Ramesh Jarkiholi CD Case: ಕೊನೆಗೂ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರಾದ ಸಿಡಿ ಯುವತಿ; ರಮೇಶ್​ ಜಾರಕಿಹೊಳಿ ಬಂಧನ ಸಾಧ್ಯತೆ?

ಒಂದು ವೇಳೆ ಆಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹೇಳಿಕೆ ದಾಖಲಿಸಿದರೆ, ಎಸ್​ಐಟಿ ಅಧಿಕಾರಿಗಳು ಸೆಕ್ಷನ್ 377 ಅತ್ಯಾಚಾರ ಪ್ರಕರಣ ದಾಖಲಿಸಿ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವುದು ಅನಿವಾರ್ಯವಾಗುತ್ತದೆ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

 • Share this:
  ಬೆಂಗಳೂರು (ಮಾರ್ಚ್​ 30); ರಮೇಶ್ ಜಾರಕಿಹೊಳಿ ಅವರ ಸೆಕ್ಸ್​ ಸಿಡಿ ಬಿಡುಗಡೆಯಾದ ದಿನದಿಂದ ಆ ವಿಡಿಯೋದಲ್ಲಿದ್ದ ಯುವತಿ ತಲೆಮರೆಸಿಕೊಂಡಿದ್ದರು. ಅಜ್ಞಾತವಾಗಿದ್ದುಕೊಂಡೇ 5 ವಿಡಿಯೋ ಸಂದೇಶಗಳನ್ನು ಕಳುಹಿಸಿದ್ದ ಸಂತ್ರಸ್ಥ ಯುವತಿ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ವಕೀಲರ ತಂಡದ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಯುವತಿಗೆ ನಾಲ್ಕು ಕಾರುಗಳು ಬೆಂಗಾವಲು ಭದ್ರತೆ ಒದಗಿಸಿವೆ. ಭದ್ರತೆಯೊಂದಿಗೆ ಬೆಂಗಳೂರಿಗೆ ಆಗಮಿಸಿರುವ ಯುವತಿ ಗುರುನಾನಕ್ ಭವನದಲ್ಲಿರೋ ಕೋರ್ಟ್ ಹಾಲ್ ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದಾರೆ. ಆದರೆ, ತಮ್ಮ ಹೇಳಿಕೆಯನ್ನು ದಾಖಲಿಸಲು ಅವರು ಒಂದು ಗಂಟೆಗಳ ಕಾಲ ಅವಧಿ ಕೇಳಿದ್ದಾರೆ ಎನ್ನಲಾಗಿದೆ. ಒಂದು ಗಂಟೆಯ ನಂತರ ರಮೇಶ್​ ಜಾರಕಿಹೊಳಿ ಕುರಿತು ಯುವತಿ ತನ್ನ ಮಹತ್ವದ ಹೇಳಿಕೆಯನ್ನು ದಾಖಲಿಸಲಿದ್ದಾಳೆ ಎನ್ನಲಾಗಿದೆ.

  ಯುವತಿಯ ಹೇಳಿಕೆಯನ್ನು ದಾಖಲಿಸಲು ಈಗಾಗಲೇ ಟೈಪಿಸ್ಟ್ ಹಾಗೂ ವಿಡಿಯೋ ಚಿತ್ರೀಕರಣ ಕಾರ್ಯ ಆರಂಭವಾಗಿದೆ. ಕ್ಯಾಮೆರಾ ಪ್ರೊಸಿಡರ್​ ಜೊತೆಗೆ ಮ್ಯಾಜಿಸ್ಟ್ರೇಟ್​ ಯುವತಿಯ ಹೇಳಿಕೆಯನ್ನು ಪಡೆಯಲಿದ್ದಾರೆ. ಸೆಕ್ಷನ್​ 164 ಪ್ರಕಾರ ಒಮ್ಮೆ ಸ್ಟೇಟ್ ಮೆಂಟ್ ನೀಡಿದ್ರೆ ಅದನ್ನು ಮತ್ತೆ ಬದಲಾಯಿಸಲು ಆಗೋದಿಲ್ಲ ಎನ್ನಲಾಗಿದೆ.

  ಹೀಗಾಗಿ ಯುವತಿ ರಮೇಶ್​ ಜಾರಕಿಹೊಳಿ ವಿರುದ್ಧ ಎಂತಹಾ ಹೇಳಿಕೆ ನೀಡಲಿದ್ದಾರೆ? ಈ ಹಿಂದೆ ವಿಡಿಯೋ ಸಂದೇಶದಲ್ಲಿ ಆಕೆ ನೀಡಿದ ಹೇಳಿಕೆಯನ್ನೇ ದಾಖಲಿಸಲಿದ್ದಾಳ? ಎಂಬ ಪ್ರಶ್ನೆಗಳು ಇದೀಗ ಮನೆ ಮಾಡಿದೆ. ಒಂದು ವೇಳೆ ಆಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹೇಳಿಕೆ ದಾಖಲಿಸಿದರೆ, ಎಸ್​ಐಟಿ ಅಧಿಕಾರಿಗಳು ಸೆಕ್ಷನ್ 377 ಅತ್ಯಾಚಾರ ಪ್ರಕರಣ ದಾಖಲಿಸಿ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಇಂದಿನ ಯುವತಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ.

  ಇದನ್ನೂ ಓದಿ: ಅಜ್ಞಾತಸ್ಥಳದಿಂದ ಬೆಂಗಳೂರಿಗೆ ಬಂದಿಳಿದ ಸಿಡಿ ಯುವತಿ; ಕೆಲವೇ ಕ್ಷಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರು

  ಈ ನಡುವೆ ಕೋರ್ಟ್​ನಲ್ಲಿ ಸಿಡಿ ಯುವತಿಗೆ ಕಾಂಗ್ರೆಸ್ ನಾಯಕರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಇದರ ನಡುವೆ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಕೂಡ ಕೇಳಿಬಂದಿತ್ತು. ಡಿಕೆ ಶಿವಕುಮಾರ್ ಅವರೇ ನಮ್ಮ ಮಗಳನ್ನು ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ ನಡೆಸಿದ್ದಾರೆ. ಅವರೇ ಆಕೆಯನ್ನು ಬಚ್ಚಿಟ್ಟಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದರು.

  ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಈ ಪ್ರಕರಣದಲ್ಲಿ ಸಂತ್ರಸ್ಥ ಯುವತಿ ಇಂದು ಕೋರ್ಟ್​ ಮುಂದೆ ಏನು ಹೇಳಿಕೆ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: