HOME » NEWS » State » RAMESH JARAKIHOLI SAYS ANOTHER ROUND OF BIG CABINET RESHUFFLE LIKELY ON MARCH APRIL CSB SNVS

ಮಾರ್ಚ್-ಏಪ್ರಿಲ್​ನಲ್ಲಿ ದೊಡ್ಡಮಟ್ಟದಲ್ಲಿ ಸಂಪುಟ ಪುನಾರಚನೆ: ರಮೇಶ್ ಜಾರಕಿಹೊಳಿ

ತಮ್ಮ ಗುಂಪಿನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಮುಂದೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ದೊಡ್ಡಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದ್ದು ಆಗ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

news18-kannada
Updated:January 13, 2021, 1:36 PM IST
ಮಾರ್ಚ್-ಏಪ್ರಿಲ್​ನಲ್ಲಿ ದೊಡ್ಡಮಟ್ಟದಲ್ಲಿ ಸಂಪುಟ ಪುನಾರಚನೆ: ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೋಳಿ
  • Share this:
ಬೆಳಗಾವಿ/ಬೆಂಗಳೂರು(ಜ. 13): ಕೊರೋನಾ ಬಂದು ಹಲವು ತಿಂಗಳ ವಿಳಂಬದ ಬಳಿಕ ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಆಗುತ್ತಿರುವ ಹೊತ್ತಲ್ಲೇ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇವತ್ತಿನ ಸಂಪುಟ ವಿಸ್ತರಣೆ ವೇಳೆ ನಿರಾಸೆಯಾದ ತಮ್ಮ ಗುಂಪಿನ ಸಚಿವಾಕಾಂಕ್ಷಿಗಳಿಗೆ ಮುಂದಿನ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಗೋಕಾಕ್ ಶಾಸಕರೂ ಆದ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಗುಂಪಿನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಹೆಚ್ ವಿಶ್ವನಾಥ್, ಮಹೇಶ್ ಕುಮಟಳ್ಳಿ, ಮುನಿರತ್ನ, ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಚಿವ ಸ್ಥಾನ ಸಿಗಬೇಕಿದೆ. ವಿಶ್ವನಾಥ್ ಅವರಿಗೆ ಕಾನೂನು ತೊಡಕಿದೆ. ಮುನಿರತ್ನ ಅವರಿಗೆ ಇವತ್ತು ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಮುಂದಿನ ಸಂಪುಟ ಪುನಾರಚನೆ ವೇಳೆ ಎಲ್ಲರಿಗೂ ಒಳ್ಳೆಯದಾಗುವ ವಿಶ್ವಾಸ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ವಸತಿ ಸಚಿವರನ್ನು ಕಿಚಾಯಿಸಿದ ಡಿಸಿಎಂ ಗೋವಿಂದ ಕಾರಜೋಳ

ಮೈತ್ರಿಪಾಳಯದಿಂದ ಬಿಜೆಪಿಗೆ ವಲಸೆ ಬಂದ 17 ಶಾಸಕರ ಪೈಕಿ ಹೆಚ್ ವಿಶ್ವನಾಥ್, ಮುನಿರತ್ನ, ಮಹೇಶ್ ಕುಮಟಳ್ಳಿ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಇನ್ನೂ ಮಂತ್ರಿಭಾಗ್ಯ ಸಿಕ್ಕಿಲ್ಲ. ಈ ಟೀಮ್​ನ ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರು ಇವತ್ತು ಸಂಪುಟ ಸೇರ್ಡಡೆಯಾಗುತ್ತಿದ್ದಾರೆ. ಆರ್ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡಲಾಗುತ್ತಿದೆ. ನಿನ್ನೆ ಈ ವಿಚಾರವಾಗಿ ಅಸಮಾಧಾನಗೊಂಡಿದ್ದ ನಾಗೇಶ್ ಇವತ್ತು ತಾನು ಸಂಪುಟದಿಂದ ಹೊರನಡೆಯಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಸಂಪುಟ ಸೇರ್ಪಡೆಗೆ ಬಹಳ ಪೈಪೋಟಿ ಇರುವುದರಿಂದ ಇನ್ನೊಬ್ಬರಿಗೆ ತಾನು ಸ್ಥಾನ ಬಿಟ್ಟುಕೊಡುತ್ತೇನೆ. ಇದು ತನ್ನ ಮತ್ತು ಸಿಎಂ ನಡುವಿನ ಅಂಡರ್​ಸ್ಟಾಂಡಿಂಗ್ ಇದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ತನಗೆ ಒಳ್ಳೆಯ ಸ್ಥಾನಮಾನ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಅಬಕಾರಿ ಸಚಿವರೂ ಆಗಿದ್ದ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ತಾನು ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಮಹೇಶ್ ಕುಮಟಳ್ಳಿ ಕೂಡ ಸಚಿವ ಸ್ಥಾನ ಸಿಗದಕ್ಕೆ ಬೇಸರಪಡದೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದ್ಧಾರೆ. ತಾನು ಸಚಿವಾಕಾಂಕ್ಷಿಯಾದರೂ ಈ ಸಂದರ್ಭದಲ್ಲಿ ಸಿಎಂ ಹಾಗೂ ಪಕ್ಷದ ಮೇಲೆ ಒತ್ತಡ ಹಾಕುವ ಇಚ್ಛೆ ಇಲ್ಲ. ಮುಂದೆ ತನಗೂ ಸಚಿವ ಸ್ಥಾನ ಸಿಗಬಹುದು ಎಂದು ಅವರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದು ಕೈ ಬಿಟ್ಟಿರಿ; ಯಡಿಯೂರಪ್ಪ ವಿರುದ್ಧ ಹೆಚ್. ವಿಶ್ವನಾಥ್ ಆಕ್ರೋಶ

ಮೈತ್ರಿಪಾಳಯದಿಂದ ವಲಸೆ ಬಂದವರ ಪೈಕಿ ಸಿಎಂ ಯಡಿಯೂರಪ್ಪ ಅವರನ್ನ ಬಹಿರಂಗವಾಗಿ ಟೀಕೆ ನಡೆಸುತ್ತಿರುವುದು ಹೆಚ್ ವಿಶ್ವನಾಥ್ ಅವರು ಮಾತ್ರವೇ. ಯಡಿಯೂರಪ್ಪ ಕೊಟ್ಟ ಮಾತನ್ನ ತಪ್ಪಿದ್ದಾರೆ. ಅವರು ಇಷ್ಟು ವರ್ಷ ಗಳಿಸಿದ ಹೆಸರನ್ನು ಮಗ ವಿಜಯೇಂದ್ರರಿಂದಾಗಿ ಹಾಳುಮಾಡಿಕೊಂಡಿದ್ದಾರೆ. ನಾವು ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದೇವೆ. ಆದರೆ ಎಲ್ಲಿಯೂ ಅವರು ನಮಗೆ ಕೃತಜ್ಞತೆ ಹೇಳಿಲ್ಲ. ಅವರು ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ಯಡಿಯೂರಪ್ಪಗೆ ಸಿದ್ದಲಿಂಗೇಶ್ವರನೂ ಒಳ್ಳೆಯದು ಮಾಡುವುದಿಲ್ಲ ಎಂದು ಮೈಸೂರಿನಲ್ಲಿ ವಿಶ್ವನಾಥ್ ಗುಡುಗಿದ್ಧಾರೆ.ಎಂಟಿಬಿ ನಾಗರಾಜ್, ಆರ್ ಶಂಕರ್, ಸಿ.ಪಿ ಯೋಗೇಶ್ವರ್, ಅರವಿಂದ ಲಿಂಬಾವಳಿ, ಎಸ್ ಅಂಗಾರ, ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿ ಅವರು ಇಂದು ನೂತನ ಸಚಿವರಾಗಿ ಬಿಎಸ್​ವೈ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by: Vijayasarthy SN
First published: January 13, 2021, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories