HOME » NEWS » State » RAMANAGARA RAMANAGARA FRAMERS THROW TOMATO ON ROAD FOR NOT GET GOOD PRICE RHHSN ATVR

ಕೊರೋನಾ 2ನೇ ಅಲೆಗೆ ತತ್ತರಿಸಿದ ರೈತರು; ಸಾವಿರಾರು ಕೆಜಿ ಟೊಮ್ಯಾಟೊ ರಸ್ತೆಗೆ ಸುರಿದು ಆಕ್ರೋಶ

ಕೊರೋನಾ ಮಹಾಮಾರಿ ನಡುವೆ ಹಾಗೂ ವಿದ್ಯುತ್, ನೀರಿನ ಅಭಾವದ ನಡುವೆಯು ರೈತರು ಕಷ್ಟಪಟ್ಟು ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಇದೇ ರೀತಿ ರಾಮನಗರ ಜಿಲ್ಲೆಯ ಅದೆಷ್ಟೋ ಜನ ರೈತರು ತಾವು ಬೆಳೆದ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ಕಂಗಾಲಾಗಿದ್ದಾರೆ.

news18-kannada
Updated:May 6, 2021, 3:32 PM IST
ಕೊರೋನಾ 2ನೇ ಅಲೆಗೆ ತತ್ತರಿಸಿದ ರೈತರು; ಸಾವಿರಾರು ಕೆಜಿ ಟೊಮ್ಯಾಟೊ ರಸ್ತೆಗೆ ಸುರಿದು ಆಕ್ರೋಶ
ಟೊಮ್ಯಾಟೋ ರಸ್ತೆ ಬದಿಗೆ ಸುರಿದಿರುವುದು.
  • Share this:
ರಾಮನಗರ: ಒಂದು ಕಡೆ ರಾಜ್ಯವನ್ನು ಕೊರೋನಾ ಮಹಾಮಾರಿ ಬಿಟ್ಟು ಬಿಡದಂತೆ ಕಾಡುತ್ತಿದೆ. ಇನ್ನೊಂದು ಕಡೆ ಕೊರೋನಾ ರೈತರ ಬದುಕಿಗೆ ಹೊಡೆತ ನೀಡಿದೆ. ಕಷ್ಟ ಪಟ್ಟು ಬೆಳೆದ ಟೊಮ್ಯಾಟೊ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ರಸ್ತೆಯಲ್ಲಿ ಟೊಮ್ಯಾಟೊ ಸುರಿದು ತಮ್ಮ ಅಳಲನ್ನ ತೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಕ್ರೇಟ್ ಗಳ ಮೂಲಕ ಟೊಮ್ಯಾಟೊವನ್ನು ತುಂಬಿಕೊಂಡು ಹೋಗ್ತಿದ್ದಾರೆ. ಆದರೆ, ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗದ ಕಾರಣಕ್ಕೆ ಬೆಳೆಯನ್ನು ರಸ್ತೆಯಲ್ಲಿ ಸುರಿದು ಹೋಗಿದ್ದಾರೆ.

ಹೌದು ಟೊಮ್ಯಾಟೊ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತ ಇದೀಗ ರಸ್ತೆಗೆ ಟೊಮ್ಯಾಟೊ ಸುರಿದಿದ್ದಾನೆ. ರಾಮನಗರ ತಾಲೂಕಿನ ಲಕ್ಕೊಜನಹಳ್ಳಿ ಗ್ರಾಮದ ರಸ್ತೆಯಲ್ಲಿ ಸುಮಾರು 1 ಟನ್ ಗೂ ಹೆಚ್ಚು ಟೊಮ್ಯಾಟೊವನ್ನು ರಸ್ತೆಯ ಪಕ್ಕದಲ್ಲಿ ಸುರಿದು ಹೋಗಿದ್ದಾರೆ. ಕೆ‌.ಜಿ ಟೊಮ್ಯಾಟೊ 2-3 ರೂಗೆ ಇಳಿದು ಪಾತಾಳ ಸೇರಿದೆ. ರೈತ ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ: ಮೂರನೇ ಅಲೆ ಎದುರಿಸಲು ಸಿದ್ಧರಾಗಿ, ದೇಶವ್ಯಾಪಿ ಆಕ್ಸಿಜನ್ ಸಂಗ್ರಹ ಅತ್ಯಗತ್ಯ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ಅಂದ ಹಾಗೇ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ರೈತರು ಟೊಮ್ಯಾಟೊ ಬೆಳೆ ನಂಬಿ ಜೀವನ ನಡೆಸುತ್ತಿದ್ದಾರೆ. ವಿದ್ಯುತ್ ಅಭಾವ ಕೂಲಿ ಕಾರ್ಮಿಕರ ಅಭಾವದ ನಡುವೆಯು ರೈತರು ರಾತ್ರಿ ಹಗಲೆನ್ನದೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲಾ. ರಾಜ್ಯ ಸರ್ಕಾರ ಕೂಡ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಆಗ್ರಹ ಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಚನ್ನಪಟ್ಟಣದ ಸಾಮಾಜಿಕ ಹೋರಾಟಗಾರ ಆರ್.ಸುರೇಶ್ ಎಂಬುವರು ರೈತರ ಕಷ್ಟದ ಬಗ್ಗೆ ವಿಡಿಯೋ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೊರೋನಾ ಎರಡನೇ ಅಲೆ ಪ್ರಾರಂಭವಾದ ಬಳಿಕ ರೈತರ ಬೆಳೆಗಳನ್ನು ಕೇಳುವವರೇ ಇಲ್ಲ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
Youtube Video

ಒಟ್ಟಾರೆ ಕೊರೋನಾ ಮಹಾಮಾರಿ ನಡುವೆ ಹಾಗೂ ವಿದ್ಯುತ್, ನೀರಿನ ಅಭಾವದ ನಡುವೆಯು ರೈತರು ಕಷ್ಟಪಟ್ಟು ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಇದೇ ರೀತಿ ರಾಮನಗರ ಜಿಲ್ಲೆಯ ಅದೆಷ್ಟೋ ಜನ ರೈತರು ತಾವು ಬೆಳೆದ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ಕಂಗಾಲಾಗಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರ ಸಹ ಅಂತಹ ರೈತರಿಗೆ ಯಾವುದೇ ರೀತಿಯ ನೆರವು ನೀಡುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಬೆಳೆ ಬೆಳೆಯುತ್ತಾರೆ. ಆದರೆ ಅವರಿಗೆ ಪ್ರಕೃತಿ ವಿಕೋಪದಲ್ಲಿ ನಷ್ಟವಾದ ಬೆಳೆಗಳಿಗೆ ಸರ್ಕಾರ ಯಾವುದೇ ನೆರವು ನೀಡದಿರುವುದು ರೈತರಿಗೆ ಮತ್ತಷ್ಟು ಬೇಸರ ತಂದಿದೆ.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: May 6, 2021, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories