ಬೆಳಗಾವಿ: ಸಚಿವ ಸ್ಥಾನ ನೀಡದ ಕಾರಣ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ವಿರುದ್ಧ ಮುನಿಸಿಕೊಂಡು ಸದನಕ್ಕೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು, ಮುಖ್ಯಮಂತ್ರಿಗಳ (Chief Minister) ಜೊತೆಗಿನ ಮಾತುಕತೆಯ ಬಳಿಕ ಮುನಿಸು ದೂರ ಮಾಡಿ ಸಕ್ರಿಯರಾಗಿದ್ದಾರೆ. ಸಿಎಂ ವಿಶ್ವಾಸ ನೀಡಿದ ಬಳಿಕ ಸದನಕ್ಕೂ ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಅವರು ಸದ್ಯ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ (Belagavi Rural Constituency) ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮೇಶ್ ಜಾರಕಿಹೊಳಿ ಅವರು, ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರನ್ನು ಸೋಲಿಸಲು ಕರೆಕೊಟ್ಟಿದ್ದು, ಹೊಸ ಸಂಕಲ್ಪ ಮಾಡಿದ್ದಾರೆ.
ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡ್ತೀವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ನಡೆದ ಪಕ್ಷದ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾಗೇಶ್ ಮನೋಳ್ಕರ್, ಸಂಜಯ್ ಪಾಟೀಲ್, ಕಿರಣ್ ಜಾಧವ್ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆ ಆಗಿರಲಿಲ್ಲ. ನಾಗೇಶ್ ಮನೋಳ್ಕರ್ ಅವರನ್ನು ವರಿಷ್ಠರಿಗೆ ಭೇಟಿ ಮಾಡಿಸಿದ್ದೇನೆ. ನಮ್ಮ ಕಡೆಯಿಂದ ನಾಗೇಶ್ ಮನೋಳ್ಕರ್ ಅವರನ್ನೇ ನಿಲ್ಲಿಸುತ್ತೇವೆ ಅಂತ ಹೇಳಿದ್ದೇನೆ. ಅವರು ಬೇಡ ಎಂದರೇ, ನೀವು ಯಾರಿಗೆ ಹೇಳಿದರೂ ನಾವು ಬೆಂಬಲ ಮಾಡ್ತೇವಿ ಅಂತಲೂ ಹೇಳಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Belagavi Politics: ಬೆಳಗಾವಿಯಲ್ಲಿ ಬಿಜೆಪಿಗೆ ಬಿಗ್ ಶಾಕ್? ಕುಂದಾನಗರಿಯಲ್ಲಿ ಕುಂದುತ್ತಿದೆಯಾ ಕಮಲ ಶಕ್ತಿ?
ಗೆದ್ದ ಒಂದೇ ತಾಸಿಗೆ ತಲೆ ಮೇಲೆ ಬಂದು ಕುಳಿತುಕೊಂಡರು
ಕಳೆದ ಬಾರಿ ಕ್ಷೇತ್ರದಲ್ಲಿ ಶಾಸಕರನ್ನು ಮಾಡಲು ಎಷ್ಟು ಪ್ರಯತ್ನ ಮಾಡಿದ್ದೇವೆ ಅಂತ ಗೊತ್ತಿದೆ. ಆದರೆ ಶಾಸಕರಾಗಿ ಆರಿಸಿ ಬಂದ ಒಂದು ತಾಸಿನಲ್ಲಿ ಅವರು ನಮ್ಮೆಲ್ಲರ ತಲೆ ಮೇಲೆ ಕುಳಿತ್ತಿದ್ದರು. ಏನೋ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ ಆಗಲಿ ಎಂದು ಸುಮ್ಮನಿದ್ದೇವು. ಆದರೆ 2023ರಲ್ಲಿ 25 ಸಾವಿರ ಮತದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪ್ರತಿಯೊಂದು ಬೂತ್ ನಲ್ಲಿ 25 ಜನರನ್ನು ಸಂಘಟನೆಗಾಗಿ ಸಿದ್ಧಪಡಿಸುತ್ತೇವೆ.
ಕಳೆದ ವರ್ಷ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ 25 ಸಾವಿರ ಲೀಡ್ ಪಡೆದುಕೊಂಡು ಗೆದ್ದಿತ್ತು. ಮುಂದಿನ ಜನವರಿ ತಿಂಗಳಿಂದ ಪ್ರತಿಯೊಂದು ಜಿಲ್ಲಾ ಪಂಚಾಯತಿವಾರು ಸಭೆ ಮಾಡುತ್ತೇವೆ. ವರಿಷ್ಠರು ಟಿಕೆಟ್ ಯಾರಿಗೆ ಕೊಟ್ಟರೂ, ನಮ್ಮ ಶಕ್ತಿ ಹಾಕಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಆದ್ದರಿಂದ ಚುನಾವಣಾ ಫಲಿತಾಂಶ ಆದ ಮೇಲೆ ಮಾತನಾಡಬೇಕು ಅಂತ ಶಪಥ ಮಾಡಿದ್ದೇನೆ.
ಇದನ್ನೂ ಓದಿ: Belagavi: ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆ್ಯಕ್ಟೀವ್: ಜಾರಕಿಹೊಳಿಗೆ ಚಾಲೆಂಜ್ ಹಾಕಿದ ಲಕ್ಷ್ಮಿ!
ಕೆಲಸ ಮಾಡಿ ಗೆಲ್ಲಿಸಿ ಮಾಧ್ಯಮದ ಮುಂದೆ ಮಾತನಾಡಲು ಶಪಥ
ಗ್ರಾಮೀಣ ಕ್ಷೇತ್ರದಲ್ಲಿ ಮಾತನಾಡುವ ಅನಿವಾರ್ಯತೆ ಇದೆ ಅಂತ ಈಗ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದೇನೆ. ಕೆಲಸ ಮಾಡಿ ಗೆಲ್ಲಿಸಿ ಮಾಧ್ಯಮದ ಮುಂದೆ ಮಾತನಾಡಲು ಶಪಥ ಮಾಡಿದ್ದೇನೆ. ಮೂರು ಜಿಲ್ಲಾ ಪಂಚಾಯಿತಿಯಲ್ಲಿ 25 ಸಾವಿರ ಲೀಡ್ ನಿಂದ ಗೆಲ್ಲಿಸುತ್ತೇವೆ ಅಂತ ಪ್ರಮಾಣ ಮಾಡಬೇಕು.
ಕಾಂಗ್ರೆಸ್ ನಲ್ಲಿ ಲೀಡರ್ ದಂಡು ಜಾಸ್ತಿ, ಬಿಜೆಪಿಯಲ್ಲಿ ಕಾರ್ಯಕರ್ತರ ದಂಡು ಜಾಸ್ತಿ. ಲೀಡರ್ ಏನೇ ಮಾಡಿದರು ನಮ್ಮಲ್ಲಿ ಕಾರ್ಯಕರ್ತರಿಗೆ ಎಲ್ಲಾ ಶಕ್ತಿ ತುಂಬುತ್ತೇವೆ. ದೇವರ ಮೇಲೆ ಪ್ರಮಾಣ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಅಂತ ದೃಢಸಂಕಲ್ಪ ಮಾಡೋಣಾ ಅಂತ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಕಾರ್ಯಕರ್ತರಲ್ಲಿ ಸಂಕಲ್ಪ ಮಾಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ