Ramesh Jarkiholi: ಹತ್ತು ವಿಡಿಯೋ ಬಿಟ್ಟರೂ ನಾನು ಹೆದರೋದಿಲ್ಲ, ಜಾಮೀನು ಪಡೆಯೋದಿಲ್ಲ; ಸಿಡಿ ಯುವತಿ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ

Ramesh Jarkiholi: ಆ ಯುವತಿ ಇನ್ನು ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ಸಮಾಜದೆದುರು ಬೆತ್ತಲೆ ಫೋಟೋ ಪ್ರದರ್ಶನ ಮಾಡಿದವಳಿಗೆ ಈ ವಿಷಯವೆಲ್ಲ ದೊಡ್ಡದಲ್ಲ. ಅದಕ್ಕೆಲ್ಲ ನಾನು ಹೆದರುವುದೂ ಇಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ರಮೇಶ್​ ಜಾರಕಿಹೊಳಿ.

ರಮೇಶ್​ ಜಾರಕಿಹೊಳಿ.

  • Share this:
    ಬೆಂಗಳೂರು (ಮಾ. 26): ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋದ ಯುವತಿ ಇನ್ನೂ ಎಸ್​ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ. ಅಜ್ಞಾತ ಸ್ಥಳದಲ್ಲಿರುವ ಆಕೆ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ಆ ಯುವತಿ ಇನ್ನು ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ಸಮಾಜದೆದುರು ಬೆತ್ತಲೆ ಫೋಟೋ ಪ್ರದರ್ಶನ ಮಾಡಿದವಳಿಗೆ ಈ ವಿಷಯವೆಲ್ಲ ದೊಡ್ಡದಲ್ಲ. ಅದಕ್ಕೆಲ್ಲ ನಾನು ಹೆದರುವುದೂ ಇಲ್ಲ ಎಂದಿದ್ದಾರೆ.

    ಇಂದು ತಾನೇ ಖುದ್ದಾಗಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಬರೆಯುತ್ತಿರುವ ಫೋಟೋಗಳನ್ನು ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಹಂಚಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕ್ರೋಶ ಹೊರಹಾಕಿರುವ ರಮೇಶ್ ಜಾರಕಿಹೊಳಿ, ಆಕೆ ದೂರು ನೀಡುವುದಿದ್ದರೆ ಇಷ್ಟು ದಿನ ಏನು ಮಾಡುತ್ತಿದ್ದಳು? ತನ್ನ ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಅವಳು ವಕೀಲರ ಮೂಲಕ ಅವಳು ದೂರು ನೀಡಲಿ. ನಮಗೂ ವಕೀಲರಿದ್ದಾರೆ, ಅವರ ಭೇಟಿಗೆ ತೆರಳುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ನಾನು ಜಾಮೀನು ಪಡೆಯುವುದಿಲ್ಲ. ನಾನು ಈಗ ವಕೀಲರನ್ನು ಭೇಟಿಯಾಗಲು ಹೊರಟಿದ್ದೇನೆ. ನಾನು ಯಾಕೆ ಹೆದರಲಿ? ಎಂದು ಹೇಳಿದ್ದಾರೆ.

    ಇಂತಹ 10 ವಿಡಿಯೋ ಹರಿಬಿಟ್ಟರೂ ನಾನು ಹೆದರುವುದಿಲ್ಲ. ಆಕೆ ದೂರು ಕೊಡೋ ಹಾಗಿದ್ದರೆ ಮೊದಲೇ ನೀಡಬೇಕಿತ್ತು. ಈಗ ಎಲ್ಲೋ ಕೂತು ಕಂಪ್ಲೇಂಟ್ ಕೊಡುತ್ತಿದ್ದಾಳೆ. ನಾನು ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ನಮ್ಮ ವಕೀಲರನ್ನು ಭೇಟಿಯಾದ ನಂತರ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

    ಯುವತಿಯಿಂದ ವಿಡಿಯೋ ಬಿಡುಗಡೆ ಬೆನ್ನಲ್ಲೇ ಮನೆಯಿಂದ‌ ಕಾಲ್ಕಿತ್ತ ರಮೇಶ್ ಜಾರಕಿಹೊಳಿ ವಕೀಲರ ಭೇಟಿ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಯುವತಿ ತಮ್ಮ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಅವರು ಇವತ್ತು ರಿಲೀಸ್ ಆದ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಕಳೆದ 24 ದಿನಗಳಿಂದ ತಾನು ಕ್ಷಣಕ್ಷಣವೂ ಜೀವಭಯದಲ್ಲಿ ಒದ್ದಾಡುತ್ತಿದ್ದೇನೆ. ಈಗ ಹಲವು ಸಂಘಟನೆಗಳವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೀಗ ಧೈರ್ಯ ಬಂದಿದೆ. ನಮ್ಮ ಲಾಯರ್ ಜಗದೀಶ್ ಅವರ ಮುಖಾಂತರ ನಾನು ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಈ ಯುವತಿ ಇವತ್ತಿನ ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
    Published by:Sushma Chakre
    First published: