ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ; ಸಿದ್ದರಾಮಯ್ಯ ಬಳಿ ಅಸಮಾಧಾನ ಹೊರಹಾಕಿದ ರಮೇಶ್​ ಜಾರಕಿಹೊಳಿ

ಬೆಳಗಾವಿ ರಾಜಕಾರಣ ನೋಡಿಕೊಳ್ಳಲು ನಾವಿದ್ದೇವೆ. ಸಚಿವ ಡಿ.ಕೆ. ಶಿವಕುಮಾರ್​ ವಿನಾಕಾರಣ ಎಲ್ಲ ವಿಷಯದಲ್ಲೂ ಮೂಗು ತೂರಿಸುತ್ತಿದ್ದಾರೆ. ಇದೇ ರೀತಿ ಆಗುತ್ತಿದ್ದರೆ ನಾವು ಸುಮ್ಮನೆ ಕೂರುವವರಲ್ಲ ಎಂದು ಸಚಿವ ರಮೇಶ್​ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

Sushma Chakre | news18
Updated:November 21, 2018, 4:58 PM IST
ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ; ಸಿದ್ದರಾಮಯ್ಯ ಬಳಿ ಅಸಮಾಧಾನ ಹೊರಹಾಕಿದ ರಮೇಶ್​ ಜಾರಕಿಹೊಳಿ
ಡಿಕೆಶಿ- ರಮೇಶ್​ ಜಾರಕಿಹೊಳಿ
  • News18
  • Last Updated: November 21, 2018, 4:58 PM IST
  • Share this:
ಶ್ರೀನಿವಾಸ ಹಳಕಟ್ಟಿ

ಬೆಂಗಳೂರು (ನ. 21): ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಪದೇಪದೆ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ನಾವಂತೂ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಬಳಿ  ಸಚಿವ ರಮೇಶ್​ ಜಾರಕಿಹೊಳಿ ದೂರು ನೀಡಿದ್ದಾರೆ.

ನಿನ್ನೆ ಕಾವೇರಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾದ ವೇಳೆ ಈ ವಿಷಯ ಪ್ರಸ್ತಾಪಿಸಿರುವ ಸಚಿವ ರಮೇಶ್​ ಜಾರಕಿಹೊಳಿ, ನಿನ್ನೆ ನಡೆದ ರೈತರ ಸಭೆಗೂ ಡಿ.ಕೆ. ಶಿವಕುಮಾರ್​ ಅವರಿಗೂ ಏನು ಸಂಬಂಧ? ಅವರು ಬೇಕೆಂದೇ ಬೆಳಗಾವಿ ರಾಜಕಾರಣದಲ್ಲಿ ತಲೆಹಾಕುತ್ತಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ. ನಮ್ಮ ಸಹನೆಗೂ ಒಂದು ಮಿತಿಯಿದೆ ಎಂದು ಬೇಸರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಭೂ ಸಂಕಷ್ಟ; ಮುಡಾ ಡಿನೋಟಿಫೈ ಪ್ರಕರಣ ಸಿಬಿಐಗೆ?

ಈ ಹಿಂದೆ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಸಚಿವ ರಮೇಶ್​ ಜಾರಕಿಹೊಳಿ ನಡುವೆ ಶೀತಲ ಸಮರ ಏರ್ಪಟ್ಟು, ಕೊನೆಗೆ ಅದು ಸಾರ್ವಜನಿಕವಾಗಿ ಸ್ಫೋಟಗೊಂಡಾಗಲೂ ಮಧ್ಯಪ್ರವೇಶಿಸಿದ್ದ ಡಿ.ಕೆ. ಶಿವಕುಮಾರ್​ ಲಕ್ಷ್ಮೀ ಹೆಬ್ಬಾಳ್ಕರ್​ ಪರವಾಗಿ ನಿಂತಿದ್ದರು. ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯನವರಿಗೆ ಜಾರಕಿಹೊಳಿ ಸೋದರರು ಆಪ್ತರಾಗಿದ್ದ ಕಾರಣ ಕ್ರಮೇಣ ಈ ಜಗಳ ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯನವರ ಪ್ರತಿಷ್ಠೆಯ ವಿಷಯವಾಗಿಯೂ ಬದಲಾಗಿತ್ತು.

ಇದನ್ನೂ ಓದಿ: ಕುತೂಹಲ ಮೂಡಿಸಿದ ಗುರು-ಶಿಷ್ಯರ ಭೇಟಿ; ಸಂಪುಟ ವಿಸ್ತರಣೆ, ರೈತರ ಪ್ರತಿಭಟನೆ ಬಗ್ಗೆ ದೇವೇಗೌಡ-ಸಿದ್ದರಾಮಯ್ಯ ಚರ್ಚೆ

ಇತ್ತೀಚೆಗೆ ಪ್ರತಿಯೊಂದು ವಿಷಯದಲ್ಲೂ ಡಿ.ಕೆ. ಶಿವಕುಮಾರ್​ ಮೂಗು ತೂರಿಸುತ್ತಿದ್ದಾರೆ. ಬೆಳಗಾವಿಯ ರಾಜಕಾರಣವನ್ನು ನೋಡಿಕೊಳ್ಳಲು ನಾವಿದ್ದೇವೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ನೀವು ಮುಂದಿನ ಸಭೆಯಲ್ಲಿ ಅವರಿಗೆ ಈ ರೀತಿ ಮಾಡದಂತೆ ತಾಕೀತು ಮಾಡಿಬೇಕು ಎಂದು ಸಿದ್ದರಾಮಯ್ಯನವರಲ್ಲಿ ರಮೇಶ್​ ಜಾರಕಿಹೊಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ’: ಡಿಸಿಎಂ ಪರಮೇಶ್ವರ್​​ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು!

ಕಾಂಗ್ರೆಸ್​ನ ಪವರ್​ಫುಲ್​ ನಾಯಕರಾಗಿರುವ ಡಿ.ಕೆ. ಶಿವಕುಮಾರ್​ ಅವರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವುದರ ಜೊತೆಗೆ ಕಾಂಗ್ರೆಸ್​ ಬಗ್ಗೆ ಅಸಮಾಧಾನ ಹೊಂದಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ರಮೇಶ್​ ಜಾರಕಿಹೊಳಿ ಅವರನ್ನೂ ಪಕ್ಷದಲ್ಲೇ ಉಳಿಸಿಕೊಳ್ಳುವ ಸವಾಲು ಈಗ ಸಿದ್ದರಾಮಯ್ಯನವರ ಮುಂದಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಒಗ್ಗಟ್ಟನ್ನು ಪ್ರದರ್ಶಿಸಲು ಸಿದ್ದರಾಮಯ್ಯ ಸೇರಿದಂತೆ ಹೈಕಮಾಂಡ್​ ನಾಯಕರು ಕೂಡ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್​ಗೆ 'ಐದು ವರ್ಷ' ಬರೆದು ಕೊಟ್ಟಿದ್ದೇವೆ; ಪರಂ ಆಸೆಗೆ ಡಿಕೆಶಿ ಗರಂ..!

  
First published:November 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading