ರಮೇಶ್ ಜಾರಕಿಹೊಳಿಯನ್ನು ಜಾತ್ರೆಯಲ್ಲಿ ಕಡಿಯುವ ಕೋಣಕ್ಕೆ ಹೋಲಿಕೆ ಮಾಡಿದ ಸಹೋದರ

ನನ್ನದು ಸಾಲ ಇದೆ. ಅದನ್ನು ತೀರಿಸಲು ಬಿಜೆಪಿಗೆ ಹೋಗುತ್ತೇನೆ. ಸಾಲ ತೀರಿಸಿ ಮತ್ತೆ ಕಾಂಗ್ರೆಸ್​ಗೆ ಬರುತ್ತೇನೆ. ಹೀಗಂತ ರಮೇಶ್ ಜಾರಕಿಹೊಳಿ ಒಂದು ವರ್ಷದಿಂದ ಎಲ್ಲರಿಗೂ ಹೇಳಿಕೊಂಡು ಬಂದಿದ್ದಾನೆ ಎಂದು ಸತೀಶ್ ಟೀಕಿಸಿದ್ದಾರೆ.

news18-kannada
Updated:October 18, 2019, 12:35 PM IST
ರಮೇಶ್ ಜಾರಕಿಹೊಳಿಯನ್ನು ಜಾತ್ರೆಯಲ್ಲಿ ಕಡಿಯುವ ಕೋಣಕ್ಕೆ ಹೋಲಿಕೆ ಮಾಡಿದ ಸಹೋದರ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ಅ. 18): ಸಾಮಾನ್ಯವಾಗಿ ರಾಜಕಾರಣಿಗಳು ಜನರ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಾರೆ. ಆದರೆ, ರಮೇಶ್ ಜಾರಕಿಹೊಳಿ ಮತ್ತು ಅವರ ಅಳಿಯ ಅಂಬಿರಾವ್ ಪಾಟೀಲ್ ಅವರು ರಾಜಕೀಯಕ್ಕೆ ಬಂದಿರುವುದು ಸೇವೆಗೆ ಅಲ್ಲ, ಹಣ ಮಾಡಲು ಎಂದು ಸಹೋದರ ಸತೀಶ್ ಜಾರಕಿಹೊಳಿ ಆರೋಪಿಸಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಜಾತ್ರೆಯಲ್ಲಿನ ಬಲಿಪ್ರಾಣಿ ಕೋಣಕ್ಕೆ ಹೋಲಿಕೆ ಮಾಡಿದರು.

ಜಾತ್ರೆಯಲ್ಲಿ ಕೋಣ ಕಡಿಯುವ ಮೊದಲು ಸುಣ್ಣದ ನೀರು ಕುಡಿಸುತ್ತಾರೆ. ಹೀಗೆ ಸುಣ್ಣದ ನೀರು ಕುಡಿಸುವುದರಿಂದ ಕೋಣದ ಶಕ್ತಿ ಕಡಿಮೆಯಾಗುತ್ತದೆ. ಆದರೆ, ರಮೇಶ್ ಜಾರಕಿಹೊಳಿ ತಪ್ಪಿ ತಾನೇ ಸುಣ್ಣದ ನೀರು ಕುಡಿದಿದ್ದಾನೆ. ಈಗ ಗೋಕಾಕ್ ಕ್ಷೇತ್ರದ ಜನರು ಇದೇ ಅವಕಾಶ ಬಳಸಿಕೊಂಡು ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಇದನ್ನೂ ಓದಿ: ನವೆಂಬರ್​ನಿಂದ ಮೋದಿಗೆ ಕಂಟಕ, ಬಿಎಸ್​ವೈ ಅಧಿಕಾರ ಪೂರೈಸಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ

ಇನ್ನು, ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಣಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆಂದು ಸತೀಶ್ ಜಾರಕಿಹೊಳಿ ಮತ್ತೊಂದು ಆರೋಪ ಮಾಡಿದರು. ಸಾಲ ತೀರಿಸಲು ರಮೇಶ ಬಿಜೆಪಿಗೆ ಸೇರುತ್ತಿದ್ಧಾನೆ. ಹಾಗೆಂದು ಆತನೇ ಹೇಳಿಕೊಂಡು ಓಡಾಡುತ್ತಿದ್ಧಾನೆ ಎಂದು ಯಮಕನಮರಡಿ ಶಾಸಕ ಹೇಳಿದರು.

ನನ್ನದು ಸಾಲ ಇದೆ. ಅದನ್ನು ತೀರಿಸಲು ಬಿಜೆಪಿಗೆ ಹೋಗುತ್ತೇನೆ. ಸಾಲ ತೀರಿಸಿ ಮತ್ತೆ ಕಾಂಗ್ರೆಸ್​ಗೆ ಬರುತ್ತೇನೆ. ಹೀಗಂತ ರಮೇಶ್ ಜಾರಕಿಹೊಳಿ ಒಂದು ವರ್ಷದಿಂದ ಎಲ್ಲರಿಗೂ ಹೇಳಿಕೊಂಡು ಬಂದಿದ್ದಾನೆ. ಇದೆಲ್ಲ ನಾನು ಹೇಳಿದ್ದಲ್ಲ. ಆತನೇ ಹೇಳಿಕೊಂಡಿರುವುದು 3-4 ವರ್ಷದ ನಂತರ ಯಾರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ ಯಾರಿಗೆ ಗೊತ್ತು ಎಂದು ಮಾಜಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ಮೂರು ಕರುಗಳಿಗೆ ಜನ್ಮ ನೀಡಿದ ಹಸು; ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ

ಮಹಾರಾಷ್ಟ್ರದ ಗಡಿಭಾಗದಲ್ಲಿರುವ ತಾಲೂಕಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಬಿಡುತ್ತೇನೆಂದು ಬಿಎಸ್ ಯಡಿಯೂರಪ್ಪ ನೀಡಿದ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ಟೀಕಿಸಿದರು. ಕೇವಲ ಚುನಾವಣೆಗಾಗಿ ನಾಯಕರು ಈ ರೀತಿ ಹೇಳಿದ್ಧಾರೆ. ಮೊದಲು ನಮಗೆ ಮಹಾರಾಷ್ಟ್ರದಿಂದ ಕೃಷ್ಣ, ಮಹದಾಯಿ ನೀರು ಬರಬೇಕು. ನಮಗೆ ನ್ಯಾಯ ಸಿಗಬೇಕು. ಆ ಬಳಿಕ ಅವರಿಗೆ ನೀರು ಕೊಡುವ ಬಗ್ಗೆ ಯೋಚನೆ ಮಾಡೋಣ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.(ವರದಿ: ಚಂದ್ರಕಾಂತ್ ಸುಗಂಧಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ