• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಬಂಧನದ ಭೀತಿ: ಇಂದು ಎಸ್​ಐಟಿ ಮುಂದೆ ರಮೇಶ್​ ಜಾರಕಿಹೊಳಿ ವಿಚಾರಣೆಗೆ ಹಾಜರಾಗುವುದು ಬಹುತೇಕ ಅನುಮಾನ

ಬಂಧನದ ಭೀತಿ: ಇಂದು ಎಸ್​ಐಟಿ ಮುಂದೆ ರಮೇಶ್​ ಜಾರಕಿಹೊಳಿ ವಿಚಾರಣೆಗೆ ಹಾಜರಾಗುವುದು ಬಹುತೇಕ ಅನುಮಾನ

ರಮೇಶ್​ ಜಾರಕಿಹೊಳಿ.

ರಮೇಶ್​ ಜಾರಕಿಹೊಳಿ.

Ramesh jarkiholi CD Case: ಒಂದು ವೇಳೆ ರಮೇಶ್​ ಜಾರಕಿಹೊಳಿ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗದಿದ್ದರೆ ಅವರ, ಎಸ್​ಐಟಿ ಕೂಡ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ

 • Share this:

  ಬೆಂಗಳೂರು (ಏ. 2): ಸಿಡಿ ಪ್ರಕರಣದ ಆರೋಪದ ಮೇಲೆ ಇಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ನೋಟಿಸ್​ ಜಾರಿ ಮಾಡಿದೆ. ಇಂದು ಬೆಳಗ್ಗೆ 10.30ಕ್ಕೆ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈಗಾಗಲೇ ವಿಚಾರಣೆ ಎದುರಿಸಿರುವ ರಮೇಶ್​ ಜಾರಕಿಹೊಳಿಗೆ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ರಮೇಶ್​ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತೆ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದು, ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಎಫ್​ಐಆರ್​ ದಾಖಲಾಗಿರುವ ಹಿನ್ನಲೆ ಅವರಿಗೆ ಬಂಧನದ ಭೀತಿ ಕೂಡ ಇದ್ದು, ಅವರು ಇಂದಿನ ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ.


  ಒಂದು ವೇಳೆ ರಮೇಶ್​ ಜಾರಕಿಹೊಳಿ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗದಿದ್ದರೆ ಅವರ, ಎಸ್​ಐಟಿ ಕೂಡ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ. ಸಂತ್ರಸ್ತೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿದಾಗಿನಿಂದಲೂ ರಮೇಶ್​ ಜಾರಕಿಹೊಳಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ, ನಿರೀಕ್ಷಣಾ ಜಾಮೀನಿಗೂ ಅವರು ಅರ್ಜಿ ದಾಖಲಿಸಿಲ್ಲ. ಈ ಹಿನ್ನಲೆ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಯಾರ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ.


  ಇನ್ನು ಗುರುವಾರ ಎಸ್​ಐಟಿಯೊಂದಿಗೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಿರುವ ಎಸ್​ಐಟಿ ಸಂತ್ರಸ್ತೆಯಿಂದ ವಿವರಣೆ ಪಡೆದಿದೆ. ಅತ್ಯಾಚಾರ ನಡೆದ ಸ್ಥಳ ಎನ್ನಲಾದ ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್​ ಅಪಾರ್ಟ್​ಮೆಂಟ್​, ಸಂತ್ರಸ್ತೆ ವಾಸವಿದ್ದ ಆರ್​.ಟಿ ನಗರದ ಪಿಜಿ ಗಳಿಗೆ ಭೇಟಿ ನೀಡಿ ಮಹಜರು ಮಾಡಲಾಗಿದೆ. ನಿನ್ನೆ ತಡರಾತ್ರಿಯವರೆಗೂ ಮಹಜರು ಪ್ರಕ್ರಿಯೆ ಮಾಡಿರೋ ಎಸ್​ಐಟಿ ತಂಡ ಮಹಜರು ಪ್ರಕ್ರಿಯೆ ಮುಗಿಸಿ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದಾರೆ. ಇಂದು 10 ಗಂಟೆಗೆ ಟೆಕ್ನಿಕಲ್ ಸೆಲ್‌ಗೆ ಬರುವಂತೆ ಯುವತಿಗೆ ನೊಟೀಸ್ ನೀಡಲಾಗಿದೆ. ವಿಚಾರಣೆ ಸಲುವಾಗಿ ಬರುವಂತೆ ತನಿಖಾಧಿಕಾರಿ ಕವಿತಾ ಸೂಚಿಸಿದ್ದಾರೆ. ಮಹಜರು ವೇಳೆ ಸಿಕ್ಕ ದಾಖಲೆಗಳ ಕುರಿತಾಗಿ ಇಂದು ವಿಚಾರಣೆ ನಡೆಸಲಾಗುವುದು.


  ಮಾ. 29ರಿಂದ ಅಜ್ಞಾತ ಸ್ಥಳದಲ್ಲಿರುವ ರಮೇಶ್​ ಜಾರಕಿಹೊಳಿ ಅವರು ಮುಂಬೈನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಿಚಾರಣೆ ಹಿನ್ನಲೆ ಅವರು ದಿಢೀರ್​ ಎಂದು ಹಾಜರಾಗುತ್ತಾರಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.


  10:30 ಕ್ಕೆ ಜಾರಕಿಹೊಳಿಗೆ ಎಸ್ ಐ ಟಿ ಮುಂದೆ ಹಾಜರಾಗಲು ನೊಟೀಸ್ ಹಿನ್ನಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಸ್ ಐ ಟಿ ಹಿರಿಯ ಅಧಿಕಾರಗಳ 10 ಗಂಟೆಗೆ ಸಭೆ ನಡೆಸಲಿದ್ದಾರೆ. ರಮೇಶ್​ ಜಾರಕಿಹೊಳಿ ಬಂದರೆ ವಿಚಾರಣೆ ಹೇಗೆ ಮಾಡಬೇಕು. ಯುವತಿ ಹೇಳಿಕೆ ಆಧಾರದ ಮೇಲೆ ಏನೆಲ್ಲಾ ಪ್ರಶ್ನೆಗಳನ್ನು ಮಾಡಬೇಕು. ರಮೇಶ್ ಜಾರಕಿಹೊಳಿಯನ್ನು ಯಾರು ವಿಚಾರಣೆ ಮಾಡಬೇಕು. ಒಂದು ವೇಳೆ ಜಾರಕಿಹೊಳಿ ಇಂದು ಬಂದಿಲ್ಲ ಅಂದ್ರೆ ಮುಂದೇನು..? ಮತ್ತೊಂದು ದಿನಕ್ಕೆ ಬರುವಂತೆ ನೊಟೀಸ್ ನೀಡೋದಾ..? ಅಥವಾ ಬಂಧನ ಮಾಡಿ ವಿಚಾರಣೆ ಮಾಡೋದ ಎನ್ನುವುದರ ಬಗ್ಗೆಎಸ್ ಐ ಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ

  Published by:Seema R
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು