'ಅಕ್ಟೋಬರ್ 2ನೇ ವಾರದಲ್ಲಿ ಬಿಎಸ್​ವೈ ಮತ್ತೆ ಸಿಎಂ ಆಗ್ತಾರೆ': ನಿಜವಾಗುತ್ತಾ ರಂಭಾಪುರಿ ಶ್ರೀಗಳು ನುಡಿದ ಭವಿಷ್ಯ


Updated:July 5, 2018, 8:26 AM IST
'ಅಕ್ಟೋಬರ್ 2ನೇ ವಾರದಲ್ಲಿ ಬಿಎಸ್​ವೈ ಮತ್ತೆ ಸಿಎಂ ಆಗ್ತಾರೆ': ನಿಜವಾಗುತ್ತಾ ರಂಭಾಪುರಿ ಶ್ರೀಗಳು ನುಡಿದ ಭವಿಷ್ಯ

Updated: July 5, 2018, 8:26 AM IST
ವಿಠಲ್, ನ್ಯೂಸ್ 18 ಕನ್ನಡ

ತುಮಕೂರು(ಜು.05): ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ರಾಜ್ಯದಲ್ಲಿರುವ ಬಿಜೆಪಿ ಸ್ಥಿತಿ. ಹೇಗಾದ್ರೂ ಮಾಡಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ಈಗ ದೇವರ ಮೊರೆ ಹೋಗಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಮಠ ಮಾನ್ಯಗಳಿಗೆ ಭೇಟಿ ನೀಡ್ತಿದ್ದಾರೆ. ಇದ್ರ ಫಲವಾಗಿ ಸದ್ಯದಲ್ಲೇ ಬಿಎಸ್​ವೈ ಮತ್ತೆ ಸಿಎಂ ಆಗ್ತಾರೆ ಅಂತಾ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ಮತ್ತೆ ಸಿಎಂ ಆಗ್ತಾರಾ ಯಡಿಯೂರಪ್ಪ ಅಕ್ಟೋಬರ್ 2ನೇ ವಾರದಲ್ಲಿ ಸಿಎಂ ಆಗ್ತಾರೆ ಎಂದು ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಾಡುಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗಿ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ಬಿಜೆಪಿ ನಾಯಕರ ದಂಡೇ ಪಾಲ್ಗೊಂಡಿತ್ತು. ಈ ವೇಳೆ ಮಾತನಾಡಿದ ವಿ.ಸೋಮಣ್ಣ, ಸ್ವಾಮೀಜಿಗಳಿಗೆ, ನೀವುಗಳು ಏನು ಮಾಡ್ತೀರೋ ಗೊತ್ತಿಲ್ಲ ಮತ್ತೊಮ್ಮೆ ಮಠಕ್ಕೆ ಬರೋದರೊಳಗೆ ಅವರು ಬಿಎಸ್​ವೈ ಸಿಎಂ ಆಗಬೇಕು ಅಂತಾ ಕಟ್ಟಾಜ್ಞೆ ಹೊರಡಿಸಿದ್ರು. ಬಳಿಕ ಮಾತನಾಡಿದ ಬಿಎಸ್​ವೈ, ಪಂಚ ಪೀಠಗಳ ಪೈಕಿ ವೇದಿಕೆಯಲ್ಲಿದ್ದ ನಾಲ್ಕು ಮಠಗಳ ಶ್ರೀಗಳ ಆಶೀರ್ವಾದ ಬೇಡಿದ್ದಾರೆ.

ಬಳಿಕ ಮಾತನಾಡಿದ ಕಾಡಸಿದ್ದೇಶ್ವರ ಮಠದ ಶ್ರೀಗಳು, ಬಿಎಸ್​ವೈ ಆಸೆ ಶೀಘ್ರದಲ್ಲೇ ಈಡೇರಲಿದೆ ಅಂತಾ ಆಶೀರ್ವದಿಸಿದ್ರು. ಇದೇವೇಳೆ ಮಾತನಾಡಿದ ರಂಭಾಪುರಿ ಶ್ರೀಗಳು, ಅಕ್ಟೋಬರ್ 2ನೇ ವಾರದಲ್ಲಿ ಬಿಎಸ್​ವೈ ಮತ್ತೆ ಸಿಎಂ ಆಗ್ತಾರೆ ಅಂದ್ರು. ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಎಲ್ಲಾ ರಾಜಕೀಯ ವ್ಯಕ್ತಿಗಳ ಅದೃಷ್ಠ ಬದಲಾಗಿದೆ. ಇದು ಯಡಿಯೂರಪ್ಪ ವಿಚಾರದಲ್ಲೂ ನಿಜವಾಗುತ್ತಾ?

 
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ