ಬೆಳಗಾವಿ: ವಿಧಾನಸಭೆ ಚುನಾವಣೆ (Karnataka Election 2023) ಹೊತ್ತಲ್ಲೇ ಮತ್ತೆ ಸಿ.ಡಿ ಸಮರ (CD Case) ಜೋರಾಗಿದ್ದು, ಸಿ.ಡಿಗಾಗಿ ಬರೋಬ್ಬರಿ 40 ಕೋಟಿ ರೂಪಾಯಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಕೇಸ್ ದಾಖಲಿಸಿದ ವಿಚಾರವಾಗಿ ಬೆಳಗಾವಿಯ (Belagavi) ಖಾಸಗಿ ಹೋಟೆಲ್ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ನಾನು ಆರನೇ ಅವಧಿ ಶಾಸಕ, ನನಗೆ ಕಾನೂನು ಅರಿವು ಇದೆ. ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ರಾಮೀಣ ಶಾಸಕರು ಓಪನ್ ಆಗಿಯೇ ಹಂಚುತ್ತಿದ್ದಾರೆ ಅದು ಆಮಿಷ ಅಲ್ವಾ? ಅಂತಹ ಸಣ್ಣ ರಾಜಕಾರಣ ಮಾಡಬಾರದು. ಡಿಕೆ ಶಿವಕುಮಾರ್ಗೆ ರಮೇಶ್ ಜಾರಕಿಹೊಳಿ ಬಗ್ಗೆ ಹೆದರಿಕೆ ಇದೆಯಲ್ಲಾ ಬಹಳ ಸಂತೋಷ. ನನ್ನ ಬಗ್ಗೆ ಇಷ್ಟು ಹೆದರಿಕೆ ಇದೆ ಎಂದರೆ ಅಮಿತ್ ಶಾ, ಮೋದಿ ಅವರ ಬಗ್ಗೆ ಎಷ್ಟು ಹೆದರಿಕೆ ಇರಬಹುದು.
ಇದನ್ನೂ ಓದಿ: Tipu Sultan: ಶಿವಮೊಗ್ಗ ಪಾಲಿಕೆಯಲ್ಲಿ ಟಿಪ್ಪು ಫೋಟೋ ವಿವಾದ; ಹಿಂದೂ ಪರ ಸಂಘಟನೆ ಎಚ್ಚರಿಕೆ ಬೆನ್ನಲ್ಲೇ ಫೋಟೋ ತೆರವು!
ಕಳೆದ ಬಾರಿ ನಾನು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾಗ ನನ್ನ ಮಾತು ಕೇಳಿ ವೋಟ್ ಹಾಕಿದ್ದಾರೆ. ಈಗಿನ ಶಾಸಕರು ತಮ್ಮ ಅಧಿಕಾರದ ದರ್ಪದಿಂದ ಬೆಂಗಳೂರು, ದೆಹಲಿ ಓಡಾಟದಲ್ಲಿ ಜನರನ್ನ ಮರೆತಿದ್ದಾರೆ. ಆರು ಸಾವಿರದಿಂದ ಹತ್ತು ಸಾವಿರ ಕೋಟಿ ಖರ್ಚು ಆಗಲಿ ಅಂತ ಬೇರೆ ಉದ್ದೇಶಕ್ಕೆ ಹೇಳಿದ್ದೀನಿ. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕೊಡುವುದಾಗಿ ಹೇಳಿದ್ದೇನೆ.
ಕಾಂಗ್ರೆಸ್ ನಾಯಕರು ಕೊಟ್ಟಿದ್ದು ಆಮಿಷ ಅಲ್ವಾ?
ಅವರು ಉಚಿತ ಕರೆಂಟ್ ಕೊಡ್ತೇನಿ ಅಂದಿದ್ದು ಆಮಿಷ ಅಲ್ವಾ? ಅಷ್ಟು ಕೆಳ ಮಟ್ಟಕ್ಕೆ ಹೋಗಬಾರದು ಅಂತಾ ನಾವು ಕೇಸ್ ಕೊಟ್ಟಿಲ್ಲ. ನನ್ನ ಒಬ್ಬನೇ ಮೇಲೆ ಕೇಸ್ ಮಾಡಬಹುದಿತ್ತು, ಮುಖ್ಯಮಂತ್ರಿ ಮೇಲೆ ಯಾಕೆ? ಬೆಳಗಾವಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ಗೆ ಬೇರೆ ಕ್ಷೇತ್ರ ಕಾಣಿಸುತ್ತಿಲ್ವಾ? ನಾನು ಹೇಳಿದ ಹೇಳಿಕೆ ಟ್ವಿಸ್ಟ್ ಆಗಿದೆ ನಾನು ಅಭಿವೃದ್ಧಿಗಾಗಿ ಹಣ ಕೊಡ್ತೇನಿ ಅಂದಿದ್ದೇನೆ. ನಾನು ವೋಟ್ಗೆ ಹಣ ಕೊಡ್ತೇನಿ ಅಂದಿಲ್ಲ ಎಂದರು.
ಸಿಡಿ ಕೇಸ್ ಸಿಬಿಐಗೆ ವಹಿಸಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹ
ಚುನಾವಣಾ ಆಯೋಗ ಯಾವಾಗ ಬರುತ್ತೆ? ನೀತಿ ಸಂಹಿತೆ ಜಾರಿಯಾದ ಬಳಿಕ, ಅಷ್ಟು ಜ್ಞಾನ ಇಲ್ಲ ಅವರಿಗೆ. ಕುಣಿಗಲ್ ನಲ್ಲಿ ಸ್ಥಳೀಯ ಶಾಸಕರನ್ನ ಅಲ್ಲಿನ ಜನ ಓಡಿಸಿದ್ದಾರೆ. ಇದೇ ಡಿಕೆ ಶಿವಕುಮಾರ್ ಗ್ರೂಪ್ ಇದೇ ಅಲ್ಲಿ. ಇಲ್ಲಿ ಕೇಸ್ ಮಾಡು ಎಂದರೇ ಮಾಡಿಸುತ್ತೇವೆ. ಒಬ್ಬ ಬಡವರಿಗೆ ಹಂಚುತ್ತಿದ್ದಾರೆ ಅವರಿಗೆ ಮುಟ್ಟಲಿ ಅಂತ ಸುಮ್ಮನಿದ್ದೇವೆ.
ಭ್ರಷ್ಟಾಚಾರದಲ್ಲಿ ಡಿಕೆ ಶಿವಕುಮಾರ್ ಮೈತುಂಬ ತುಂಬಿಕೊಂಡಿದ್ದಾನೆ. ದಿನ ನಿತ್ಯ ಸಿಬಿಐಗೆ ಹೋಗುತ್ತಾನೆ ಬರ್ತಾನೆ. ಯಾವ ರೀತಿ ಯೋಚನೆ ಮಾಡ್ತಿದ್ದಾನೆ ಗೊತ್ತಿಲ್ಲ, ಒಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಆದವರು. ಒಂದು ಸಣ್ಣ ಕ್ಷೇತ್ರಕ್ಕೆ ಸೀಮಿತ ಆಗ್ತಾನೆ ಎಂದರೆ ನಾವೇನೂ ಮಾಡಲು ಆಗಲ್ಲ. ಕಾನೂನು ರೀತಿ ಕ್ರಮವನ್ನ ನಾವು ತೆಗೆದುಕೊಳ್ಳುತ್ತೇವೆ. ಮೊದಲ ಬಾರಿಗೆ ಕೇಸ್ ಆಗಿದ್ದು, ಈ ಬಗ್ಗೆ ವರಿಷ್ಠ ಜೊತೆಗೆ ಮಾತನಾಡುತ್ತೇನೆ ಎಂದರು.
ಡಿ.ಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ
ಯಾವುದೇ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ವೈಯಕ್ತಿಕ ವಿಚಾರ ಇನ್ನೂ ಮುಂದೆ ಮಾತನಾಡಬೇಕಾಗುತ್ತೆ. ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನ ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಸಿ.ಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಅಮಿತ್ ಶಾ ಅವರಿಗೆ ಮಾತಾಡಿದ್ದೇನೆ, ಸಿ.ಡಿ ಕೇಸ್ನಲ್ಲಿ ಮಹಾನಾಯಕನ ಕೈವಾಡ ಇದೆ ಅನ್ನೋದಕ್ಕೆ ಸಾಕ್ಷಿ ಇವೆ. ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ. ಸ್ವತಃ ಅವನೇ ಮಾತಾಡಿದ್ದಾನೆತ, ರಮೇಶ್ ಜಾರಕಿಹೊಳಿ ನನ್ನ ಮಿತ್ರ. ಅವನಿಗೆ ಮಾಡಿದ್ದೇನೆ ಸಿ.ಡಿ ಇಟ್ಟು ಕೆಲಸ ಮಾಡ್ತೇನಿ ಅಂತಾ ಆತ ಮಾತಾಡಿರುವ ಸಂಭಾಷಣೆ ಇದೆ.
90ರಿಂದ 100 ಸಿ.ಡಿ ಸಿಕ್ಕಿದೆ
ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಸಿ.ಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಅಂತಾ ಹೇಳಿದ್ದೇನೆ. ಸಿ.ಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ 90ರಿಂದ 110 ಸಿ.ಡಿ ಆತನ ಮನೆಯಲ್ಲಿ ಸಿಕ್ಕಿವೆ. ಇಡೀ ರಾಜ್ಯದ ಜನರ ಸಿ.ಡಿ ಸಿಕ್ಕಿವೆ, ಇದರ ಹಿಂದೆ ಮಹಾನಾಯಕನ ಕುತಂತ್ರದಿಂದ ಆಗಿವೆ. ಸಿಬಿಐ ವಿಚಾರಣೆ ಆದರೆ ಇವು ಹೊರಕ್ಕೆ ಬರುತ್ತೆ.
ಆರೋಪಿ ಮನೆ ರೇಡ್ ಮಾಡಿದ ಸಂದರ್ಭದಲ್ಲಿ ದಾಳಿ ಮಾಡಿದ ಅಧಿಕಾರಿಯ ಸಿ.ಡಿಯೇ ಅಲ್ಲಿ ಸಿಕ್ಕಿದೆ. ಅದನ್ನ ಮುಚ್ಚಿಟ್ಟಿದ್ದಾರೆ, ಹೀಗಾಗಿ ಇದನ್ನ ಸಿಬಿಐಗೆ ಕೊಡಬೇಕು. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಪೂರ್ತಿ ಕಳಚಬೇಕು, ಅವನಿಗೆ ಬುದ್ಧಿ ಕಲಿಸಬೇಕು. ನಾನು ಒಬ್ಬನೇ ಸಂಕಷ್ಟ ಅನುಭವಿಸಿದ್ದು, ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನ ಬ್ಲ್ಯಾಕ್ ಮೇಲ್ ಮಾಡಲು ರೆಡಿಯಾಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ