HOME » NEWS » State » RAMESH JARKIHOLI FALLOWERS ATTEMPT JUMP IN FIRE IN GOKAK LCTV SESR

Gokak: ಬೆಂಕಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ ಜಾರಕಿಹೊಳಿ ಅಭಿಮಾನಿ; ಬೂದಿ ಮುಚ್ಚಿದ ಕೆಂಡದಂತಿದೆ ಗೋಕಾಕ್​ ಸ್ಥಿತಿ

ಗಣಪತಿ ಎಂಬ ಅಭಿಮಾನಿ ಉರಿಯುವ ಬೆಂಕಿಗೆ ಹಾರಿದ್ದು,  ಪೊಲೀಸರ ಸಮಯ ಪ್ರಜ್ಞೆಯಿಂದ ಸಾಹುಕಾರ್ ಅಭಿಮಾನಿಗಳು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.

news18-kannada
Updated:March 5, 2021, 6:37 PM IST
Gokak: ಬೆಂಕಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ ಜಾರಕಿಹೊಳಿ ಅಭಿಮಾನಿ; ಬೂದಿ ಮುಚ್ಚಿದ ಕೆಂಡದಂತಿದೆ ಗೋಕಾಕ್​ ಸ್ಥಿತಿ
ಗಣಪತಿ ಎಂಬ ಅಭಿಮಾನಿ ಉರಿಯುವ ಬೆಂಕಿಗೆ ಹಾರಿದ್ದು,  ಪೊಲೀಸರ ಸಮಯ ಪ್ರಜ್ಞೆಯಿಂದ ಸಾಹುಕಾರ್ ಅಭಿಮಾನಿಗಳು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
  • Share this:
ಬೆಳಗಾವಿ (ಮಾ. 5):  ರಮೇಶ್ ಜಾರಕಿಹೊಳಿ‌ ರಾಸಲೀಲೆ ಸಿಡಿ ಪ್ರಕರಣದಿಂದ ಗೋಕಾಕ್​ ಬೆಂಕಿ ಕೆಂಡದಂತಾಗಿದೆ. ನಮ್ಮ ಸಾಹುಕಾರ್ ನಿರ್ದೋಷಿ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮೂವರು ಅಭಿಮಾನಿಗಳು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಅದರಲ್ಲೂ ಗಣಪತಿ ಎಂಬ ಅಭಿಮಾನಿ ಉರಿಯುವ ಬೆಂಕಿಗೆ ಹಾರಿದ್ದು,  ಪೊಲೀಸರ ಸಮಯ ಪ್ರಜ್ಞೆಯಿಂದ ಸಾಹುಕಾರ್ ಅಭಿಮಾನಿಗಳು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಇದರಿಂದಾಗಿ ಕಳೆದ ಮೂರು ದಿನಗಳಿಂದ ಗೋಕಾಕ ಪಟ್ಟಣ ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಇಂದು ಸಹ ರಮೇಶ್ ಜಾರಕಿಹೊಳಿ‌ ಪರ ಬೆಂಬಲಿಗರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಹಾಗೂ ಪಾಮಲ ದಿನ್ನಿಯಲ್ಲಿ ಬೆಳಗ್ಗೆ ಪ್ರತಿಭಟನೆ ಮೆರವಣಿಗೆ ಆರಂಭಿಸಿದರು. ಮೊದಲಿಗೆ ಪಾಮಲದಿನ್ನಿ ಕ್ರಾಸ್​ನಲ್ಲಿ ರಸ್ತೆ ತಡೆ ನಡೆಸುತ್ತಿದ್ದಾಗ ಇಬ್ಬರೂ ಅಭಿಮಾನಿಗಳು ಮೈಮೇಲೆ ಡಿಸೇಲ್ ಸುರಿದು ಕೊಂಡು ಆತ್ಮಹತ್ಯೆ ಗೆ ಯತ್ನಸಿದರು. ಟಾಯರ್​ಗೆ ಹಚ್ಚಿದ್ದ ಬೆಂಕಿ ತಾಗಿದ್ರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು.

ಇನ್ನೂ ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಗೋಕಾಕ ದ ಬಸವೇಶ್ವರ ಸರ್ಕಲ್ ತಲುಪಿತು. ಈ ವೇಳೆ ಪ್ರತಿಭಟನಾ ಕಾರರು ಟಾಯರ್​ಗೆ ಬೆಂಕಿ ಹಚ್ಚಿ ದಿನೇಶ್​​ ಕಲ್ಲಹಳ್ಳಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಈ ಮಧ್ಯೆ ರಮೇಶ್ ಜಾರಕಿಹೊಳಿ‌ ಅಭಿಮಾನಿ ಗಣಪತಿ ಹೊತ್ತಿಉರಿಯುತ್ತದ್ದ ಟಾಯರ್​ಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ್ದನು. ಬೆಂಕಿ ತೀವ್ರತೆ ಎಷ್ಟಿತ್ತು ಎಂದರೆ ಗಣಪತಿ ಬಲಗಾಲು ಸುಟ್ಟುಗಾಯವಾಯ್ತು.

ಇನ್ನೂ ಮೊನ್ನೆ ಕೂಡಾ ಪ್ರತಿಭಟನೆ ವೇಳೆ ಅಭಿಮಾನಿಗಳು ಸೀಮೆ ಎಣ್ಣೆ ಸೇರಿದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದರು. ಕೆಲ ಕೀಡಿಗೇಡಿಗಳು ಬಸ್ ಗೆ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಇಂದು ಗೋಕಾಕ್​ನಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಎರಡು ಪ್ರತ್ಯೇಕ ಆತ್ಮಹತ್ಯೆ ಗೆ ಯತ್ನಿಸಿದ ಘಟನೆಯಲ್ಲಿ ಪೊಲೀಸರು ಸಮಯ ಪ್ರಜ್ಞೆ ಯಿಂದ ಆಗಬಹುದಾದ ದೊಡ್ಡ ದುರಂತವನ್ನ ತಪ್ಪಿಸಿದರು. ಆತ್ಮಹತ್ಯೆ ಗೆ ಯತ್ನಿಸಿದ ಮೂರು ಅಭಿಮಾನಿಗಳನ್ನ ಗೋಕಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನು ಓದಿ: ಪುರುಷ ಪ್ರಧಾನ ಕಂಬಳ ಕ್ರೀಡೆಯಲ್ಲಿ ಗಮನ ಸೆಳೆದ 11ರ ಪೋರಿ ಚೈತ್ರಾ

ಇನ್ನೂ ಬೆಂಕಿ ಗೆ ಹಾರಿದ ಗಣಪತಿ ಮಾಧ್ಯಮಗಳಿಗೆ ಮಾತನಾಡಿ, ನಮ್ಮ ಸಾಹುಕಾರ್ ಹಾಗಿಲ್ಲ. ನಮ್ಮ ಸಾಹುಕಾರಗೆ ಅನ್ಯಾಯವಾಗಿದೆ. ಅದಕ್ಕಾಗಿ ಆತ್ಮಹತ್ಯೆ ಗೆ ಯತ್ನಿಸಿದೆ. ನಮ್ಮ ಸಾಹುಕಾರ್ ಗೆ ಅನ್ಯಾಯ ಮಾಡಿದವರು ನನ್ನಂತೆ ಸುಟ್ಟಕೊಂಡು ಸಾಯಿಲಿ ಎಂದು ಆಕ್ರೋಶ ಹೊರಹಾಕಿದನು.

ಇನ್ನೂ ಅಭಿಮಾನಿಗಳು ಹುಚ್ಚಾಟದಿಂದ ರಮೇಶ್ ಜಾರಕಿಹೊಳಿ‌ ಮನಸ್ಸಿಗೆ ನೋವಾಗಿದೆ. ಯಾರು ಕೂಡಾ ಹಿಂಸಾತ್ಮಕ ಮತ್ತು ಅಹಿತಕರ ಘಟನೆಗಳನ್ನು ಎಸಗದಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಗೋಕಾಕ ನಲ್ಲಿ ಜಾರಕಿಹೊಳಿ‌ ಬೆಂಬಲಿಗರು ಸುದ್ದಿಗೋಷ್ಠಿ ಮಾಡಿ ಮನವಿ ಮಾಡಿದರು.

ಒಟ್ಟಿನಲ್ಲಿ ಸಾಹುಕಾರ್ ಸಿಡಿ ಪುರಾಣ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದರೆ, ಇತ್ತ ಗೋಕಾಕ ನಲ್ಲಿ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳು ಪದೇ ಪದೇ ಪ್ರತಿಭಟನೆ ವೇಳೆ ಆತ್ಮಹತ್ಯೆ ಗೆ ಯತ್ನಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ‌ ಅಭಿಮಾನಿಗಳ ಹುಚ್ಚಾಟ ಪೊಲೀಸರ ನಿದ್ದೆಗೆಡಿಸಿದೆ.
Published by: Seema R
First published: March 5, 2021, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories