• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Savandurga: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾವನದುರ್ಗ, ಆದರೆ ಇಲ್ಲಿ ಭದ್ರತೆ ಬೇಕಿದೆ ಈಗ!

Savandurga: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾವನದುರ್ಗ, ಆದರೆ ಇಲ್ಲಿ ಭದ್ರತೆ ಬೇಕಿದೆ ಈಗ!

ಸಾವನದುರ್ಗ ಬೆಟ್ಟ

ಸಾವನದುರ್ಗ ಬೆಟ್ಟ

ಆಕಾಶದ ಎತ್ತರಕ್ಕೆ ಕಾಣುವ ಈ ಏಕಶಿಲಾ ಬೆಟ್ಟವನ್ನೇರಿ, ಇಲ್ಲಿನ ಬೆಟ್ಟದಿಂದ ಕಣ್ಮನ ತಣಿಸುವಂತ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಂಡು, ಅಲ್ಲಿ ಬೀಸುವ ತಂಗಾಳಿ ಸವಿಯಲು ಸಾಹಸಿ ಚಾರಣಿಗರು ಬರುತ್ತಾರೆ. ವೀಕೆಂಡ್‌ ದಿನಗಳಲ್ಲಂತೂ ಮೋಜು, ಮಸ್ತಿ ಅನುಭವಿಸಲು ಬರುವವರೇ ಹೆಚ್ಚಾಗಿದ್ದಾರೆ.

  • Share this:

    ರಾಮನಗರ: ಇದು ಪುಟ್ಟ ಜಿಲ್ಲೆಯಾದರೂ ಇಲ್ಲಿ ಪ್ರವಾಸಿ ತಾಣಗಳಿಗೇನೂ (Tourist Place) ಕೊರತೆಯಿಲ್ಲ. ಈ ಪೈಕಿ ಸಾವನದುರ್ಗ (Savandurga) ಕೂಡ ಒಂದು. ಮಾಗಡಿ (Magadi) ತಾಲೂಕಿನಲ್ಲಿಯೇ ಸುಪ್ರಸಿದ್ಧ ಪ್ರವಾಸಿ ತಾಣ ಎಂದೇ ಪ್ರಖ್ಯಾತಗೊಂಡಿರುವ ಸಾವನದುರ್ಗ, ಪ್ರಕೃತಿ (Nature) ಮಡಿಲಲ್ಲಿ ಹರಡಿಕೊಂಡಿದ್ದು, ದಿನೇ ದಿನೇ ಪ್ರವಾಸಿಗರನ್ನು (Tourist) ಆಕರ್ಷಿಸುತ್ತಿದೆ. ಚಾರಣಿಗರನ್ನು ಮತ್ತು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಏಷ್ಯಾ ಖಂಡದಲ್ಲೇ (Asia) ಅತಿ ಎತ್ತರದ ಬೃಹತ್‌ ಏಕಶಿಲಾ ಎರಡು ಬೆಟ್ಟಗಳಿವೆ. ಕರಿ ಮತ್ತು ಬಿಳಿ ಕಲ್ಲು ಬೆಟ್ಟವೆಂದೇ ಪ್ರಖ್ಯಾತಿಗೊಂಡಿದೆ. ಇಲ್ಲಿನ ಅವಶೇಷಗಳೇ ಕಥೆ ಹೇಳುತ್ತವೆ.


    ಈ ಸಾವನದುರ್ಗವನ್ನುವಶಪಡಿಸಿಕೊಳ್ಳಲು ಲಾರ್ಡ್‌ ಕಾರ್ನ್ ವಾಲಿಸ್‌ ಪಟ್ಟಪಾಡನ್ನು ಕಣ್ಣಾರೆ ಕಂಡ ಕರ್ನಲ್‌ ವಿಲ್ಸ್‌ ರೋಮಾಂಚಕಾರಿಯೂ ಮೈನವಿರೇಳಿಸುವಂತಹ ಈ ದುರ್ಗ ಎಚ್ಚರ ತಪ್ಪಿದರೆ ಸಾವಿನ ದುರ್ಗವೆಂದಿದ್ದರು.


    ರುದ್ರ ರಮಣೀಯ ದೃಶ್ಯ


    ಆಕಾಶದ ಎತ್ತರಕ್ಕೆ ಕಾಣುವ ಈ ಏಕಶಿಲಾ ಬೆಟ್ಟವನ್ನೇರಿ, ಇಲ್ಲಿನ ಬೆಟ್ಟದಿಂದ ಕಣ್ಮನ ತಣಿಸುವಂತ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಂಡು, ಅಲ್ಲಿ ಬೀಸುವ ತಂಗಾಳಿ ಸವಿಯಲು ಸಾಹಸಿ ಚಾರಣಿಗರು ಬರುತ್ತಾರೆ. ವೀಕೆಂಡ್‌ ದಿನಗಳಲ್ಲಂತೂ ಮೋಜು, ಮಸ್ತಿ ಅನುಭವಿಸಲು ಬರುವವರೇ ಹೆಚ್ಚಾಗಿದ್ದಾರೆ.


    7 ಸಾವಿರ ಎಕರೆ ಅರಣ್ಯ ಪ್ರದೇಶ


    ಪ್ರಕೃತಿಯ ಮಡಿಲಲ್ಲಿರುವ ಈ ಸಾವನದುರ್ಗ ಸುಮಾರು ಏಳು ಸಾವಿರ ಎಕರೆ ಸಂರಕ್ಷಿತ ಅರಣ್ಯ ಪ್ರದೇಶ ಹೊಂದಿದ್ದು, ಈ ಅರಣ್ಯ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಹುಲಿ, ಚಿರತೆ, ಕರಡಿ, ನರಿ, ತೋಳ ಸೇರಿದಂತೆ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳ ಸಂಕುಲಗಳು ಇಲ್ಲಿವೆ.


    ಇದನ್ನೂ ಓದಿ: Mushroom Farming: ಕ್ರೀಡಾ ಶಾಲೆ ವಿದ್ಯಾರ್ಥಿಗೆ ಕೃಷಿಯೇ ಖುಷಿಯಂತೆ! ಅಣಬೆ ಬೆಳೆಯುತ್ತಿದ್ದಾನೆ ಈ ಪೋರ


    ಅಪಾರ ಸಸ್ಯ ಸಂಪತ್ತು ಇಲ್ಲಿವೆ


    ಈ ದುರ್ಗದ ಮಡಿಲಲ್ಲಿ ಶ್ರೀಗಂಧ, ಬೀಟೆ, ತೇಗ ಇತರೆ ಜಾತಿಗಳ ಮರಗಳು, ಗಿಡಮೂಲಿಕೆಗಳು ಹೇರಳವಾಗಿದೆ. ನಿರ್ವಹಣೆ ಇಲ್ಲದೆ ವಿನಾಶದ ಅಂಚಿನಲ್ಲಿದೆ.


    ಇಲ್ಲಿ ನಿರ್ಬಂಧ ಯಾಕಿಲ್ಲ?


    ಪಕ್ಕದಲ್ಲೇ ಮಂಚನಬೆಲೆ ಜಲಾಶಯವಿದೆ. ಅಕ್ರಮವಾಗಿ ರೆಸಾರ್ಟ್‌ಗಳು ಔಟಿಂಗ್‌ ಸಹ ನಡೆಸಲಾಗುತ್ತಿದೆ. ಇಲ್ಲಿಗೂ ಮೋಜು-ಮಸ್ತಿಗೆಂದು ಬರುವವರು ಜಲಾಶಯದಲ್ಲಿಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ ಅನೇಕ ಉದಾಹರಣೆಗಳಿದ್ದರೂ ಸಹ ಇದಕ್ಕೆಲ್ಲ ಕಡಿವಾಣಕ್ಕೆ ಯಾರು ಮುಂದಾಗುತ್ತಿಲ್ಲ ಎಂಬ ಆರೋಪ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹ ಕೇಳಿಬರುತ್ತಿದೆ.


    ಸರಿಯಾದ ಚೆಕ್‌ಪೋಸ್ಟ್‌ ಇಲ್ಲ


    ಪ್ರವಾಸಿಗರಿಗೆ ಅನುಮತಿ ಇಲ್ಲದೆ ಕಾಡಿನೊಳಗೆ ಪ್ರವೇಶ ನಿಷೇಧಿಸಿದ್ದರೂ ಕೂಡ ಸಹ ಕಣ್ತಪ್ಪಿಸಿ ಕಾಡಿನೊಳಗೆ ಪ್ರವೇಶಿಸಿ, ಮೋಜು ಮಸ್ತಿ ಮಾಡುವವರೂ ಇದ್ದಾರೆ. ಇವೆಲ್ಲವನ್ನು ತಪ್ಪಿಸಲೆಂದೇ ಪೊಲೀಸರು ಸಹ ಸಾವನದುರ್ಗದಲ್ಲಿ ಚೆಕ್‌ಪೋಸ್ಟ್‌ ತೆರೆದು ಕೆಲ ದಿನಗಳ ಕಾಲ ಎರಡು ಪಾಳಿಯಲ್ಲಿ ಹಗಲು ರಾತ್ರಿ ಕಾದರು. ಕೊನೆಗೆ ಸಿಬ್ಬಂದಿ ಕೊರತೆ ಎಂದು ಟೆಂಟ್‌ ಕಿತ್ತುಕೊಂಡು ಖಾಲಿಮಾಡಿ ಬಂದಿದ್ದಾರೆ. ಚೆಕ್‌ ಪೋಸ್ಟ್‌ ಇಲ್ಲದೆ ಕಾರಣ ಕಾವಲುಗಾರರೇ ಇಲ್ಲದಂತಾಗಿದೆ.


    ಬೆಟ್ಟದ ತಪ್ಪಲಿನಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ


    ಸಾವನದುರ್ಗದಲ್ಲಿ ಪ್ರಸಿದ್ಧವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ಸಾವಂದಿ ವೀರ ಭದ್ರಸ್ವಾಮಿ ದೇವಸ್ಥಾನ ಭಕ್ತರನ್ನ ಆಕರ್ಷಿಸಿದೆ. ಈ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ನಿತ್ಯ ಭಕ್ತರು ಆಗಮಿಸುತ್ತಿದ್ದು, ಭಕ್ತರು ನಡೆಸುವ ಸೇವಾಕಾರ್ಯ ಗಳಿಗೆ ಇಲ್ಲಿ ಕಲ್ಯಾಣ ಮಂಟಪ ದೊರಕುತ್ತವೆ. ಇಲ್ಲಿನ ರುದ್ರ ರಮಣೀಯ ದೃಶ್ಯಕ್ಕೆ ಮನಸೋತವರೇ ಹೆಚ್ಚು.


    ಇದನ್ನೂ ಓದಿ: Dakshina Kannada: ಈ ಪವಿತ್ರ ಗುಂಡಿಯಲ್ಲಿ ವರ್ಷಕ್ಕೊಮ್ಮೆ ತೀರ್ಥಸ್ನಾನಕ್ಕೆ ಅವಕಾಶ; ಇಲ್ಲಿನ ಮಹಿಮೆ ಏನು ಗೊತ್ತಾ?


    ಮೋಜು-ಮಸ್ತಿಗೆ ಕಡಿವಾಣ ಅನಿವಾರ್ಯ


    ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತುಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ. ಇಂತಹ ನಿಸರ್ಗದತ್ತ ಸಂರಕ್ಷಿ ತಅರಣ್ಯ ಪ್ರದೇಶದ ನಡುವೆ ಚಾರಣದ ಹೆಸರಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಸುಂದರವಾದ ಪರಿಸರಕ್ಕೆ ಮತ್ತು ಕಾಡು ಪ್ರಾಣಿ, ಪಕ್ಷಿಗಳಿಗೆ ಧಕ್ಕೆ ತರುವಂತಹ ಕೆಲಸ ಯಾರೂ ಮಾಡಬಾರದು ಎಂಬುದೇ ಪರಿಸರ ಪ್ರೇಮಿಗಳ ಆಶಯವಾಗಿದೆ.


    (ವರದಿ: ಎ.ಟಿ.ವೆಂಕಟೇಶ್)

    Published by:Annappa Achari
    First published: