ತೆರೆ ಮರೆಯಲ್ಲಿ ಆಡುತ್ತಿದ್ದ ರಮೇಶ್ ಜಾರಕಿಹೊಳಿ ಈಗ ಬಿಜೆಪಿ ಸೇರಲು ಕ್ಷಣಗಣನೆ?

ರಮೇಶ್​ ಜಾರಕಿಹೊಳಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡನೆಯಾಗದಿದ್ದರೂ ಬಿಜೆಪಿ ಬ್ಯಾನರ್​ನಲ್ಲಿ ಅವರ ಫೋಟೋ ಕಾಣಿಸಿಕೊಳ್ಳುವ ಮೂಲಕ ಶೀಘ್ರದಲ್ಲಿಯೇ ಅವರು ಬಿಜೆಪಿ ಸೇರುವುದು ಸ್ಪಷ್ಟವಾಗಿದೆ.

Seema.R | news18
Updated:May 24, 2019, 4:54 PM IST
ತೆರೆ ಮರೆಯಲ್ಲಿ ಆಡುತ್ತಿದ್ದ ರಮೇಶ್ ಜಾರಕಿಹೊಳಿ ಈಗ ಬಿಜೆಪಿ ಸೇರಲು ಕ್ಷಣಗಣನೆ?
ರಮೇಶ್​ ಜಾರಕಿಹೊಳಿ
Seema.R | news18
Updated: May 24, 2019, 4:54 PM IST
ಚಿಕ್ಕೋಡಿ (ಮೇ.24): ಬಿಜೆಪಿ ಸೇರಲು ಈಗಾಗಲೇ ಹಲವು ಪ್ರಯತ್ನ ಮಾಡಿ ಸರಿಯಾದ ಸಮಯಕ್ಕಾಗಿ ಕಾದು ಕುಳಿತಿರುವ ಶಾಸಕ ರಮೇಶ್​ ಜಾರಕಿಹೊಳಿ ಅಧಿಕೃತವಾಗಿ ಕಮಲ ಪಾಳೆಯ ಸೇರದಿದ್ದರೂ, ಪಕ್ಷದ ಬ್ಯಾನರ್​ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್​ ತೊರೆಯುವುದನ್ನು ಸ್ಪಷ್ಟಪಡಿಸಿದ್ದಾರೆ. .

ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇದೇ ವೇಳೆ ಅಸಮಾಧಾನಿಯ ಕಾಂಗ್ರೆಸ್​ ಶಾಸಕರು ಕೂಡ ಬಿಜೆಪಿಗೆ ಸಜ್ಜಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರಲ್ಲಿ ಮೊದಲು ಕೇಳಿ ಬರುತ್ತಿರುವ  ಹೆಸರು ರಮೇಶ್​ ಜಾರಕಿಹೊಳಿ. ಅಧಿಕೃತವಾಗಿ ರಮೇಶ್​ ಇನ್ನೂ ಬಿಜೆಪಿಗೆ ಸೇರದಿದ್ದರೂ ಈಗಾಗಲೇ ಅವರು ಕಮಲದ ಕಡೆ ವಾಲಿದ್ದಾರೆ ಎಂಬುದು ಮೈತ್ರಿ ನಾಯಕರಿಗೂ ಸ್ಪಷ್ಟವಾಗಿತ್ತು.

ಇನ್ನು ಚಿಕ್ಕೋಡಿಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಗೆಲುವಿಗೆ ರಮೇಶ್​ ಪರೋಕ್ಷವಾಗಿ ಕೆಲಸ ಮಾಡಿ, ಅವರಿಗೆ ಗೆಲುವಿನ ದಡ ಮುಟ್ಟಿಸಲು ಸಹಾಯ ಮಾಡಿದ್ದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಗೆಲುವಿನ ಸಂಭ್ರಮ ವ್ಯಕ್ತಪಡಿಸಿ ಬಿಜೆಪಿಗೆ ಹಾಕಿರುವ  ಬ್ಯಾನರ್​ನಲ್ಲಿ ರಮೇಶ್​ ಜಾರಕಿಹೊಳಿ ಫೋಟೋ ಹಾಕುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಲಾಗಿದೆ.

ಬಿಜೆಪಿಗೆ ಅಧಿಕೃತವಾಗಿ ರಮೇಶ್​ ಜಾರಕಿಹೊಳಿ ಸೇರ್ಪಡೆಯಾಗದಿದ್ದರೂ  ನಿಪ್ಪಾಣಿಯ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆ ಬ್ಯಾನರ್​ನಲ್ಲಿ ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳುವ ಮೂಲಕ ಶೀಘ್ರದಲ್ಲಿಯೇ ಅವರು ಬಿಜೆಪಿ ಸೇರುವುದು ಖಚಿತವಾಗಿದೆ.

ಮಂತ್ರಿ ಸ್ಥಾನ ತಪ್ಪಿದ ಬಳಿಕ ಮೈತ್ರಿ ಸರ್ಕಾರದ ವಿರುದ್ಧ ಮುನಿಸು ತೋರಿದ್ದ ಶಾಸಕ ರಮೇಶ್​ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದವು. ಅಲ್ಲದೇ ಮುಂಬೈಗೆ ತೆರಳಿದ್ದು ಜಾರಕಿಹೊಳಿ ಟೀಮ್​ ಆಪರೇಷನ್​ ಕಮಲಕ್ಕೆ ಒಳಗಾಗಲಿದ್ದಾರೆ. ಸರ್ಕಾರ ಬೀಳಿಸಲು ಬಿಜೆಪಿ ಸಿದ್ದವಾಗಿದೆ

ಇದನ್ನು ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಆಲೋಚನೆಯಿಂದ ಹಿಂದೆ ಸರಿದ ವಿಶ್ವನಾಥ್
Loading...

ಬಿಜೆಪಿ ಸೇರುವ ಕುರಿತು ಅಧಿಕೃತವಾಗಿ ಮಾಹಿತಿ ಹೊರ ಬೀಳದಿದ್ದರೂ, ರಮೇಶ್​ ಕಮಲ ನಾಯಕರ ಪರವಿರುವುದು ಮೈತ್ರಿ ನಾಯಕರ ಅರಿವಿಗೂ ಬಂದಿತು. ಲೋಕಸಭಾ ಚುನಾವಣೆ ಫಲಿತಾಂಶದವರೆಗೂ ಕಾದು ನೋಡುವ ತಂತ್ರ ಮಾಡಿದ್ದ ಅವರು, ತಮ್ಮ ಜೊತೆ ತಮ್ಮ ತಂಡವನ್ನೇ ಕರೆದುಕೊಂಡು ಹೋಗುವುದಾಗಿಯೂ ತಿಳಿಸಿದ್ದರು. ಈ ಮೂಲಕ ಮೈತ್ರಿ ಸರ್ಕಾರ ಬೀಳಿಸಲು ಸಜ್ಜಾಗಿದ್ದರು.

ರಾಜ್ಯದ 25 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ಈಗಾಗಲೇ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ಬೀಳಲಿದೆ ಎಂದಿರುವ ಬಿಜೆಪಿ ನಾಯಕರು ಶೀಘ್ರದಲ್ಲಿಯೇ ಅಸಮಾಧಾನಿತ ಕಾಂಗ್ರೆಸ್ಸಿಗರು ನಮ್ಮ ಪಕ್ಷಕ್ಕೆ ಬರತ್ತಾರೆ ಎಂಬು ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'
First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...