Ramangara: ದಾರಿಯಲ್ಲಿ ಹಳ್ಳ, ದಿಣ್ಣೆ, ಕಲ್ಲಿನದ್ದೆ ದರ್ಬಾರ್! ಪ್ರಯಾಣಿಕರು ಸುಸ್ತು 

ವರ್ಷಗಳೇ ಕಳೆದರೂ ಡಾಂಬರು ಕಾಣದ ರಸ್ತೆ, ದಾರಿಯುದ್ದಕ್ಕೂ ತಗ್ಗು, ದಿನ್ನೆಗಳದ್ದೇ ದರ್ಬಾರ್‌ ವಾಹನ ಸಂಚಾರ ಇರಲಿ, ಪಾದಚಾರಿಗಳು ಸಂಚಾರ ಮಾಡುವುದು ಕಷ್ಟ. ಹೌದು, ಮಾಗಡಿ ತಾಲೂಕಿನ ಕುದೂರು ಮುಖ್ಯ ರಸ್ತೆಯ ಪರಿಸ್ಥಿತಿ ಇದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಮನಗರ(ಜೂ.17): ನಾವೇನು ಇನ್ನೂ ಶಿಲಾಯುಗದಲ್ಲೇ ಇದ್ದೇವೆಯೇ? ಇದೇನು ರಸ್ತೆಯೂ ಅಥವಾ ಗುಡ್ಡಗಾಡು ಪ್ರದೇಶವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ವರ್ಷಗಳೇ ಕಳೆದರೂ ಡಾಂಬರು ಕಾಣದ ರಸ್ತೆ (Road), ದಾರಿಯುದ್ದಕ್ಕೂ ತಗ್ಗು, ದಿನ್ನೆಗಳದ್ದೇ ದರ್ಬಾರ್‌ ವಾಹನ ಸಂಚಾರ ಇರಲಿ, ಪಾದಚಾರಿಗಳು ಸಂಚಾರ (Travel) ಮಾಡುವುದು ಕಷ್ಟ. ಹೌದು, ಮಾಗಡಿ ತಾಲೂಕಿನ ಕುದೂರು ಮುಖ್ಯ ರಸ್ತೆಯ ಪರಿಸ್ಥಿತಿ ಇದಾಗಿದೆ. ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಈ ರಸ್ತೆಯಲ್ಲಿ ಗುಂಡಿಗಳ (Potholes) ದರ್ಬಾರೇ ಹೆಚ್ಚಾಗಿದೆ. ರಸ್ತೆಗೆ ಹಾಕಿದ್ದ ಎಲ್ಲಾ ಕಲ್ಲುಗಳು ಕಿತ್ತು ಆಳುದ್ದದ ಗುಂಡಿಗಳು ಬಿದ್ದಿವೆ.

ಇಲ್ಲಿ ಸಂಚಾರ ಮಾಡಬೇಕೆಂದರೆ ಪ್ರಾಣವನ್ನೇ ಕೈಯಲ್ಲಿಟ್ಟುಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಮಳೆಗಾಲದಲ್ಲಿ ಓಡಾಡುವುದೇ ದುಸ್ಸಾಹಸವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ಆಳದ ಗುಂಡಿಗಳು ಬಿದ್ದು ಗಬ್ಬೆದ್ದು ಹೋಗಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಜನಪ್ರತಿನಿಧಿಗಳು ತಲೆ ಕೆಡೆಸಿಕೊಂಡಿಲ್ಲ.

ಗ್ರಾಮಸ್ಥರಿಗೆ ರಸ್ತೆಯ ಗೋಳು

ಕೇವಲ ಚುನಾವಣೆ ಬಂದಾಗ ಮಾತ್ರ ಹಳ್ಳಿಗಳ ಕಡೆ ತಲೆ ಹಾಕಿ, ಮಲಗುವ ರಾಜಕಾರಣಿಗಳಿಗೆ ಮಿಕ್ಕ ಸಂದರ್ಭದಲ್ಲಿ ಪ್ರಯಾಣಿಕರ ಹಾಗೂ ಗ್ರಾಮಸ್ಥರ ಗೋಳು ಕೇಳಿಸುವುದಿಲ್ಲವೇ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀವ ಕೈಯಲ್ಲಿ ಹಿಡಿದು ಸಂಚಾರ:

ಕುದೂರಿನ ಮುಖ್ಯರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನವನ್ನು ನಡೆಸಬೇಕು. ಗರ್ಭಿಣಿಯರು ಈ ರಸ್ತೆಯ ಮೇಲೆ ಸಂಚರಿಸಲು ಹೆದರುವಂತಹ ಪರಿ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಜನ ಸಾಮಾನ್ಯರು ಸಂಚರಿಸಬೇಕಾದರೆ ಯಮ ಧರ್ಮನಿಗೆ ಡೆತ್‌ ನೋಟ್‌ ಬರೆದು ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಂಚಾರ ಮಾಡಬೇಕಾದ ಮಟ್ಟಕ್ಕೆ ರಸ್ತೆ ಹಾಳಾಗಿದೆ.

ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿದ್ದು, ಅಪಘಾತಕ್ಕೆ ಕಾದು ಬಾಯಿ ತೆರೆದಿರುವಂತೆ ಭಾಸವಾಗುತ್ತಿವೆ. ಈ ರಸ್ತೆಯಲ್ಲಿ ವಾಹನಗಳು ಚಲಿಸುವಾಗ, ವಾಹನ ಸಂಚಾರಿಸುತ್ತವೆಯೋ ಅಥವಾ ನರ್ತಿಸುತ್ತವೇಯೋಎಂಬ ಅನುಮಾನ ಸವಾರರಲ್ಲಿ ಮೂಡುತ್ತಿದೆ.

ಇದನ್ನೂ ಓದಿ: Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!

ರಸ್ತೆ ಅಗಲೀಕರಣ ನೆಪವೊಡ್ಡಿ ಮರಗಳು ನಾಶ:

ರಸ್ತೆ ಅಗಲೀಕರಣ ನೆಪವೊಡ್ಡಿ ರಸ್ತೆಯ ಪಕ್ಕದಲ್ಲಿದ್ದ ಬೃಹತ್‌ ಗಾತ್ರದ ಮರಗಳನ್ನು ಕಡಿದು, ಎಂಟು ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿಪಡಿಸದೆ ಇರುವುದರಿಂದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, 10 ದಿನಗಳಲ್ಲಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿ ಹೋಗಿ, ಎರಡು ತಿಂಗಳು ಕಳೆದರೂ ಇನ್ನೂ ಕೆಲಸ ಆರಂಭವಾಗದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.

ಕಾಮಗಾರಿ ಪ್ರಾರಂಭಿಸುವ ಮನ್ಸೂಚನೆ ಕಾಣುತ್ತಿಲ್ಲ:

ರಸ್ತೆ ಅಭಿವೃದ್ಧಿ ಕುರಿತು ಶಾಸಕರ ಗಮನಕ್ಕೆ ತಂದ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಎರಡು ತಿಂಗಳಾದರೂ ರಸ್ತೆ ಕಾಮಗಾರಿ ಪ್ರಾರಂಭವಾಗುವ ಯಾವುದೇ ಮನ್ಸೂಚನೆ ಕಾಣುತ್ತಿಲ್ಲ. ಕುದೂರಿನ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವುದಕ್ಕೆ ಇನ್ನೇಷ್ಟು ವರ್ಷ ಕಾಯಬೇಕು.

ಇದನ್ನೂ ಓದಿ: Kolara: ರೈತನ ದೂರಿನಿಂದ ಬಯಲಾಯ್ತು ಅಂತರರಾಜ್ಯ ಗೊಬ್ಬರ ಮಾರಾಟ ಜಾಲ!

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರ ಮೇಲೆ ಕುದೂರು ಮುಖ್ಯ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಒತ್ತಡ ಏರಿ ಕಾಮಗಾರಿಯನ್ನು ಆರಂಭಿಸುವ ಕೆಲಸ ಮಾಡಬೇಕಿದ್ದ ಕುದೂರು ಗ್ರಾಪಂ, ಈ ವಿಷಯವಾಗಿ ಬೇಜವಾಬ್ದಾರಿ ತೋರಿದೆ. ಜನರ ಬಳಿ ಮತ ಕೇಳುವಾಗಿದ್ದ ಆಸಕ್ತಿಈಗಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಇದ್ದಂತಹ ಸಹಕಾರ, ಅಭಿವೃದ್ಧಿ ವಿಚಾರದಲ್ಲಿಲ್ಲ.ಅಧಿಕಾರಿಗಳಿಂದ ಕೆಲಸ ಮಾಡಿಸಿ, ಗ್ರಾಮೀಣ ಭಾಗದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುವುದಕ್ಕೆ ಮನಸ್ಸಿಲ್ಲ.
Published by:Divya D
First published: