• Home
  • »
  • News
  • »
  • state
  • »
  • ಈಗ ಮದುವೆ, ತಿಥಿಗಳಿಗೆ ಬರ್ತಿರೋ ಕುಮಾರಸ್ವಾಮಿ 4 ವರ್ಷಗಳಿಂದ ಎಲ್ಲಿದ್ದರು? : CP Yogeeshwara ಮಾತಿನೇಟು

ಈಗ ಮದುವೆ, ತಿಥಿಗಳಿಗೆ ಬರ್ತಿರೋ ಕುಮಾರಸ್ವಾಮಿ 4 ವರ್ಷಗಳಿಂದ ಎಲ್ಲಿದ್ದರು? : CP Yogeeshwara ಮಾತಿನೇಟು

ಸಿಪಿ ಯೋಗೇಶ್ವರ್, ಎಚ್​.ಡಿ.ಕುಮಾರಸ್ವಾಮಿ

ಸಿಪಿ ಯೋಗೇಶ್ವರ್, ಎಚ್​.ಡಿ.ಕುಮಾರಸ್ವಾಮಿ

Ramanagara Politics : ಈಗ ಕುಮಾರಸ್ವಾಮಿ ಮುಂಜಾನೆ ಎದ್ದು ತಾಲೂಕಿಗೆ ಬರುತ್ತಿದ್ದಾರೆ. ತಿಥಿ-ಮದುವೆಗಳಿಗೆ ಬರುತ್ತಿದ್ದಾರೆ, ಆದರೆ ಕಳೆದ 4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ರು ಎಂದು ಪ್ರಶ್ನೆ ಮಾಡಿದರು. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ HDK ಆಕ್ಟೀವ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಂದೆ ಓದಿ ...
  • Share this:

ರಾಮನಗರ : ಮಾಜಿ ಸಿಎಂ ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಕಿಡಿಕಾರಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್(CP Yogeeshwara) , ಅವರ ಕ್ಷೇತ್ರದ ಮೇಲಿನ ಉದಾಸೀನತೆ ಅವರ ಆಡಳಿತ ವೈಫಲ್ಯದಿಂದ ಬೇಸತ್ತು ಕಾರ್ಯಕರ್ತರು ಬಿಜೆಪಿ (BJP) ಸೇರುತ್ತಿದ್ದಾರೆ.‌ ಕ್ಷೇತ್ರದ ಜನರಿಗೆ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವ ಬೆಳೆದಿದೆ. ಅವರ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. 3-4 ಮಂದಿ ಕಂಟ್ರಾಕ್ಟರ್ ಮೂಲಕ ತಾಲೂಕು ಆಡಳಿತ ನಡೆಸುವ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ನಾನು ಚನ್ನಪಟ್ಟಣದಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಇದು ಚುನಾವಣಾ ಸಂದರ್ಭ ಅಲ್ಲಾ ಹಾಗಾಗಿ ಹಣ ಕೊಟ್ಟು ಕಾರ್ಯಕರ್ತರನ್ನ ಬಿಜೆಪಿಗೆ ಸೆಳೆಯುತ್ತಿಲ್ಲ. ಅವರ ಪಕ್ಷದಲ್ಲೆ ಬೇಸತ್ತು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಬರುತ್ತಿದ್ದಾರೆ. 


ಇದನ್ನೂ ಓದಿ: ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಕೊಲೆಯ ಟೂಲ್ ಕಿಟ್ ರೂವಾರಿಗಳು ಯಾರು? HD Kumaraswamy ಪ್ರಶ್ನೆ


4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ರು


ಈಗ ಕುಮಾರಸ್ವಾಮಿ ಮುಂಜಾನೆ ಎದ್ದು ತಾಲೂಕಿಗೆ ಬರುತ್ತಿದ್ದಾರೆ. ತಿಥಿ-ಮದುವೆಗಳಿಗೆ ಬರುತ್ತಿದ್ದಾರೆ, ಆದರೆ ಕಳೆದ 4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ರು ಎಂದು ಪ್ರಶ್ನೆ ಮಾಡಿದರು. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ HDK ಆಕ್ಟೀವ್ ಆಗಿದ್ದಾರೆ. ನನಗೆ ಕುಮಾರಸ್ವಾಮಿ ಹಾಗೂ ಡಿ.ಕೆ ಬ್ರದರ್ಸ್ ಇಬ್ಬರು 25 ವರ್ಷಗಳಿಂದ ವಿರೋಧಿಗಳೇ, ನನಗೆ ಇಬ್ಬರು ನಾಯಕರು ಸಮಾನ ಶತ್ರುಗಳು. ನನ್ನ ಹಾಗೂ ಕುಮಾರಸ್ವಾಮಿ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ. ನನಗೆ ಯಾವ ಸಚಿವ ಸ್ಥಾನವು ಬೇಡ ಕೇವಲ ಪಕ್ಷ ಸಂಘಟನೆ ಮಾತ್ರ ಮಾಡ್ತೇನೆ. ನನ್ನ ಇತಿಮಿತಿಯಲ್ಲಿ ಎಲ್ಲೆಲ್ಲೆ ಪಕ್ಷ ಸಂಘಟನೆ ಮಾಡಬಹುದು ಅಂತಹ ಕಡೆ ಸಂಘಟನೆ ಮಾಡುತ್ತೇನೆಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದರು.


ಹರ್ಷ ಕುಟುಂಬಕ್ಕೆ ಒಂದು ಲಕ್ಷ ರೂ. 


ಶಿವಮೊಗ್ಗದಲ್ಲಿನ ಹಿಂದೂ ಯುವಕ ಹರ್ಷ ಹತ್ಯೆಯನ್ನ ಖಂಡಿಸಿ ರಾಮನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಪ್ರಾರಂಭಿಸಿ ಎಂ.ಜಿ.ರಸ್ತೆಯಲ್ಲಿ ಜಾಥ ನಡೆಸಲು ನಿರ್ಧಾರ ಮಾಡಿದರು. ಈ ಸಂದರ್ಭದಲ್ಲಿ ಅವಕಾಶ ಇಲ್ಲ ಎಂದ ಪೊಲೀಸರ ಜತೆಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.‌ ನಂತರ ರಾಮನಗರದ ಎಸ್ಪಿ ಕಚೇರಿ ಬಳಿ ಬಂದು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಪ್ರತಿಭಟನೆಗೆ ಯೋಗೇಶ್ವರ್ ಸಹ ಸೇರಿಕೊಂಡು ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ವರ್ ಸಮಾಜದಲ್ಲಿ ಬೆಳಕು ಕಾಣಬೇಕಿದ್ದ ಒಬ್ಬ ಯುವಕನನ್ನ ಕೊಲೆ ಮಾಡಲಾಗಿದೆ. ಸರಕಾರ ಕೂಡ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನ ಕೈಗೊಳ್ಳುತ್ತಿದೆ.ನಾನು ವೈಯಕ್ತಿಕವಾಗಿ ಹರ್ಷ ಅವರ ಕುಟುಂಬಕ್ಕೆ ಒಂದು ಲಕ್ಷ ನೀಡುತ್ತೇನೆಂದು ಘೋಷಣೆ ಮಾಡಿದರು.


ಇದನ್ನೂ ಓದಿ: JP Naddaಗೆ ಅಭಿನಂದನೆ ಸಲ್ಲಿಸಿ, HDK ಬಳಿ ಟ್ರೈನಿಂಗ್ ತೊಗೊಳೋದಾಗಿ ಹೇಳಿದ DK Shivakumar


ಇದು ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ, ಅದಕ್ಕೆ ದಿಕ್ಕುತಪ್ಪಿಸುತ್ತಿದ್ದಾರೆ 


ಅಮಾಯಕ ಯುವಕರಲ್ಲಿ ಭಯ ಹುಟ್ಟಿಸುವಂತದು ನಾಚಿಕೆ ಗೇಡಿನ ಸಂಗತಿ ಇದು. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುತ್ತಿದ್ದ ಯುವಕ ಅವನು‌. ಆದರೆ ಅವನ ಹೋರಾಟವನ್ನ ಹತ್ತಿಕ್ಕಲು ಕೊಲೆ ಮಾಡಲಾಗಿದೆ. ಸರಕಾರ ಈ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕು.ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದೆ. ಹಾಗಾಗಿ ಸಚಿವ ಈಶ್ವರಪ್ಪ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಇಡೀ ಸದನದ ಕಲಾಪವನ್ನೆ ಮೊಟಕು ಗೊಳಿಸುವ ರೀತಿ ಮಾಡಿದ್ದಾರೆಂದು ಕಿಡಿಕಾರಿದರು.

Published by:Kavya V
First published: