ರಾಮನಗರ: ಕುಡಿತದ ಅಮಲು (Drunken State) ಏನೇನೋ ಮಾಡಿಸುತ್ತದೆ. ಆದರೆ ಇಲ್ಲೊಂದು ಸಣ್ಣ ಗಲಾಟೆಯಲ್ಲಿ(Quarrel) ಓರ್ವನ ಕೊಲೆಯೇ (Murder) ಅಗಿದೆ. ಕುಡಿದ ಮತ್ತಲ್ಲಿ ಕೊಲೆ ಮಾಡಿದ ಇಬ್ಬರು ಸ್ನೇಹಿತರು (FRIENDS) ಈಗ ಲಾಕಪ್ ನಲ್ಲಿ ಕೊರಗುತ್ತಿದ್ದಾರೆ. ಸ್ನೇಹಿತರ ನಡುವೆ ಬೈಕ್ ಓಡಿಸುವ ಸಲುವಾಗಿ ಶುರುವಾದ ಮಾತಿನ ಚಕಮಕಿಯಲ್ಲಿ ಗಲಾಟೆ ಕೊಲೆಯಲ್ಲಿಅಂತ್ಯವಾಗಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಣೇಶ್, ಸುನೀಲ್, ಗಿರೀಶ್ ಬೆಂಗಳೂರು ರಾಜಗೋಪಾಲನಗರದಲ್ಲಿ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಮಂಡ್ಯಕ್ಕೆ ಊರಬ್ಬಕ್ಕೆಂದು ಹೊರಟಿದ್ದ ವೇಳೆ ಕುಡಿದ ಅಮಲಿನಲ್ಲಿದ್ದ ಸ್ನೇಹಿತರು ಬೈಕ್ ಓಡಿಸುವ ವಿಚಾರವಾಗಿ ಎರಡು ಮೂರು ಕಡೆ ಜಗಳ ಮಾಡಿಕೊಂಡಿದ್ದಾರೆ.
ಬೈಕ್ ಓಡಿಸುವ ವಿಚಾರಕ್ಕೆ ಸ್ನೇಹಿತ ಮಧ್ಯೆ ಗಲಾಟೆ
ಬೆಂಗಳೂರಿನ ಪೀಣ್ಯದಿಂದ ಹೊರಟ ಈ ಮೂವರು ಲಗ್ಗೆರೆಯ ಬಾರ್ ಒಂದರಲ್ಲಿ ಚೆನ್ನಾಗಿ ಕುಡಿದಿದ್ದಾರೆ. ನಂತರ ಮಂಡ್ಯಕ್ಕೆ ಹೋಗುವ ಮುನ್ನ ತಾವರೆಕೆರೆಯ ಬಳಿ ಬಂದು ಅಲ್ಲಿಯೂ ಸಹ ಗಲಾಟೆ ಮಾಡಿಕೊಂಡಿದ್ದಾರೆ. ಗಾಡಿ ಓಡಿಸುವ ವಿಚಾರವಾಗಿ ಈ ಮೂವರು ಸಹ ಬೆಂಗಳೂರಿನಿಂದಲೂ ಸಹ ಗಲಾಟೆ ಮಾಡಿಕೊಂಡು ಬಂದಿದ್ದಾರೆ. ಗಣೇಶನ ಪಲ್ಸರ್ ಬೈಕ್ ಓಡಿಸುವ ವಿಚಾರವಾಗಿ ಗಣೇಶ, ಗಿರೀಶ, ಸುನೀಲನ ನಡುವೆ ನಡೆದಿದೆ.
ಕಲ್ಲು ಎತ್ತಿ ಹಾಕಿ ಕೊಂಡ ಸ್ನೇಹಿತರು
ಇನ್ನು ಸುನೀಲ್ ಬೈಕ್ನನ್ನ ಗಣೇಶ್ ನಾನೇ ಓಡಿಸಬೇಕು ಎಂದು ಪಟ್ಟುಹಿಡಿದುಕೊಂಡಿದ್ದ. ಈಗಾಗಿ ಆತನಿಗೆ ಬೈಕ್ ಕೊಟ್ಟ ವೇಳೆ ಎರಡು ಕಡೆ ಬೈಕ್ ಬೀಳಿಸಿದ್ದಾನೆ. ಇದರಿಂದ ಕೋಪಗೊಂಡ ಸುನಿಲ್ ಗಿರೀಶ್ ಜೊತೆಗೆ ಸೇರಿ ಮಾರೇನಹಳ್ಳಿ ಬಳಿಯೂ ಬೈಕ್ ಬೀಳಿಸಿದ ಎಂಬ ಕಾರಣಕ್ಕೆ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಹೆಗಲಮೇಲೆ ಮೃತದೇಹವನ್ನ ಸಾಗಿಸಿ ಅರ್ಕಾವತಿ ನದಿಗೆ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪ್ರತ್ಯಕ್ಷವಾಗಿ ಗಮನಿಸದ ಸಾರ್ವಜನಿಕರು ಪೊಲೀಸರರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Bengaluru: ಇಂದಿರಾನಗರದಲ್ಲಿ ಸರಣಿ ಅಪಘಾತ: ಸಜ್ಜುಗುಜ್ಜಾದ ಕಾರಿನಿಂದ ಮೃತದೇಹ ಹೊರತೆಗೆಯಲು ಹರಸಾಹಸ!
ಸದ್ಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಕುಡಿದ ಅಮಲಿನಲ್ಲಿ ಕೊಲೆ ಮಾಡಿ ಈಗ ತಬ್ಬಿಬ್ಬಾಗಿದ್ದಾರೆ. ಆದರೆ ಇವರೆಲ್ಲರೂ ಸಹ ತುಂಬಾ ಆತ್ಮೀಯ ಸ್ನೇಹಿತರು ಎಂದು ಗೊತ್ತಾಗಿದೆ. ಆದರೆ ಎಣ್ಣೆಯ ಮತ್ತು ಏನನ್ನಾದರೂ ಮಾಡಿಸುತ್ತದೆ ಅನ್ನೋದಕ್ಕೆ ಈ ಕೊಲೆಯೇ ಪ್ರತ್ಯಕ್ಷ ಸಾಕ್ಷಿ. ಮಾಂಸದೂಟಕ್ಕೆ ಹೋಗಬೇಕಾದ ಮೂವರಲ್ಲಿ ಓರ್ವ ಯಮಲೋಕಕ್ಕೆ, ಇನ್ನಿಬ್ಬರು ಸೆರೆಮನೆಗೆ ಹೋಗಿ ಕಾಲಕಳೆಯುವಂತಾಗಿದೆ.
ರಾಜಧಾನಿ ಅಪರಾಧ ಸುದ್ದಿ
ಇನ್ನು ಬೆಂಗಳೂರಿನಲ್ಲಿ ತ್ರಿವಳಿ ಕೊಲೆ ಮಾಡಿದ್ದ ಆರೋಪಿ ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ಸಾರ್ಜೆಂಟ್. 2ನೇ ಮದುವೆಯ ಆಸೆಗೆ ಬಿದ್ದ ಈತ ಹೆಂಡತಿ-ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದ. 2008ರಲ್ಲಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಅಧರ್ಮಿ ಧರ್ಮಸಿಂಗ್ 11 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಅಕ್ಟೋಬರ್ 19, 2008 ರಂದು, ಧರ್ಮಸಿಂಗ್ ಯಾದವ್ ತನ್ನ ಪತ್ನಿ ಅನು ಯಾದವ್ (35) ಮತ್ತು ಇಬ್ಬರು ಅಪ್ರಾಪ್ತ ಮಕ್ಕಳಾದ ಕೀರ್ತಿ (14) ಮತ್ತು ಶುಭಂ (8) ಅವರನ್ನು ಮೊದಲು ಮರದ ದಿಮ್ಮಿಯಿಂದ ಹೊಡೆದು ನಂತರ ಕತ್ತು ಸೀಳಿ ಕೊಲೆ ಮಾಡಿದ್ದರು.2008 ರಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳ ಹತ್ಯೆಗೈದಿದ್ದ ಹಂತಕ, ಬಳಿಕ ಯಾರೋ ಕೊಲೆ ಮಾಡಿದ್ದಾರೆಂದು ನಾಟಕವಾಡಿ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ನಾಟಕವಾಡಿದ್ದ ಧರ್ಮಸಿಂಗ್ನನ್ನು ಬಂಧಿಸಿದ್ದರು. ಆದರೆ ತಪ್ಪಿಸಿಕೊಂಡು ಅಸ್ಸಾಂಗೆ ಪರಾರಿಯಾಗಿದ್ದ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ