HOME » NEWS » State » RAMESH JARKIHOLI PORN CD CASE SIT TEAM STRUCTURE OF 20 OFFICERS FOR INVESTIGATION MAK

Ramesh Jarkiholi CD Case: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ; ತನಿಖೆಗಾಗಿ 20 ಅಧಿಕಾರಿಗಳ SIT ತಂಡ ರಚನೆ

ಎಸ್ಐಟಿ ತಂಡದಲ್ಲಿ ಕಬ್ಬನ್ ಪಾರ್ಕ್ ಎಸಿಪಿ, ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್, ಸಿಸಿಬಿ ಎಸಿಪಿ, ಇನ್ಸ್‌ಪೆಕ್ಟರ್ ಗಳು, ಸೈಬರ್ ಕ್ರೈಮ್ ಪೊಲೀಸರು ಸೇರಿದಂತೆ ಒಟ್ಟು 20ಕ್ಕು ಹೆಚ್ಚು ಅಧಿಕಾರಿಗಳನ್ನು ಸಿಡಿ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿದೆ. 

news18-kannada
Updated:March 11, 2021, 3:24 PM IST
Ramesh Jarkiholi CD Case: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ; ತನಿಖೆಗಾಗಿ 20 ಅಧಿಕಾರಿಗಳ SIT ತಂಡ ರಚನೆ
ಮಾಜಿ ಸಚಿವ ರಮೇಶ್​ ಜಾರಕಿಹೊಳಿ.
  • Share this:
ಬೆಂಗಳೂರು (ಮಾರ್ಚ್​ 11); ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿದ್ದ, ಬಿಜೆಪಿ ಪ್ರಬಲ ನಾಯಕ ಸಚಿವ ರಮೇಶ್​ ಜಾರಕಿಹೊಳಿ ತಲೆದಂಡಕ್ಕೂ ಕಾರಣವಾಗಿದ್ದ, ಅವರಿದ್ದಾರೆ ಎಂದು ಹೇಳಲಾಗುತ್ತಿರುವ ಅಶ್ಲೀಲ ಸಿಡಿ ಪ್ರಕರಣದ ವಿಚಾರಣೆಗೆ ಹೊಸ ತಂಡವನ್ನು ನೇಮಕ ಮಾಡಲಾಗಿದೆ. ಹಿರಿಯ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ 20 ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಅಲ್ಲದೆ, ತನಿಖೆಯ ಸಂಪೂರ್ಣ ಹೊಣೆಯನ್ನು ಸಿಸಿಬಿ ಕ್ರೈಮ್ -2 ಡಿಸಿಪಿ ಬಿ.ಎಸ್. ಅಂಗಡಿ ಹೆಗಲಿಗೆ ಸರ್ಕಾರ ವಹಿಸುವ ಸಾಧ್ಯತೆ ಇದ್ದು, ಪ್ರಕರಣದ ಸತ್ಯಾಸತ್ಯತೆ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿದೆ. ಅಲ್ಲದೆ, ವಿರೋಧ ಪಕ್ಷಗಳೂ ಸಹ ಆಡಳಿತ ಪಕ್ಷ ಹಾಗೂ ನಾಯಕರ ವಿರುದ್ಧ ಇದೇ ವಿಚಾರವನ್ನು ಮುಂದಿಟ್ಟು ವಾಗ್ದಾಳಿ ನಡೆಸುತ್ತಿದ್ದಾರೆ. ಈ ವಿಚಾರ ವಿಧಾನಮಂಡಲ ಅಧಿವೇಶನದಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೆ, ಈ ಸ್ವತಃ ರಮೇಶ್​ ಜಾರಕಿಹೊಳಿ ಈ ವಿಡಿಯೋ ನಕಲಿ ಎಂದು ಹೇಳಿಕೆ ನೀಡಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣಕ್ಕೆ ಈ ಪ್ರಕರಣದ ಸತ್ಯವನ್ನು ಬಯಲಿಗೆ ಎಳೆಯಲು ಎಸ್​ಐಟಿ ತನಿಖೆಗೂ ನೀಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ramesh Jarkiholi – ಬೆಂಗಳೂರಿನಲ್ಲಿ ಎರಡು ಕಡೆ ಷಡ್ಯಂತ್ರ; ಜೈಲಿಗೆ ಹಾಕಿಸುವವರೆಗೂ ಬಿಡಲ್ಲ: ರಮೇಶ್ ಜಾರಕಿಹೊಳಿ

ಎಸ್ಐಟಿ ತಂಡದಲ್ಲಿ ಕಬ್ಬನ್ ಪಾರ್ಕ್ ಎಸಿಪಿ, ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್, ಸಿಸಿಬಿ ಎಸಿಪಿ, ಇನ್ಸ್‌ಪೆಕ್ಟರ್ ಗಳು, ಸೈಬರ್ ಕ್ರೈಮ್ ಪೊಲೀಸರು ಸೇರಿದಂತೆ ಒಟ್ಟು 20ಕ್ಕು ಹೆಚ್ಚು ಅಧಿಕಾರಿಗಳನ್ನು ಸಿಡಿ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿದೆ. ಎ ಮತ್ತು ಬಿ ತಂಡಗಳಾಗಿ ಎಸ್ಐಟಿ ತಂಡವನ್ನು ವಿಂಗಡಣೆ ಮಾಡಿ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Youtube Video

ಟೆಕ್ನಿಕಲ್ ಮತ್ತು ಸಿಡಿ ಬಿಡುಗಡೆ ಬಗ್ಗೆ ತನಿಖೆ ನಡೆಸಲಿರುವ ಎರಡು ತಂಡಗಳು, ಸರ್ಕಾರದ ಗೈಡ್ ಲೈನ್ಸ್ ಅನ್ವಯ ಕಾರ್ಯ ನಿರ್ವಹಿಸಲಿವೆ. ಸರ್ಕಾರದ ಗೈಡ್ ಲೈನ್ಸ್ ಬಂದ ಬಳಿಕ ಅಧಿಕೃತವಾಗಿ ಎಸ್ಐಟಿ ತಂಡ ರಚಿಸಿ ತನಿಖೆಯಾಗಲಿದೆ. ಎಸ್ಐಟಿ ಕಾರ್ಯವ್ಯಾಪ್ತಿ ಹಾಗೂ ಎಷ್ಟು ದಿನದಲ್ಲಿ ತನಿಖೆ ಪೂರ್ಣಗೊಳಿಸಬೇಕು ಹಾಗೂ ಇನ್ನಿತರ ಗೈಡ್ ಲೈನ್ಸ್ ಮೇಲೆ ತನಿಖೆ ನಡೆಯಲಿದೆ. ಇಂದು ಅಥವಾ ನಾಳೆಯೊಳಗೆ ಸರ್ಕಾರದ ಗೈಡ್ ಲೈನ್ಸ್ ಬರುವ ಸಾಧ್ಯತೆ ಇದೆ. ಆದರೆ ಎಸ್​ಐಟಿ ತಂಡ ಸಿಡಿ ರಿಲೀಸ್ ಬಗ್ಗೆ ಎಫ್ಐಆರ್ ದಾಖಲು ಮಾಡದೇ ತನಿಖೆ ನಡೆಸಲಿದೆ ಎಂದ ಹೇಳಲಾಗುತ್ತಿದೆ.
Published by: MAshok Kumar
First published: March 11, 2021, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories