಗೆ ಷಡ್ಯಂತ್ರ ಮಾಡುತ್ತಿದ್ದಾರೆ. ಈಗಾಗಲೇ ಇದರ ಹಿಂದೆ ಯಾರು ಇದ್ದಾರೆ ಎಂದು ಸಿಎಂ, ಗೃಹಮಂತ್ರಿಗಳಿಗೆ ಹೇಳಿದ್ದೇನೆ. ಯುವತಿ ಹೀಗೆ ಮಾಡುತ್ತಾಳೆ ಎಂದು ಮೊದಲೇ ಗೊತ್ತಿತ್ತು ಎಂದರು.

  ಇದನ್ನು ಓದಿ: ರಮೇಶ್​ ಜಾರಕಿಹೊಳಿ ವಿರುದ್ಧ ವಕೀಲರ ಮೂಲಕ ದೂರು ದಾಖಲಿಸಿದ ಸಿಡಿ ಸಂತ್ರಸ್ತೆ

  ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದಂತೆ ಸಂತ್ರಸ್ತ ಯುವತಿ ವಕೀಲ ಜಗದೀಶ್​ ಮೂಲಕ ಬೆಂಗಳೂರು ಪೊಲೀಸ್​ ಕಮಿಷನರ್ ಕಮಲ್​ಪಂತ್​​ ಕಚೇರಿಗೆ ದೂರು  ನೀಡಿದ್ದಾರೆ. ಯುವತಿ ಕೈ ಬರವಣಿಗೆಯಲ್ಲಿ ಎರಡು ಪುಟಗಳಲ್ಲಿ ದೂರನ್ನು ನೀಡಿದ್ದಾರೆ. ಇದರಲ್ಲಿ ಮಾಜಿ ಸಚಿವರು ಉದ್ಯೋಗದ ಭರವಸೆ ನೀಡಿ ತಮ್ಮನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಬಗ್ಗೆ ತಿಳಿಸಿದ್ದಾರೆ. ದೂರಿನಲ್ಲಿ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ವಂಚನೆ ಮಾಡಿರುವುದಾಗಿ ಉಲ್ಲೇಖ ಮಾಡಲಾಗಿದೆ.

  ದೂರಿನ ಬಳಿಕ ಮಾತನಾಡಿದ ವಕೀಲರಾದ ಜಗದೀಶ್​, ಯುವತಿಗೆ ಭದ್ರತೆ ಮುಖ್ಯವಾಗಿದೆ. ಅಲ್ಲದೇ, ಎಸ್​ಐಟಿ ತನಿಖೆ ಮೇಲೆ ಮೇಲೆ ಆಕೆಗೆ ನಂಬಿಕೆ ಇಲ್ಲ. ಆಕೆ ಆರೋಪ ಮಾಡುತ್ತಿರುವುದು ಕರ್ನಾಟಕದ ಪ್ರಭಾವಿ ವ್ಯಕ್ತಿ ಮೇಲೆ ಹಾಗಾಗಿ ಆ ಸಂತ್ರಸ್ತ ಯುವತಿಗೆ ಭಯ ಇದೆ ಎಂದು ತಿಳಿಸಿದರು.
  Published by:Seema R
  First published: