ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವನ್ನು ಸಿದ್ದರಾಮಯ್ಯ ಮುಂದೆ ಬಿಚ್ಚಿಟ್ಟ ಸಚಿವ ರಮೇಶ್​ ಜಾರಕಿಹೊಳಿ

ಡಿನ್ನರ್​ ರಾಜಕೀಯ ಬಳಿಕ ಜಾರಕಿಹೊಳಿಯೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ ಮನವಿ ಮಾಡಿದ್ಧಾರೆ.

Seema.R | news18
Updated:December 20, 2018, 12:27 PM IST
ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವನ್ನು ಸಿದ್ದರಾಮಯ್ಯ ಮುಂದೆ ಬಿಚ್ಚಿಟ್ಟ ಸಚಿವ ರಮೇಶ್​ ಜಾರಕಿಹೊಳಿ
ಸಿದ್ದರಾಮಯ್ಯ -ರಮೇಶ್​ ಜಾರಕಿಹೊಳಿ
  • News18
  • Last Updated: December 20, 2018, 12:27 PM IST
  • Share this:
ಚಿದಾನಂದ ಪಟೇಲ್​

ಬೆಳಗಾವಿ (ಡಿ.20): ಚಳಿಗಾಲ ಅಧಿವೇಶನದ ನಡೆಯುತ್ತಿರುವ ವೇಳೆ ಬಿಜೆಪಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದಲ್ಲಿ ಆಪರೇಷನ್​ ಕಮಲ ಮತ್ತೆ ಆರಂಭವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿತು. ಈ ಕುರಿತು ಈಗ ರಮೇಶ್​ ಜಾರಕಿಹೊಳಿ ಅವರೇ ತಾವು ಔತಣಕೂಟಕ್ಕೆ ಹೋಗಿದ್ದರ ಉದ್ದೇಶವನ್ನು ಸಿದ್ದರಾಮಯ್ಯ ಅವರ ಮುಂದೆ ಹೇಳಿದ್ದಾರೆ.

ನಗರದ ಸರ್ಕೀಟ್​ ಹೌಸ್​ನಲ್ಲಿ ಇಂದು ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ ಜಾರಕಿಹೊಳಿಗೆ ಪಕ್ಷ ತೊರೆಯದಂತೆ ಮಾಜಿ ಸಿಎಂ ಮನವಿ ಮಾಡಿದರು. ಈ ವೇಳೆ ತಾವು ಬಿಜೆಪಿ ಔತಣಕೂಟಕ್ಕೆ ಏಕೆ ಹೋದೆವು ಎಂದು ಸತೀಶ್ ಅವರು ಸಿದ್ದರಾಮಯ್ಯ ಮುಂದೆ ಹೇಳಿದ್ದಾರೆ.

ನಮ್ಮ ಜಿಲ್ಲೆಯವರಾದ ಮಹಾಂತೇಶ್ ಕವಟಗಿಮಠ್ ಎಲ್ಲರನ್ನೂ ಕರೆದಿದ್ರು, ಹಾಗೆ ಹೋಗಿದ್ದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ತಂತ್ರಗಾರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಪಕ್ಷದ ವಿರುದ್ಧ ಮುನಿಸು ತೋರಿರುವ ರಮೇಶ್​ ಮುಂಬೈನಲ್ಲಿ ರೆಸಾರ್ಟ್​ ರಾಜಕಾರಣಕ್ಕೆ ಮುಂದಾಗಿದ್ದರು ಕೂಡ. ಬೆಳಗಾವಿ ಜಿಲ್ಲೆಗೆ ಡಿಕೆ ಶಿವಕುಮಾರ್​ ಹಸ್ತಕ್ಷೇಪ, ಪಕ್ಷದಲ್ಲಿ ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ವಿರುದ್ಧ ಆಂತರಿಕ ಬಂಡಾಯ ಸಾರಿದ್ದಾರೆ. ಈಗ ಅವರು ಬಿಜೆಪಿ ನಾಯಕರ ಪಾಳಯದಲ್ಲಿ ಕಾಣಿಸಿಕೊಂಡಿರುವುದು ಹಿರಿಯ ಮುಖಂಡರಲ್ಲಿ ಆತಂಕ ಸೃಷ್ಟಿಸಿದೆ.

ಇದನ್ನು ಓದಿ: ಬಿಜೆಪಿ ಔತಣಕೂಟದಲ್ಲಿ ಕಾಣಿಸಿಕೊಂಡ 'ಕೈ' ನಾಯಕ'; ಮತ್ತೆ ಶುರುವಾಗುತ್ತಾ ಆಪರೇಷನ್​ ಕಮಲ?

ಇದೇ ವೇಳೆ ಬಳ್ಳಾರಿಯ ಶಾಸಕ ನಾಗೇಂದ್ರ ಹಾಗೂ ಜಯಮಾಲಾ ಅವರನ್ನು ಕೂಡ ಬಿಜೆಪಿ ಔತಣಕೂಟಕ್ಕೆ ಕರೆದಿದ್ದು, ಇವರೊಂದಿಗೆ ಕೂಡ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು.ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಜಯಮಾಲಾ ಕೈ ತಪ್ಪಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಅವರಿಗೆ ಗಾಳ ಹಾಕಿದೆ ಎಂಬ ಮಾತು ಕೇಳಿ ಬರುತ್ತಿದೆ. ಜಯಮಾಲ ಕೂಡ ಬಿಜೆಪಿ ಔತಣಕೂಟದಲ್ಲಿ ಭಾಗಿಯಾಗಿದ್ದರು. ಆದರೆ ನಾನು ಔತಣಕ್ಕೂ ಕೂಟಕ್ಕೆ ಹೋಗಿದ್ದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಮುಂದೆ ಜಯಮಾಲ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

First published: December 20, 2018, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading