ಶೋ ಪೀಸ್​​ಗಳ ಮಾತು ಕೇಳಿದರೆ ಕಾಂಗ್ರೆಸ್ ಹಾಳಾಗಲಿದೆ; ರಮೇಶ್​ ಜಾರಕಿ ಹೊಳಿ

news18
Updated:September 4, 2018, 8:38 PM IST
ಶೋ ಪೀಸ್​​ಗಳ ಮಾತು ಕೇಳಿದರೆ ಕಾಂಗ್ರೆಸ್ ಹಾಳಾಗಲಿದೆ; ರಮೇಶ್​ ಜಾರಕಿ ಹೊಳಿ
news18
Updated: September 4, 2018, 8:38 PM IST
 ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ (ಸೆ.4): ಬೆಂಗಳೂರಿನ ವಿಷಯದಲ್ಲಿ ನಾವು ಹಸ್ತಕ್ಷೇಪವನ್ನು ಮಾಡುವುದಿಲ್ಲ. ಅದರಂತೆ ನಮ್ಮ ಜಿಲ್ಲೆಯ ವಿಚಾರಕ್ಕೆ ಬೇರೆಯವರು ಹಸ್ತಕ್ಷೇಪ ಮಾಡುವುದು ನಮಗೆ ಬೇಕಿಲ್ಲ ಎಂದು ಸಚಿವ ರಮೇಶ್​ ಜಾರಕಿಹೊಳಿ ಡಿಕೆ.ಶಿವಕುಮಾರ್​ ಅವರಿಗೆ ಖಡಕ್​ ವಾರ್ನಿಂಗ್ ನೀಡಿದ್ದಾರೆ.

 

ಸಮಸ್ಯೆ ಇದ್ದು, ನಾವು‌ ಕರೆದಾಗ ಯಾರು ಬೇಕಾದರೂ ಬರಲಿ. ಡಿ.ಕೆ.ಶಿವಕುಮಾರ್​​ ಇರಲಿ, ಬೇರೆ ಯಾರಾದರೂ ಇರಲಿ ನಾವು ಸುಮ್ಮನಿರುತ್ತೇವೆ. ಆದರೆ ಈ ಬಗ್ಗೆ ಈಗಾಗಲೇ  ಚರ್ಚೆಯಾಗಿದ್ದು, ಸಮಸ್ಯೆ ಇತ್ಯರ್ಥವಾಗಿದೆ. ಆದರೆ ಶೋ ಪೀಸ್​ಗಳ ಮಾತು ಕೇಳಿ ವಿಷಯವನ್ನು ದೊಡ್ಡದಾಗಿ ಮಾಡಲಾಗುತ್ತಿದೆ. ಇದೇ ರೀತಿ ಮಾತು ಕೇಳಿದರೆ ಕಾಂಗ್ರೆಸ್​ ಹಾಳಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಪಿಎಲ್​ಡಿ ಬ್ಯಾಂಕ್ ಚುನಾವಣೆ ಸಂಬಂಧ ಈಗಾಗಲೇ ಸ್ಥಳೀಯ ಶಾಸಕರು ಮಾತುಕತೆ ನಡೆಸಿ ಸಮಸ್ಯೆ ‌ಇತ್ಯರ್ಥಪಡಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಚುನಾವಣೆ ಬಗ್ಗೆ ಮಾತನಾಡಿಲ್ಲ. ಸತೀಶ್ ಜಾರಕಿಹೊಳಿ‌ ಈ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿದ್ದಾರೆ ಎಂದರು.

ರಾಜಕೀಯದಲ್ಲಿ ವಾಗ್ವಾದ ಅನ್ನೋದು ಸಹಜ. ರಾಜಕೀಯದಲ್ಲಿ ಒಬ್ಬರದ್ದು ಒಂದೊಂದು ಸ್ವಭಾವ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತ ಸಹಜ. ಚರ್ಚೆಯನ್ನೇ ಭಿನ್ನಮತ ಅಂದ್ರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದರು.

ಪಿಎಲ್​ಡಿ ಬ್ಯಾಂಕ್​, ತಾ.ಪಂ, ಜಿ.ಪಂ ಸೇರಿದಂತೆ  ನನ್ನ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್​ ನಾಯಕರ ಮುಂದೆ ಲಕ್ಷ್ಮೀ ಹೆಬ್ಬಾಳಕರ್​ ಆರೋಪಿಸಿದ್ದರು.
Loading...

ಜಾರಕಿಹೊಳಿ, ಹೆಬ್ಬಾಳ್ಕರ್​ ಜಗಳವನ್ನು ಬಗೆಹರಿಸಲು ಮೊನ್ನೆ ನಡೆದ ಕಾಂಗ್ರೆಸ್​ ಸಭೆಯಲ್ಲಿ ಇತ್ಯರ್ಥ ಮಾಡಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ , ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಹರಸಾಹಸ ಪಟ್ಟರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...