ಶಿವಕುಮಾರ್​ ಚಾಕು- ಚೂರಿ ಇಟ್ಕೋತಾನೆ ಎಂದು ರಾಜೀವ್​ ಗಾಂಧಿಗೆ ದೂರು ಕೊಟ್ಟಿದ್ದರು...!; ನೆನಪು ಮೆಲುಕು ಹಾಕಿದ ಡಿಕೆಶಿ

ಆ ಮೇಲೆ ರಾಜೀವ್​ ಗಾಂಧಿ ಅವರು ನನ್ನ ಬಗ್ಗೆ ಮಾಹಿತಿ ಪಡೆಯುವಂತೆ ಅವರ ಆಪ್ತ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದರಂತೆ, ಆ ಕಾರ್ಯದರ್ಶಿ ಅವರು ರಿಪೋರ್ಟ್ ಕೊಟ್ಟ ಬಳಿಕ ದೂರು ಕೊಟ್ಟ ಸಂಸದರಿಗೆ ರಾಜೀವ್ ಗಾಂಧಿ ತಿಳಿ ಹೇಳಿದ್ದರು. ಯಾರನ್ನೂ ಕೇವಲ ಎಂದು ತಿಳಿಯಬೇಡಿ, ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಳೆಯಬೇಡಿ, ಅಂತಹ ಜನರೇ ಪಕ್ಷ ಸಂಘಟನೆ ಮಾಡುತ್ತಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

 • Share this:
  ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ  ಕಾಂಗ್ರೆಸ್ ಭವನದಲ್ಲಿ ಶುಕ್ರವಾರದಂದು ರಾಜೀವ್ ಗಾಂಧಿ ಜನ್ಮದಿನ ಹಾಗೂ ದೇವರಾಜ ಅರಸು ಜನ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾತನಾಡಿದ  ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ.ಶಿವಕುಮಾರ್​,  ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡದವರ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು ಹಾಗೂ ಪಕ್ಷದಲ್ಲಿ ತಾವು ಬೆಳೆದುಬಂದ ಬಗೆಯನ್ನು ವಿವರಿಸಿದರು.

  ಕೆಲವರು ಪಕ್ಷಕ್ಕೆ ಬಂದು ಸೇರಿಕೊಳ್ಳುತ್ತಾರೆ, ಒಂದು ಬಾವುಟ ಕಟ್ಟಲ್ಲ, ನಾಲ್ಕು ಜನರ ಬಳಿ ವೋಟ್ ಹಾಕಿಸೋ ತಾಕತ್ತು ಇರಲ್ಲ, ಅವರೆಲ್ಲಾ ನಾವು ನಾಯಕರು ಎಂದು ಓಡಾಡುತ್ತಿರುತ್ತಾರೆ. ಇನ್ನೂ ಕೆಲವರು ಇದ್ದಾರೆ ಕೆಲಸ ಮಾಡ್ತಾರೆ, ಆದರೆ ಅವರ ಸಾರ್ವಜನಿಕ ನಡವಳಿಕೆ ಸರಿ ಇರುವುದಿಲ್ಲ. ಅವರುಗಳ ಬಗ್ಗೆ ಚಾಕು ಚೂರಿ ಇಟ್ಕೊಂಡು ಓಡಾಡುತ್ತಾರೆ ಎನ್ನುವ ದೂರು ಇರುತ್ತೆ.

  ರಾಜೀವ್ ಗಾಂಧಿ ಅವರು ಈ ದೇಶದ ಪ್ರಧಾನಿ ಆಗಿದ್ದಾಗ ಯೂತ್​ ಕಾಂಗ್ರೆಸ್ ನಾಯಕರನ್ನ ಕೊರಿಯ ದೇಶಕ್ಕೆ ಪ್ರವಾಸ ಕಳಿಸಲು ಪಟ್ಟಿ ತಯಾರು ಮಾಡುವಂತೆ ಹೇಳಿದ್ದರು. ಆ  ಪಟ್ಟಿಯಲ್ಲಿ ನನ್ನ ಹೆಸರು ನೋಡಿ ಕೆಲ ಸಂಸದರು ರಾಜೀವ್​ ಗಾಂಧಿ ಬಳಿ ದೂರು ಹೇಳಿದ್ದರು. ’’ಅವನು ಚಾಕು ಚೂರಿ ಇಟ್ಕೊಂಡವನು, ಇಂತವರನ್ನ ವಿದೇಶಕ್ಕೆ ಕಳುಹಿಸಿದರೆ ಪಕ್ಷದ ಮರ್ಯಾದೆ ಹೋಗುತ್ತೆ ಎಂದು ಹೇಳಿದ್ದರು.

  ಆ ಮೇಲೆ ರಾಜೀವ್​ ಗಾಂಧಿ ಅವರು ನನ್ನ ಬಗ್ಗೆ ಮಾಹಿತಿ ಪಡೆಯುವಂತೆ ಅವರ ಆಪ್ತ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದರಂತೆ, ಆ ಕಾರ್ಯದರ್ಶಿ ಅವರು ರಿಪೋರ್ಟ್ ಕೊಟ್ಟ ಬಳಿಕ ದೂರು ಕೊಟ್ಟ ಸಂಸದರಿಗೆ ರಾಜೀವ್ ಗಾಂಧಿ ತಿಳಿ ಹೇಳಿದ್ದರು. ಯಾರನ್ನೂ ಕೇವಲ ಎಂದು ತಿಳಿಯಬೇಡಿ, ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಳೆಯಬೇಡಿ, ಅಂತಹ ಜನರೇ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ದೂರು ಕೊಟ್ಟ ಸಂಸದರಿಗೆ ಬುದ್ದಿ ಹೇಳಿದ್ದರಂತೆ ಎಂದು ಡಿ.ಕೆ.ಶಿವಕುಮಾರ್​ ತಮ್ಮ ರಾಜಕೀಯ ಜೀವನದಲ್ಲಿ ನಡೆದ ಘಟನೆಯನ್ನು ಕಾರ್ಯಕ್ರಮದ ವೇಳೆ ಮೆಲುಕು ಹಾಕಿದರು.

  ನಂತರ, ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ವಿರುದ್ದ ಕಿಡಿಕಾರಿದ ಅವರು, ನಾವು ಈ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಬೇಕು ಎಂದು ಅಂದುಕೊಂಡಿದ್ದೆವು, ಸರ್ಕಾರ ನಮಗೆ ಅವಕಾಶ ಕೊಡಲಿಲ್ಲ. ಆದರೆ ಬಿಜೆಪಿಯವರು ಇಡೀ ರಾಜ್ಯದಾದ್ಯಂತ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಅವರದೇ ಸರ್ಕಾರ ಇರುವ ಕಾರಣ ಅವರವರೇ, ತಮಗೆ ಬೇಕಾದಂತೆ ಕಾನೂನು ಮಾಡಿಕೊಳ್ಳುತ್ತಿದ್ದಾರೆ. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಲ್ಲವೂ ಸರಿಯೇ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು.

  ಸಂಸದ ಭಗವಂತ ಖೂಬಾ ಸ್ವಾಗತದ ವೇಳೆ ಬಂದೂಕಿನಿಂದ ಗುಂಡು ಹಾರಿಸಿ ಅನಾಗರಿಕರತರ ನಡೆದುಕೊಳ್ಳಲಾಗಿದೆ. ಒಬ್ಬರು ಕೇಂದ್ರ ಸಚಿವರ ಎದುರು ಈ ಘಟನೆ ನಡೆದಿದೆ, ಆಗ ಡಿವೈಎಸ್ ಪಿ ಸೇರಿದಂತೆ ಎಲ್ಲಾ ಪೊಲೀಸರು ಅಲ್ಲೇ ಇದ್ದರು. ಎಸ್​ಪಿ ಅಲ್ಲಿ ಇದ್ರೋ ಇಲ್ವೋ ಗೊತ್ತಿಲ್ಲ, ಆದರೆ ಒಬ್ಬರ ವಿರುದ್ದವೂ ಸರಿಯಾದ ಕ್ರಮ ತೆಗೆದುಕೊಂಡಿಲ್ಲ, ನಾವು ಈಗ ಪೊಲೀಸರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ. ಎಲ್ಲರನ್ನೂ ಹೀಗೆ ಈ ರೀತಿ ಬಿಟ್ಟುಕೊಂಡು ಬಂದರೆ ಹೇಗೆ, ನಮ್ಮ ರಾಜ್ಯದ ಸುವ್ಯವಸ್ಥೆ ಏನಾಗಬೇಡ ಎಂದು ಸರ್ಕಾರದ ಧೋರಣೆ ವಿರುದ್ದ ವ್ಯಂಗ್ಯವಾಡಿದರು.  ಸಿ.ಎಸ್.ದ್ವಾರಕನಾಥ್ ಕಾಂಗ್ರೆಸ್ ಸೇರ್ಪಡೆ

  ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಪ್ರಸಿದ್ದ ವಕೀಲರಾದ ಸಿ.ಎಸ್.ದ್ವಾರಕನಾಥ್ ಅವರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾದರು.  2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಇವರು ಈಗ ಕಾಂಗ್ರೆಸ್​ ಕೈ ಹಿಡಿದಿದ್ದಾರೆ.

  ಇದ್ನನ್ನೂ ಓದಿ:  Opposition meet: ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ನಾಯಕರ ಸಭೆ

  ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ  ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ,ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ‌ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಸೇರಿದಂತೆ ಹಲವು  ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: