• Home
  • »
  • News
  • »
  • state
  • »
  • Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ

Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

ಮರಾಠ ಅಸ್ತ್ರದ ಮೂಲಕ ಹೆಬ್ಬಾಳ್ಕರ್ ಸೋಲಿಸಲು ಪ್ಲ್ಯಾನ್ ಮಾಡಿರುವ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದ ಹಲವು ಮುಖಂಡರಿಗೆ ಗಾಳ ಹಾಕಿದ್ದಾರೆ.

  • News18 Kannada
  • Last Updated :
  • Belgaum, India
  • Share this:

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ (Belagavi Rural) ಹಳೇ ದ್ವೇಷ, ಹೊಸ ಲೆಕ್ಕಚಾರ ಆರಂಭ ಆಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ವಿರುದ್ಧ 2023ರ ಚುನಾವಣೆಯಲ್ಲಿ (Assembly Election 2023) ಸೇಡು ತೀರಿಸಿಕೊಳ್ಳಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ತಯಾರಿ ಆರಂಭ ಮಾಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡು ಮೇಲೆ ಸ್ವಲ್ಪ ಸೈಲೆಂಟ್ ಆಗಿದ್ದ ರಮೇಶ್ ಜಾರಕಿಹೊಳಿ ಇತ್ತೀಚಿಗೆ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಖಂಡರನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಭೇಟಿ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi), ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಅವರನ್ನು ಭೇಟಿ ಮಾಡಿಸಿ ಆಪ್ತರಿಗೆ ಟಿಕೆಟ್ ತರುವ ಪ್ರಯತ್ನ ಆರಂಭ ಮಾಡಿದ್ದಾರೆ.


ಇನ್ನೂ ಸಾಂಬ್ರಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮುಖಂಡರ ಜೊತೆಗೆ ಸಹ ಸಭೆಯನ್ನು ನಡೆಸಿದ್ದಾರೆ. ಇನ್ನೂ ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಟಿಫನ್ ಬಾಕ್ಸ್ ಹಂಚಿಕೆ ಕಾರ್ಯ ಸಹ ಆರಂಭವಾಗಿದೆ.


2018ರಲ್ಲಿ ಸಿಕ್ಕಿತ್ತು ಜಾರಕಿಹೊಳಿ ಬೆಂಬಲ


ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಇಬ್ಬರು ಕಳೆದ 4 ನಾಲ್ಕು ವರ್ಷಗಳಿಂದ ಬದ್ಧ ವೈರಿಗಳಾಗಿದ್ದಾರೆ. 2018ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆಬ್ಬಾಳ್ಕರ್ ಗೆಲ್ಲಲು ಜಾರಕಿಹೊಳಿ ಬೆಂಬಲ ನೀಡಿದ್ದರು.


ಇಬ್ಬರ ಕಲಹಕ್ಕೆ ಕಾರಣವಾಗಿದ್ದು PLD ಬ್ಯಾಂಕ್ ಚುನಾವಣೆ


ಇಡೀ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪರ  ಪಕ್ಷ ಸಂಘಟನೆ ಸಹ ಮಾಡಿದ್ದರು. ಪಿಎಲ್​​ಡಿ ಬ್ಯಾಂಕ್ ವಿಚಾರಕ್ಕೆ ಹೆಬ್ಬಾಳ್ಕರ್, ಜಾರಕಿಹೊಳಿ ಕಿತ್ತಾಟ ಆರಂಭಗೊಂಡು ದೊಡ್ಡ ರಾದ್ದಾಂತ ಆಗಿತ್ತು. ಇಡೀ ರಾಜ್ಯದಲ್ಲಿ ದೊಡ್ಡ  ಸಂಚಲನ ಸೃಷ್ಠಿಯಾಗಿದ್ದ ಪಿಎಲ್​ಡಿ ಬ್ಯಾಂಕ್ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ತರುವಲ್ಲಿ ಜಾರಕಿಹೊಳಿ ಯಶಸ್ವಿ ಆಗಿದ್ದರು.


ramesh jarkiholi planning to defeat laxmi hebbalkar in election csb mrq
ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಪಕ್ಷ ಸಂಘಟನೆ


ನಂತರವು ಸಹ  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನವನ್ನು ಜಾರಕಿಹೊಳಿ ಮಾಡುತ್ತಿದ್ದರು. ಚುನಾವಣೆ ಸಮೀಪ ಆಗುತ್ತಿದ್ದಂತೆ ಮತ್ತೆ ಸಂಘಟನೆ ಆರಂಭಿಸಿದ ಜಾರಕಿಹೊಳಿ ಹಳೆಯ ಸೇಡು, ಹೊಸ ಲೆಕ್ಕಚಾರ ಆರಂಭಿಸಿದ್ದಾರೆ.


ಹೆಬ್ಬಾಳ್ಕರ್ ವಿರುದ್ಧ ಮರಾಠ ಅಸ್ತ್ರ


ಮರಾಠ ಅಸ್ತ್ರದ ಮೂಲಕ ಹೆಬ್ಬಾಳ್ಕರ್ ಸೋಲಿಸಲು ಪ್ಲ್ಯಾನ್ ಮಾಡಿರುವ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದ ಹಲವು ಮುಖಂಡರಿಗೆ ಗಾಳ ಹಾಕಿದ್ದಾರೆ.


ಇದನ್ನೂ ಓದಿ:  CM Bommai: ದೆಹಲಿಯತ್ತ ಸಿಎಂ ಬೊಮ್ಮಾಯಿ; ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?


ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ ಎಂಬ ಲೆಕ್ಕಚಾರದ ನಡುವೆ ರಮೇಶ್ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಬೇಸರ ನಡುವೆ ಬದ್ಧ ವೈರಿಯ ವಿರುದ್ಧ ರಣವ್ಯೂಹ ರೆಡಿ ಮಾಡೋ ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್ ಮನ್ನೊಳ್ಕರ್ ಜತೆಗೆ ಕರೆದುಕೊಂಡು ಹೋಗಿ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಭೇಟಿ ಮಾಡಿಸಿದ್ದಾರೆ.


ಇದನ್ನೂ ಓದಿ:  Mandya Politics: ಸುಮಲತಾ ಅಂಬರೀಶ್ ಆಪ್ತ ಬಿಜೆಪಿಗೆ ಸೇರ್ಪಡೆ; ಮಂಡ್ಯ ಕೋಟೆಯಲ್ಲಿ ಕಮಲ ಅರಳಿಸಲು ಪ್ಲ್ಯಾನ್


ಬದ್ಧ ವೈರಿಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ


ಇನ್ನೂ ಕಾಂಗ್ರೆಸ್​​ನಲ್ಲಿ ಗುರುತಿಸಿಕೊಂಡಿರೋ ಇನ್ನೂ ಹಲವು ನಾಯಕರಿಗೆ ಗಾಳ ಹಾಕಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಮತದಾರರೇ ನಿರ್ಣಾಯಕರಾಗಿದ್ದು, ಸಾಂಬ್ರಾ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆಯ ಕಡೆ ಗಮನ ಹರಿಸಿ ಎಂದು ಹೇಳಿದ್ದಾರೆ.

Published by:Mahmadrafik K
First published: