HOME » NEWS » State » RAMESH JARKIHOLI CD CASE VICTIM LADY SAYS SHE WILL FILE COMPLAINT IN HER THIRD VIDEO STATEMENT SNVS

ಸಿಡಿ ಪ್ರಕರಣ: ಯುವತಿಯಿಂದ 3ನೇ ವಿಡಿಯೋ ಬಿಡುಗಡೆ; ದೂರು ದಾಖಲಿಸುವುದಾಗಿ ಹೇಳಿಕೆ

ಕಳೆದ 24 ದಿನಗಳಿಂದ ಕ್ಷಣಕ್ಷಣವೂ ಜೀವ ಭಯದಲ್ಲಿದ್ದೇನೆ. ಈಗ ಅನೇಕ ಸಂಘಟನೆಗಳು ನನ್ನ ಸಹಾಯಕ್ಕೆ ಮುಂದೆ ಬಂದಿವೆ. ಆ ಧೈರ್ಯದಿಂದ ಈಗ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದು ಸಿಡಿ ಸಂತ್ರಸ್ತೆಯು ತನ್ನ ಮೂರನೇ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

news18-kannada
Updated:March 26, 2021, 12:12 PM IST
ಸಿಡಿ ಪ್ರಕರಣ: ಯುವತಿಯಿಂದ 3ನೇ ವಿಡಿಯೋ ಬಿಡುಗಡೆ; ದೂರು ದಾಖಲಿಸುವುದಾಗಿ ಹೇಳಿಕೆ
ಸಿಡಿ ಪ್ಕಕರಣದ ಯುವತಿ
  • Share this:
ಬೆಂಗಳೂರು(ಮಾ. 26): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಹಾಗೂ ಅದರ ರೂವಾರಿಗಳೆನ್ನಲಾದ ಇಬ್ಬರು ಪತ್ರಕರ್ತರನ್ನು ಪತ್ತೆ ಮಾಡಲು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಪೊಲೀಸರು ಕಾಯುತ್ತಿರುವಂತೆಯೇ ಆ ಯುವತಿ 3ನೇ ಬಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಅವರು ಇವತ್ತು ರಿಲೀಸ್ ಆದ ವಿಡಿಯೋದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ದೂರು ದಾಖಲಾದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಂಧನದ ಭೀತಿ ಎದುರಾಗಬಹುದು.

ಕಳೆದ 24 ದಿನಗಳಿಂದ ತಾನು ಕ್ಷಣಕ್ಷಣವೂ ಜೀವಭಯದಲ್ಲಿ ಒದ್ದಾಡುತ್ತಿದ್ದೇನೆ. ಈಗ ಹಲವು ಸಂಘಟನೆಗಳವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೀಗ ಧೈರ್ಯ ಬಂದಿದೆ. ನಮ್ಮ ಲಾಯರ್ ಜಗದೀಶ್ ಅವರ ಮುಖಾಂತರ ನಾನು ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಈ ಯುವತಿ ಇವತ್ತಿನ ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ವೇಳೆ, ರಮೇಶ್ ಜಾರಕಿಹೊಳಿ ಅವರಿಂದ ತನ್ನ ಮೇಲೆ ಅತ್ಯಾಚಾರ ಅಥವಾ ಅತ್ಯಾಚಾರಯತ್ನ ಆರೋಪಗಳನ್ನ ಮಾಡಿದರೆ ಮಾಜಿ ಸಚಿವರನ್ನ ಬಂಧಿಸುವ ಸಾಧ್ಯತೆ ಇಲ್ಲದಿಲ್ಲ.

ಯುವತಿಯ ಮೂರನೇ ವಿಡಿಯೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಆ ಹೆಣ್ಮಗಳು ಮೊದಲು ಅಜ್ಞಾತ ಸ್ಥಳದಿಂದ ಹೊರಬಂದು ಎಸ್​ಐಟಿ ಪೊಲೀಸರ ಮುಂದೆ ನಿಜವಾಗಿ ನಡೆದದ್ದೇನು ಎಂದು ಹೇಳಿಕೆ ಕೊಡಲಿ. ಆಕೆ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಆಕೆಗೆ ಭದ್ರತೆ ಕೊಡಬೇಕು ಎಂದು ಹೇಳಿದ್ಧಾರೆ. ನನ್ನನ್ನ ರಮೇಶ್ ಜಾರಕಿಹೊಳಿ ಬಳಸಿಕೊಂಡಿದ್ದಾರೆ ಎಂದು ಆ ಹುಡುಗಿ ಹೇಳಿದ್ಧಾಳೆ. ಅದರ ಆಧಾರದ ಮೇಲೆ 376ರ ಅಡಿಯಲ್ಲಿ ರೇಪ್ ಕೇಸ್ ಹಾಕಬಹುದು ಎಂದು ಹೇಳಿದ್ದೆ. ಈಗ ಯುವತಿ ಮೊದಲು ದೂರು ಕೊಡಲಿ. ಆ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: Positive News - ಹೀಗೂ ಶಿಕ್ಷಕರಿರುತ್ತಾರಾ..! ಮನೆ ಮನೆಯಲ್ಲೂ ಬ್ಲ್ಯಾಕ್ ಬೋರ್ಡ್ ಇಟ್ಟು ಪಾಠ ಮಾಡುತ್ತಿರುವ ಟೀಚರ್ಸ್

ಈ ಬಗ್ಗೆ ನ್ಯೂಸ್18 ಜೊತೆ ಮಾತನಾಡಿದ ವಕೀಲ ಜಗದೀಶ್ ಅವರು, ತಮ್ಮನ್ನು ನಂಬಿ ಯುವತಿ ತಮ್ಮ ಸ್ವಂತ ಕೈಬರಹದಲ್ಲಿ ಲಿಖಿತ ದೂರು ಬರೆದು ಕೊಟ್ಟಿದ್ದಾರೆ. ಅದನ್ನು ನಗರ ಪೊಲೀಸ್ ಕಮಿಷನರ್ ಅವರಿಗೆ ತಲುಪಿಸುತ್ತೇನೆ. ಅದನ್ನು ಸ್ವೀಕರಿಸಿ ಈ ಪ್ರಕರಣದಲ್ಲಿ ಯಡಿಯೂರಪ್ಪ ಸರ್ಕಾರ ನ್ಯಾಯ ಕೊಡಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಹಳ್ಳಿ ಅವರು ಮೊದಲು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಬಯಲಿಗೆ ತಂದಿದ್ದರು. ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ಧಾರೆ ಎಂದು ಆರೋಪಿಸಿದ್ದ ದಿನೇಶ್ ಕಲ್ಲಹಳ್ಳಿ, ಆ ದೃಶ್ಯಗಳಿರುವ ಸಿಡಿಯನ್ನ ಬಿಡುಗಡೆ ಮಾಡಿದ್ದರು. ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರೂ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿರಲಿಲ್ಲ. ಯುವತಿ ನೇರವಾಗಿ ದೂರು ಕೊಟ್ಟಿಲ್ಲ ಎಂಬುದು ಪೊಲೀಸರು ನೀಡಿದ ಕಾರಣವಾಗಿತ್ತು. ಅದಾದ ಬಳಿಕ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ದೂರನ್ನು ಹಿಂಪಡೆದುಕೊಂಡರು. ಅದೇ ವೇಳೆ, ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ಪತ್ರ ಬರೆದಿದ್ದರು. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಸ್​ಐಟಿಗೆ ತನಿಖೆಯ ಹೊಣೆ ಕೊಡಲಾಗಿದೆ. ಈ ಸಿಡಿಯಲ್ಲಿರುವ ಯುವತಿ ಹಾಗೂ ಇದನ್ನು ರೂಪಿಸಿದರೆನ್ನಲಾದ ಇಬ್ಬರು ಪತ್ರಕರ್ತರನ್ನ ಪತ್ತೆ ಮಾಡಲು ಎಸ್​ಐಟಿಯ ವಿವಿಧ ತಂಡಗಳು ಕಾರ್ಯೋನ್ಮುಖವಾಗಿವೆ. ಆದರೆ ಈ ಮೂವರ ಸುಳಿವು ಮಾತ್ರ ಇನ್ನೂವರೆಗೆ ಸಿಕ್ಕಿಲ್ಲ. ಎಸ್​ಐಟಿ ತಂಡಗಳು ಬೇರೆ ಬೇರೆ ರೀತಿಯಲ್ಲಿ ಸುಳಿವು ಹುಡುವ ಪ್ರಯತ್ನ ಮುಂದುವರಿಸಿವೆ. ಯುವತಿಗೆ ಸಂಬಂಧಿಸಿದ ನಾಲ್ವರು ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿಕೊಳ್ಳಲಾಗಿದೆ. ಸಿಡಿಯಲ್ಲಿರುವ ಯುವತಿ ಜೊತೆ ಗೋವಾಕ್ಕೆ ತೆರಳಿದ್ದ ಆಕೆಯ ಸ್ನೇಹಿತ; ಗೋವಾದಲ್ಲಿ ಇವರಿಬ್ಬರಿಗೆ ಆಶ್ರಯ ನೀಡಿದ್ದ ಹೋಟೆಲ್​ನ ಮಾಲಕಿ; ಆರ್ ಟಿ ನಗರದಲ್ಲಿ ಯುವತಿಗೆ ಬಾಡಿಗೆಗೆ ಮನೆ ನೀಡಿದ್ದ ಮಾಲೀಕ; ಗೋವಾಕ್ಕೆ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬಸ್ ಬುಕ್ ಮಾಡಿದ್ದ ಟ್ರಾವೆಲ್ಸ್​ನ ಮಾಲೀಕ – ಈ ನಾಲ್ವರ ಹೇಳಿಕೆಗಳನ್ನ ಪಡೆಯಲಾಗಿದೆ.
Published by: Vijayasarthy SN
First published: March 26, 2021, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories