Ramesh Jarkiholi CD Case: ಸಿಡಿ ಯುವತಿಗೆ ಮೂರನೇ ಬಾರಿ ನೊಟೀಸ್​ ಜಾರಿ; ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ

ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಘಟನೆಯನ್ನು ವಿರೋಧಿಸಿದ್ದರಲ್ಲದೆ, ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ನಡುವೆ ಯುವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ರಮೇಶ್​ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

  • Share this:
    ಬೆಂಗಳೂರು (ಮಾರ್ಚ್​ 29); ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್​ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ತನಗೆ ಜೀವ ಬೆದರಿಕೆ ಇದೆ ಎಂದು ಯುವತಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಳು. ತನಗೂ ತನ್ನ ಕುಟುಂಬಕ್ಕೂ ಸೂಕ್ತ ರಕ್ಷಣೆ ನೀಡಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿದ್ದಳು. ಅಲ್ಲದೆ, ವಿಡಿಯೋ ಮೂಲಕವೇ ತನಗೆ ರಮೇಶ್​ ಜಾರಕಿಹೊಳಿ ಅವರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದ ಯುವತಿ ತನ್ನ ವಕೀಲ ಜಗದೀಶ್​ ಮೂಲಕ ದೂರನ್ನೂ ಸಹ ದಾಖಲಿಸಿದ್ದಳು. ಆದರೆ, ಎಸ್​ಐಟಿ ಅಧಿಕಾರಿಗಳು ಎರಡು ಬಾರಿ ನೊಟೀಸ್​ ಜಾರಿ ಮಾಡಿದ್ದರೂ ಸಹ ಖುದ್ದು ತನಿಖೆಗೆ ಮಾತ್ರ ಹಾಜರಾಗಿರಲಿಲ್ಲ. ಈ ನಡುವೆ ರಮೇಶ್​ ಜಾರಕಿಹೊಳಿ ಬಂಧನಕ್ಕೆ ವಿರೋಧ ಪಕ್ಷಗಳಿಂದ ಒತ್ತಡವೂ ಹೆಚ್ಚಿದೆ. ಆದರೆ ಯುವತಿಯ ಲಿಖಿತ ಹೇಳಿಕೆ ಇಲ್ಲದೆ ರಮೇಶ್​ ಜಾರಕಿಹೊಳಿ ಅವರ ಬಂಧನ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಎಸ್​ಐಟಿ ಪೊಲೀಸರು ವಕೀಲ ಜಗದೀಶ್​ ಮೂಲಕ ಯುವತಿಗೆ ಮೂರನೇ ಬಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೆ, ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    ಈ ನಡುವೆ ಯವತಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, "ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ತನಗೆ ಪ್ರಾಣ ಭಯ ಇದೆ ಎಂದು ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ?" ಎಂದು ಪ್ರಶ್ನಿಸಿದ್ದರು.

    ಇನ್ನೂ ಈ ಸಿಡಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರೇ ಬಿಡುಗಡೆ ಮಾಡಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ಆರೋಪಿಸಿದ್ದರಲ್ಲದೆ, ಡಿಕೆಶಿ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದರು. ಅಲ್ಲದೆ, ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರು ಡಿಕೆಶಿ ಕಾರಿನ ಮೇಲೆ ದಾಳಿಯನ್ನೂ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

    ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್​ಡೌನ್, ನೈಟ್ ಕರ್ಫ್ಯೂ ಜಾರಿ ಇಲ್ಲ; ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟನೆ

    ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಘಟನೆಯನ್ನು ವಿರೋಧಿಸಿದ್ದರಲ್ಲದೆ, ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ನಡುವೆ ಯುವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ರಮೇಶ್​ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇನ್ನೂ ಒಂದು ವೇಳೆ ಯುವತಿ ಎಸ್​ಐಟಿ ಅಧಿಕಾರಿಗಳ ಎದುರು ಹಾಜರಾಗಿ ರಮೇಶ್​ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿದರೆ, ಸೆಕ್ಷನ್ 377 ಅಡಿಯಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಜೈಲು ಪಾಲಾಗುವುದು ಖಚಿತ. ಹೀಗಾಗಿ ಎಸ್​ಐಟಿ ಅಧಿಕಾರಿಗಳ ನೊಟೀಸ್​ ಸೂಚನೆಯಂತೆ ನಾಳೆ ಬೆಳಗ್ಗೆ ಸಂತ್ರಸ್ತ ಸಿಡಿ ಯುವತಿ ಎಸ್​ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗುತ್ತಾರ? ಅಥವಾ ಮತ್ತೊಂದು ಹೊಸ ವಿಡಿಯೋ ಬಿಡುಗಡೆ ಮಾಡುತ್ತಾರ? ಎಂಬುದನ್ನು ಕಾದುನೋಡಬೇಕಿದೆ.
    Published by:MAshok Kumar
    First published: