HOME » NEWS » State » RAMANAGARA VATAL NAGARAJ SAYS GOVERNMENT MISHANDLING COVID CRISIS ATVR SNVS

Vatal Nagaraj - ಸರ್ಕಾರ ಸತ್ತುಹೋಗಿದೆ; ಜನರು ಸಾಯುತ್ತಿದ್ದಾರೆ: ವಾಟಾಳ್ ನಾಗರಾಜ್ ಆಕ್ರೋಶ

ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಸುಧಾಕರ್ ಮಾತ್ರ ಕಾಣಿಸುತ್ತಿದ್ದಾರೆ. ಉಳಿದ ಸಚಿವರ ಸುಳಿವೇ ಇಲ್ಲ. ಸರ್ಕಾರ ಸತ್ತುಹೋಗಿರುವುದು ಇದರಲ್ಲೇ ಗೊತ್ತಾಗುತ್ತದೆ. ಈ ಸರ್ಕಾರದಿಂದಾಗಿ ಜನರೂ ಸಾಯುತ್ತಿದ್ಧಾರೆ ಎಂದು ವಾಟಾಳ್ ನಾಗರಾಜ್ ಟೀಕಿಸಿದ್ದಾರೆ.

news18-kannada
Updated:April 22, 2021, 9:00 AM IST
Vatal Nagaraj - ಸರ್ಕಾರ ಸತ್ತುಹೋಗಿದೆ; ಜನರು ಸಾಯುತ್ತಿದ್ದಾರೆ: ವಾಟಾಳ್ ನಾಗರಾಜ್ ಆಕ್ರೋಶ
ವಾಟಾಳ್ ನಾಗರಾಜ್
  • Share this:
ರಾಮನಗರ: ರಾಜ್ಯ ಸರ್ಕಾರ ಕರ್ಫ್ಯೂ, ಲಾಕ್ ಡೌನ್ ಜಾರಿ ಮಾಡಿರೋದು ಸರಿಯಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು. ರಾಜ್ಯ ಸರ್ಕಾರ ಮೊದಲು ರಾಜ್ಯದ ಆಸ್ಪತ್ರೆಗಳನ್ನ ಸುಧಾರಣೆ ಮಾಡಲಿ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನ ಸುಧಾರಿಸಲಿ. ಅದನ್ನ ಬಿಟ್ಟು ಇಲ್ಲದ ಕಾನೂನನ್ನ ಜಾರಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇನ್ನು ರಾಜ್ಯ ಸರ್ಕಾರ ತಂದಿರುವ ಈ ಕಾನೂನಿನಿಂದ ಸಾಮಾನ್ಯ ಜನರಿಗೆ ತೊಂದರೆಯಾಗ್ತಿದೆ. ಹಾಗಾಗಿ ಮೊದಲು ಆಸ್ಪತ್ರೆಗಳನ್ನ ಸರಿಪಡಿಸಲಿ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು.

ರಾಜ್ಯ ಸರ್ಕಾರ ಸತ್ತುಹೋಗಿದೆ, ಜನರು ಸಾಯ್ತಿದ್ದಾರೆ:

ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಪ್ರಾರಂಭವಾಗಿ ಅಬ್ಬರಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು. ಸಿಎಂ ಇದ್ದರೂ, ಸರ್ಕಾರ ಇದ್ದರೂ ಸಹ ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿದ್ದಾರೆ. ಜೊತೆಗೆ ಈ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್, ಡಾ ಕೆ ಸುಧಾಕರ್ ಮಾತ್ರ ಕಾಣ್ತಿದ್ದಾರೆ. ಇನ್ನುಳಿದ ಸಚಿವರು ಯಾರು ಸಹ ಕಾಣುತ್ತಿಲ್ಲ. ಇದರಲ್ಲಿಯೇ ಗೊತ್ತಾಗಲಿದೆ ರಾಜ್ಯ ಬಿಜೆಪಿ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂದು. ಆದರೆ ಈ ಸರ್ಕಾರದ ಆಡಳಿತದಿಂದ ಜನರು ದಿನನಿತ್ಯ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರವೂ ಬಿಜೆಪಿ ಪಕ್ಷದ್ದೇ ಆಗಿದೆ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವ ಸಂದರ್ಭದಲ್ಲಿ ಕೇಂದ್ರದವರು ರಾಜ್ಯಕ್ಕೆ ಸಹಾಯ ಮಾಡುತ್ತಿಲ್ಲ. ಈ ಬಗ್ಗೆ ರಾಜ್ಯದ ಸಚಿವರು, ಸಂಸದರು ಸಹ ಧ್ವನಿ ಎತ್ತುತ್ತಿಲ್ಲ. ಹಾಗಾಗಿ ಈ ಸರ್ಕಾರ ಕೊರೋನಾ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ದಿಕ್ಕಿಲ್ಲದೆ ಬಿದ್ದಿದ್ದ ಶವ; ಹತ್ತಿರ ಹೋಗಲೂ ಹೆದರುತ್ತಿದ್ದ ಜನರು

ರಾಮನಗರ ಜಿಲ್ಲೆಯಲ್ಲಿಯೂ ಹೆಚ್ಚುತ್ತಿರುವ ಕೊರೋನಾ:

ಇನ್ನು ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯಲ್ಲಿಯೂ ಸಹ ಕೊರೋನಾ ಪಾಸಿಟಿವ್ ಕೇಸ್ ಗಳು ದಿನಕಳೆದಂತೆ ಹೆಚ್ಚಾಗುತ್ತಿದೆ. ‌ಒಂದೆಡೆ ರಾಮನಗರ-ಚನ್ನಪಟ್ಟಣ ನಗರಸಭೆ ಚುನಾವಣೆ ಘೋಷಣೆಯಾಗಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅಬ್ಬರದ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈ ಮಧ್ಯೆ ಕೊರೋನಾ ಎರಡನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಚುನಾವಣಾ ಪ್ರಚಾರದಲ್ಲಿ ನೂರಾರು ಜನರು ಭಾಗಿಯಾಗುತ್ತಿದ್ದು, ಎರಡೂ ನಗರದಲ್ಲಿ ಕೊರೋನಾ ಕೇಸ್ ಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ಹಾಗಾಗಿ ಈ ವ್ಯವಸ್ಥೆಯನ್ನ ಸರಿಪಡಿಸಲು ಸಾಧ್ಯವಿಲ್ಲ. ಚುನಾವಣೆ ವಿಚಾರವಾಗಿ ಯಾರು ಏನು ಹೇಳಿದರೂ ಜನರು ಕೇಳಲ್ಲ. ಆದರೆ ಪರಿಸ್ಥಿತಿ ಕೈ ಮೀರುವ ಮೊದಲೇ ಜನರೇ ವಾಸ್ತವ ಸ್ಥಿತಿಯನ್ನ ಅರ್ಥೈಸಿಕೊಂಡು ಚುನಾವಣಾ ಪ್ರಚಾರದಲ್ಲಿ ಗುಂಪು ಸೇರುವುದನ್ನ ಕಡಿಮೆಕೊಳ್ಳಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಉಪಯೋಗಿಸಬೇಕಾಗಿದೆ. ಆಗ ಮಾತ್ರ ಕೊರೋನಾ ತಡೆಯಲು ಸಾಧ್ಯ. ಇಲ್ಲವಾದರೆ ಕೊರೋನಾ ಆರ್ಭಟ ಮುಂದುವರೆಯಲಿದೆ.

ವರದಿ: ಎ.ಟಿ.ವೆಂಕಟೇಶ್
Published by: Vijayasarthy SN
First published: April 22, 2021, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories