ಟೊಮ್ಯಾಟೊ ಬೆಲೆ ಕುಸಿತ: ಹೆದ್ದಾರಿಗೆ ಸುರಿದು ರಾಮನಗರ ರೈತರ ಆಕ್ರೋಶ

ಇಲ್ಲಿನ ರೈತರು ಕೆಜಿಗೆ 20 ರಿಂದ 25 ಕ್ಕೆ ಮಾರಾಟ ಮಾಡಿದರೆ. ಕೆಲ ದಲ್ಲಾಳಿಗಳು ಬೇರೆಡೆಯಿಂದ ಕೆಜಿಗೆ 10 ರೂಪಾಯಿಯಂತೆ ಖರೀದಿ ಮಾಡಿಕೊಂಡು ಬಂದು ರಾಮನಗರ ಜಿಲ್ಲೆಯಲ್ಲಿ ಅದನ್ನ 15 ರೂಪಾಯಿ ಗೆ ಮಾರಾಟ ಮಾಡುತ್ತಾರೆ.

ಹೆದ್ದಾರಿಗೆ ಟೊಮ್ಯಾಟೊ ಸುರಿದು ಪ್ರತಿಭಟನೆ ನಡೆಸಿದ ರಾಮನಗರ ರೈತರು

ಹೆದ್ದಾರಿಗೆ ಟೊಮ್ಯಾಟೊ ಸುರಿದು ಪ್ರತಿಭಟನೆ ನಡೆಸಿದ ರಾಮನಗರ ರೈತರು

  • Share this:
ರಾಮನಗರ: ಟೊಮ್ಯಾಟೊ ಬೆಲೆ ಕೆಜಿಗೆ 3 ರೂಪಾಯಿಗೆ ಕುಸಿದ ಹಿನ್ನೆಲೆ ರಸ್ತೆಗೆ ಟೊಮ್ಯಾಟೊ ಸುರಿದು ರೈತರ ಆಕ್ರೋಶ ವ್ಯಕ್ತಪಡಿಸಿದ ಘಟನೆ ರಾಮನಗರದ ಎಪಿಎಂಸಿ ಮಾರ್ಕೆಟ್ ಬಳಿ ನಡೆಯಿತು.‌

ರಾಮನಗರದ ಎಪಿಎಂಸಿ ಮಾರುಕಟ್ಟೆ ಮುಂದೆ ರೈತರ ಪ್ರತಿಭಟನೆ ನಡೆಯಿತು, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮ್ಯಾಟೊ ಸುರಿದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಜಿ ಟೊಮ್ಯಾಟೊಗೆ 3 ರೂಪಾಯಿ ಯಾವ ನ್ಯಾಯ ಎಂದು ರೈತರು ಆಕ್ರೋಶಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತರ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲ, ಮಧ್ಯವರ್ತಿಗಳದ್ದೆ ಹಾವಳಿ

ರೈತರು ಕಷ್ಟಪಟ್ಟು ಸಾಲ ಸೋಲ ಮಾಡಿಕೊಂಡು ವ್ಯವಸಾಯ ಮಾಡುತ್ತಾರೆ. ಆದರೆ ಅವರು ಬೆಳೆದ ಬೆಳೆಗಳಿಗೆ ಮಾತ್ರ ನ್ಯಾಯಯುತವಾದ ಬೆಂಬಲ ಬೆಲೆ ಮಾತ್ರ ಸಿಗುದಿಲ್ಲ. ಎಷ್ಟೇ ಅಚ್ಚುಕಟ್ಟಾಗಿ ಬೆಳೆಗಳನ್ನ ಬೆಳೆದರೂ ಸಹ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತ ಕಂಗಾಲಾಗುತ್ತಿದ್ದಾನೆ. ರಾಮನಗರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಯುವ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತಾರೆ. ಆದರೆ ಕೆಲ ಮಧ್ಯವರ್ತಿಗಳು ಮಾತ್ರ ಬೇರೆಡೆಯಿಂದ ಟೊಮ್ಯಾಟೊವನ್ನ ಖರೀದಿ ಮಾಡಿಕೊಂಡು ರಾಮನಗರ - ಚನ್ನಪಟ್ಟಣ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಾರೆ ಎಂದು ಪ್ರತಿಭಟನಾ ನಿರತ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ರೈತರು ಕೆಜಿಗೆ 20 ರಿಂದ 25 ಕ್ಕೆ ಮಾರಾಟ ಮಾಡಿದರೆ. ಕೆಲ ದಲ್ಲಾಳಿಗಳು ಬೇರೆಡೆಯಿಂದ ಕೆಜಿಗೆ 10 ರೂಪಾಯಿಯಂತೆ ಖರೀದಿ ಮಾಡಿಕೊಂಡು ಬಂದು ರಾಮನಗರ ಜಿಲ್ಲೆಯಲ್ಲಿ ಅದನ್ನ 15 ರೂಪಾಯಿ ಗೆ ಮಾರಾಟ ಮಾಡುತ್ತಾರೆ. ಆಗ ಸ್ವಾಭಾವಿಕವಾಗಿ ನೈಜ ರೈತನಿಗೆ ಅನ್ಯಾಯವಾಗುತ್ತೆ. ಆದರೆ ಈ ವಿಚಾರವಾಗಿ ಯಾರು ಸಹ ಕಟ್ಟುನಿಟ್ಟಿನ ಕ್ರಮವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಬೆಳವಣಿಗೆಗಳಿಂದಲೇ ಇವತ್ತು ಟೊಮ್ಯಾಟೊ ಬೆಲೆ ಕುಸಿತ ಕಾಣಲು ಒಂದು ಕಾರಣ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಎಪಿಎಂಸಿಗಳಲ್ಲಿಯೂ ಸಹ ರೈತಪರವಾದ ಯಾವುದೇ ಯೋಜನೆಗಳು ಈವರೆಗೆ ಶಾಶ್ವತವಾಗಿ ಅನುಷ್ಟಾನಕ್ಕೆ ಬಂದಿಲ್ಲ. ಸಂಬಂಧವೇ ಇಲ್ಲದ ಜನರು ರೈತರ ಹೆಸರಿನಲ್ಲಿ ಮಾರ್ಕೆಟ್ ಗೆ ಬಂದು ಬೇರೆಡೆಯಿಂದ ಬೆಳೆಗಳನ್ನ ಖರೀದಿ ಮಾಡಿ ಅತ್ಯಂತ ಕಡಿಮೆ ಬೆಲೆಗೆ ಬೆಳೆಗಳನ್ನ ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಕಷ್ಟಪಟ್ಟು ಬೆಳೆದು ವ್ಯಾಪಾರ ಮಾಡಲು ಬರುವ ರೈತರಿಗೆ ಪದೇಪದೇ ಅನ್ಯಾಯವಾಗುತ್ತಲೇ ಇದೇ.‌

ಇದನ್ನೂ ಓದಿ: Mekedatu Project| ಮೇಕೆದಾಟು ವಿವಾದ; ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ವಿರುದ್ಧ 3 ನಿರ್ಣಯಗಳನ್ನು ಕೈಗೊಂಡ ಸ್ಟಾಲಿನ್ ಸರ್ಕಾರ

ಆದರೆ ಈ ವಿಚಾರವಾಗಿ ಯಾವ ಸರ್ಕಾರ, ಸ್ಥಳೀಯ ಶಾಸಕ, ಸಚಿವರು, ಜನಪ್ರತಿನಿಧಿಗಳು ಸಹ ಕ್ರಮವಹಿಸುವುದಿಲ್ಲ. ಈ ಹಿನ್ನೆಲೆ ರೈತರ ಬೆಳೆಗಳಿಗೆ ಅನ್ಯಾಯವಾಗುತ್ತಲೇ ಇದೇ. ಹಾಗಾಗಿ ಈ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣವಾಗಿ ಕಾನೂನು ರೂಪಿಸಬೇಕಿದೆ. ಜೊತೆಗೆ ರೈತರ ಬೆಳೆಗಳಿಗೆ ಇಂತಹ ಹೀನಾಯ ಬೆಲೆ ಸಿಗದಂತೆ ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಈ ಕೆಳಮಟ್ಟದ ಬೆಲೆಯಿಂದಾಗಿ ರೈತರು ವ್ಯವಸಾಯವನ್ನೇ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಿ.
Published by:HR Ramesh
First published: