Siddaramaiah: ರಮೇಶ್ ಜಾರಕಿಹೊಳಿ ನನಗೆ ಒಳ್ಳೆ ಫ್ರೆಂಡ್, ಅವರ ಮೇಲೆ ದ್ವೇಷವಿಲ್ಲ; ಸಿದ್ದರಾಮಯ್ಯ

Siddaramaiah: ರಮೇಶ್ ಜಾರಕಿಹೊಳಿ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ, ಅವರು ನನ್ನ ಗುಡ್ ಫ್ರೆಂಡ್. ಮಹಿಳೆ ದೂರು ಕೊಟ್ಟ ಮೇಲೆ ಏನು ಮಾಡುತ್ತಾರೋ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
    ಬೆಂಗಳೂರು (ಮಾ. 26): ನನ್ನ ಮೇಲೆ ರೇಪ್ ಕೇಸ್ ಹಾಕಬೇಕೆಂಬ ಸಿದ್ದರಾಮಯ್ಯನವರ ಹೇಳಿಕೆಯಿಂದ ಭಾರೀ ನೋವಾಗಿದೆ. ಸಿದ್ದರಾಮಯ್ಯನವರ ಮೇಲೆ ನನಗಿದ್ದ ಗೌರವ ಕಡಿಮೆಯಾಗಿದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾನು ವಿರೋಧ ಪಕ್ಷದ ನಾಯಕ. ನಾನು ಸತ್ಯವನ್ನು ಹೇಳಬೇಕಾಗುತ್ತದೆ. ಅದು ಬಿಟ್ಟು ರಮೇಶ್ ಜಾರಕಿಹೊಳಿ ಆಣತಿಯಂತೆ ಮಾತನಾಡಲು ಆಗುವುದಿಲ್ಲ. ರಮೇಶ್ ಜಾರಕಿಹೊಳಿ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವರು ಎಂದಿಗೂ ನನಗೆ ಒಳ್ಳೆಯ ಫ್ರೆಂಡ್ ಎಂದಿದ್ದಾರೆ.

    ಮಹಿಳೆಯ ವಿಡಿಯೋ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ನಾನು ಹೇಳಿದ್ದೆ. ನನ್ನನ್ನು ಬಳಸಿಕೊಂಡಿದ್ದಾರೆ ಎಂಬ ಪದವನ್ನ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಳು. ಆ ಆಧಾರದ ಮೇಲೆ ನಾನು 376 ಅಡಿಯಲ್ಲಿ ರೇಪ್ ಕೇಸ್ ದಾಖಲಿಸಲು ಹೇಳಿದ್ದೆ. ಈಗ ಮಹಿಳೆ ದೂರು ಕೊಟ್ಟ ಮೇಲೆ ಏನು ಮಾಡುತ್ತಾರೋ ನೋಡೋಣ. ರಮೇಶ್ ಜಾರಕಿಹೊಳಿ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ, ರಮೇಶ್ ಜಾರಕಿಹೊಳಿ ನನ್ನ ಗುಡ್ ಫ್ರೆಂಡ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ರಮೇಶ್ ಜಾರಕಿಹೊಳಿ ಸೆಕ್ಸ್​ ಸಿಡಿ ವಿಡಿಯೋದಲ್ಲಿದ್ದ ಯುವತಿಯ ಮೂರನೇ ವಿಡಿಯೋ ರಿಲೀಸ್ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಜವಾಗಿ ಏನು ನಡೆದಿದೆ ಎಂದು ಯುವತಿ ಹೇಳಿಕೆ ಕೊಡಲಿ. ಆಕೆ ಅಜ್ಞಾತ ಸ್ಥಳದಿಂದ ಯುವತಿ ಹೊರಬರಲಿ. ಅಜ್ಞಾತವಾಸದಲ್ಲಿ ಇರುವ ಬದಲು ನಡೆದಿದ್ದು ಏನು? ಸತ್ಯ ಏನು? ಎಂದು ಹೇಳಲಿ. ತನಿಖೆಗೆ ಸಹಕರಿಸಲಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಿಡಿ ಪ್ರಕರಣ: ಯುವತಿಯಿಂದ 3ನೇ ವಿಡಿಯೋ ಬಿಡುಗಡೆ; ದೂರು ದಾಖಲಿಸುವುದಾಗಿ ಹೇಳಿಕೆ

    ರಮೇಶ್ ಜಾರಕಿಹೊಳಿ ಸಿಡಿ‌ ಪ್ರಕರಣದಲ್ಲಿ ಮೊದಲು ಸಂತ್ರಸ್ತ ಯುವತಿ ಭದ್ರತೆ ಕೇಳಿದ್ದರು. ಈಗ ಅವರ ತಂದೆ ತಾಯಿಗೆ ಭದ್ರತೆ ಬೇಕೆಂದು ಕೇಳುತ್ತಿದ್ದಾರೆ. ಅಂದರೆ, ಸರ್ಕಾರ ಇಲ್ಲಿಯವರೆಗೆ ಆಕೆಗೆ ಭದ್ರತೆ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಹೇಳಿರುವ ಮಹಾ ನಾಯಕ ಯಾರು ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮಹಾ ನಾಯಕರು ಬಹಳಷ್ಟು ಜನ ಇದ್ದಾರೆ‌. ಬಿಜೆಪಿಯಲ್ಲೂ ಇದ್ದಾರೆ,‌ ನಮ್ಮ ಪಕ್ಷದಲ್ಲಿಯೂ ಬಹಳ ನಾಯಕರು ಇದ್ದಾರೆ‌. ಮಹಾ ನಾಯಕಿಯೂ ಇದ್ದಾರೆ ಎಂದು ಮಹಾ ನಾಯಕ ಹಾಗೂ ನಾಯಕರುಗಳ ಬಗೆಗಿನ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

    ಯಡಿಯೂರಪ್ಪನವರ ನೆತ್ತಿ ಮೇಲೆ ಕತ್ತಿ ತೂಗಾಡುತ್ತಿದೆ. ಯಡಿಯೂರಪ್ಪ ಅವರು ತಮ್ಮ ಜೊತೆಗೆ ಎಲ್ಲಾ ಶಾಸಕರೂ ಇದ್ದಾರೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ರಾಜ್ಯದ ಸಿಎಂ ಬದಲಾವಣೆ ಆಗುತ್ತಾರೆ ಎಂದು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳುತ್ತಿದ್ದರು. ನನಗೂ ಆ ಬಗ್ಗೆ ಮಾಹಿತಿ ಇತ್ತು. ಆಗ ಆಗಲಿಲ್ಲ, ಆದರೀಗ ಈಗ ನಾನು ಅದನ್ನು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

    ಬಸವ ಕಲ್ಯಾಣದಲ್ಲಿ ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿರೋದು ರಾಜಕೀಯ ಹುನ್ನಾರ. ಬಿಜೆಪಿ ಜೊತೆ ಸೇರಿಕೊಂಡು ಜೆಡಿಎಸ್ ಹುನ್ನಾರ ನಡೆಸಿದೆ. ನಾವು ಉಳಿದೆರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಬಸವ ಕಲ್ಯಾಣದಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅದೂ ಸಹ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದರ ಅರ್ಥ ಏನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
    Published by:Sushma Chakre
    First published: