HOME » NEWS » State » RAMESH JARKIHOLI CD CASE SIT TO SUBMIT ITS REPORT TO HIGH COURT TODAY GVTV SNVS

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತನಿಖಾ ವರದಿ ಇಂದು ಹೈಕೋರ್ಟ್​ಗೆ ಸಲ್ಲಿಕೆ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ವಿಶೇಷ ತನಿಖಾ ತಂಡ ತನ್ನ ವರದಿಯನ್ನು ಇಂದು ಸಲ್ಲಿಸಲಿದೆ. ನಿನ್ನೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿ ತನಿಖಾ ವರದಿ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ.

news18-kannada
Updated:April 17, 2021, 8:31 AM IST
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತನಿಖಾ ವರದಿ ಇಂದು ಹೈಕೋರ್ಟ್​ಗೆ ಸಲ್ಲಿಕೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು (ಏ. 17): ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ನಿನ್ನೆ ಎರಡು ಹಂತದಲ್ಲಿ ಸಭೆ ನಡೆಸಿದರು. ಒಂದು ಕಡೆ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆ 144 ಸೆಕ್ಷನ್ ಜಾರಿ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿಯಿಂದ ಹೈಕೋರ್ಟ್​ಗೆ ವರದಿ ಸಲ್ಲಿಸಲು ಆಗಿರುವ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.  ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ಎಸ್​ಐಟಿ ತಂಡ ಇಂದು ತನಿಖಾ ವರದಿ ಕೊಡಬೇಕಿದೆ. ಈ ನಡುವೆ ಎಸ್​ಐಟಿ ತಂಡದ ತನಿಖಾ ರಿಪೋರ್ಟ್ ಇವತ್ತು ಸಲ್ಲಿಸಲು ಸಿದ್ದತೆ ಮಾಡಿಕೊಂಡಿದೆ. ಹೀಗಾಗಿ ನಿನ್ನೆ ತನಿಖಾ ವರದಿ ಸಲ್ಲಿಸುವ ವಿಚಾರವಾಗಿ ಕಮಿಷನರ್ ಕಮಲ್ ಪಂಥ್ ಎಸ್​ಐಟಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದರು.

ವರದಿ ಸಲ್ಲಿಸಲು ಯಾವ ರೀತಿ ಸಿದ್ದತೆ ಮಾಡಿಕೊಳ್ಳಲಾಗಿದೆ. ವರದಿಯಲ್ಲಿ ಇದುವರೆಗಿನ ತನಿಖೆಯ ಮಾಹಿತಿ ಹಾಗೂ ಸಂತ್ರಸ್ತ ಯುವತಿ ಕೊಟ್ಟಿರುವ ಹೇಳಿಕೆ ಜೊತೆಗೆ ಸಾಕ್ಷ್ಯಗಳ ಬಗ್ಗೆ ಏನು ಉಲ್ಲೇಖ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸ್ ಆಯುಕ್ತರು ಕಲೆಹಾಕಿದರು. ಪ್ರಮುಖ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದು, ಇಬ್ಬರಿಗಾಗಿ ಹುಡುಕಾಟದ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಲು ಸೂಚಿಸಿದರು. ತನಿಖಾ ವರದಿ ಸಿದ್ದತೆ ಬಗ್ಗೆ ತನಿಖಾಧಿಕಾರಿಗಳು ಮನವರಿಕೆ ಮಾಡಿದರು. ತನಿಖೆಯ ಬಗ್ಗೆ ಸಂತ್ರಸ್ತೆ ಪರ ವಕೀಲರಿಂದ ಸಾಕಷ್ಟು ಆರೋಪಗಳು ಬರುತ್ತಿದ್ದು ಆ ಬಗ್ಗೆಯೂ ಕಮಲ್ ಪಂತ್ ಚರ್ಚಿಸಿದರು.

ನಿನ್ನೆ ಸಂಜೆ ರಮೇಶ್ ಜಾರಕಿಹೊಳಿ ಅವರಿಗೆ ಎಸ್​ಐಟಿ ನೋಟೀಸ್ ಜಾರಿ ಮಾಡಿದೆ. ಮಂಗಳವಾರ, ಅಂದರೆ ಏಪ್ರಿಲ್ 20ರಂದು ಎಸ್​ಐಟಿ ಕಚೇರಿಗೆ ಹಾಜರಾಗಬೇಕು‌. ಸಂತ್ರಸ್ತ ಯುವತಿ ಗಂಭೀರ ಆರೋಪಗಳನ್ನು ಮಾಡಿದ್ದು, ವಿಚಾರಣೆ ಮಾಡಬೇಕೆಂದು ಈ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಸಾಕ್ಷ್ಯಗಳನ್ನ ಕೊಡುವ ಬಗ್ಗೆ ಈ ಹಿಂದೆ ಹೇಳಿಕೆ‌ ನೀಡಿದ್ದು, ಅದನ್ನೂ ಸಹ ನೀಡುವಂತೆ ಮಾಜಿ ಸಚಿವರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: All Party Meeting: ಸಿಎಂಗೆ ಕೋವಿಡ್​ ಹಿನ್ನಲೆ ಸರ್ವಪಕ್ಷ ಸಭೆ ಮುಂದೂಡಿಕೆ

ಇನ್ನು ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ ಹಿನ್ನೆಲೆ 144 ಜಾರಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗ್ತಿದೆ.ಈ ನಡುವೆ 144 ಸೆಕ್ಷನ್ ಜಾರಿಯ ಇತಿಮಿತಿಗಳ ಬಗ್ಗೆ ನಗರ ಪೊಲೀಸ್ ಕಮಲ್ ಪಂಥ್ ಅವರು ನಿನ್ನೆ ಮತ್ತೊಂದು ಸಭೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. 144 ಸೆಕ್ಷನ್ ಜಾರಿಗೆ ತರಲು ಸಾಧ್ಯವೇ..? ಆಗ ಪೊಲೀಸರ ನಿಯೋಜನೆ ಸಾಧ್ಯವೇ..? ಜಾರಿಗೆ ತಂದ್ರೆ ಅದರ ಸಾಧಕ ಬಾಧಕಗಳೇನು ಎಂಬುದರ ಕುರಿತು ಚರ್ಚಿಸಿದರು.

ಇದೇ ವೇಳೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ತೆರೆದು ಸೆಕ್ಷನ್ 144 ಜಾರಿಗೆ ತರೋದು ಕಷ್ಟವಾಗುತ್ತೆ. ಈಗಾಗಲೇ ನೈಟ್ ಕರ್ಫ್ಯೂ ಕಠಿಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟು ನಿಷೇದಾಜ್ಞೆ ತರುವುದು ಕಷ್ಟ ಎಂದು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಯ ಬಗ್ಗೆ ನಗರ ಪೊಲೀಸ್ ಇಲಾಖೆ ಇಂದು ಸರ್ಕಾರಕ್ಕೆ ವರದಿ ನೀಡಲಿದೆ. ನಿಷೇಧಾಜ್ಞೆಯ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಲಿದ್ದು, ಮುಂದಿನ ಕ್ರಮದ ಬಗ್ಗೆ ಸಲಹೆಯನ್ನೂ ನೀಡಲಿದೆ.

ಇನ್ನು ತನಿಖಾ ರಿಪೋರ್ಟ್ ತಲುಪಿಸಿದ ಬಳಿಕ ಹೈ ಕೋರ್ಟ್ ಏನು ಸೂಚನೆ ನೀಡುತ್ತೋ ಅದರ ಆಧಾರವಾಗಿ ಇವತ್ತು ಮತ್ತೊಮ್ಮೆ ವಿಶೇಷ ತನಿಖಾ ತಂಡ ಚರ್ಚೆ ನಡೆಸಲಿದೆ. ಮುಂದಿನ ತನಿಖಾ ಕಾರ್ಯಾಚರಣೆ ಬಗ್ಗೆಯೂ ಹಿರಿಯ ಅಧಿಕಾರಿಗಳು ಸೂಚಿಸಲಿದ್ದಾರೆ.ವರದಿ: ಗಂಗಾಧರ ವಾಗಟ
Published by: Vijayasarthy SN
First published: April 17, 2021, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories