• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚನ್ನಪಟ್ಟಣದ ಕೋಡಂಬಳ್ಳಿಯಲ್ಲಿ ಇಲ್ಲ ಕೊರೋನಾ ಭಯ; ಜನರದ್ದೇ ದರ್ಬಾರ್, ಅಧಿಕಾರಿಗಳು ನಿಷ್ಕ್ರಿಯ

ಚನ್ನಪಟ್ಟಣದ ಕೋಡಂಬಳ್ಳಿಯಲ್ಲಿ ಇಲ್ಲ ಕೊರೋನಾ ಭಯ; ಜನರದ್ದೇ ದರ್ಬಾರ್, ಅಧಿಕಾರಿಗಳು ನಿಷ್ಕ್ರಿಯ

ಚನ್ನಪಟ್ಟಣ

ಚನ್ನಪಟ್ಟಣ

ರಾಮನಗರ ಜಿಲ್ಲೆ ಚನ್ನಪಟ್ಟಣದ ಕೋಡಂಬಳ್ಳಿ, ಕೊಂಡಾಪುರ, ಶಾನುಭೋಗನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಆದರೂ ಸಹ ಈ ಭಾಗದ ಜನರು ಕೊರೋನಾ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.

  • Share this:

ರಾಮನಗರ: ಕೊರೋನಾ ಎರಡನೇ ಅಲೆ ಹೆಚ್ಚಾಗಿದ್ದರೂ ಸಹ ರಾಮನಗರ ಜಿಲ್ಲೆ ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಜನರಿಗೆ ಯಾವುದೇ ಭಯವಿಲ್ಲದಂತೆ ಕಾಣುತ್ತಿದೆ. ಅಗತ್ಯ ವಸ್ತುಗಳ ಅಂಗಡಿಗಳಿಗೆ ಕೆಲ ಸಮಯವನ್ನ ನಿಗದಿ ಮಾಡಲಾಗಿದೆ. ಆದರೆ ಈ ಗ್ರಾಮದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳ ಜೊತೆಗೆ ಕೆಲ ಟೀ ಶಾಪ್ಸ್ ಹಾಗೂ ಇತರೆ ಅಂಗಡಿಗಳು ಓಪನ್ ಆಗ್ತಿವೆ. ಇದರ ಜೊತೆಗೆ ಕೊರೋನಾ ನಿಯಮಗಳನ್ನ ಯಾರೂ ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಇಲ್ಲದೇ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ ಎಂದು ಹೇಳಬಹುದು.


ಈ ವ್ಯಾಪ್ತಿಯಲ್ಲಿ 44 ಕೊರೋನಾ ಕೇಸ್ ಪತ್ತೆ: ಇದೊಂದೇ ಭಾಗದಲ್ಲಿ 44 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಕೋಡಂಬಳ್ಳಿ, ಕೊಂಡಾಪುರ, ಶಾನುಭೋಗನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಆದರೂ ಸಹ ಈ ಭಾಗದ ಜನರು ಕೊರೋನಾ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇದರ ಜೊತೆಗೆ ಕೋಡಂಬಳ್ಳಿ ಗ್ರಾಮ ವಾಣಿಜ್ಯ ವಿಭಾಗದಲ್ಲಿ ಮುಂದುವರೆದಿದ್ದು ಅಕ್ಕಪಕ್ಕದ ಹತ್ತಾರು ಗ್ರಾಮದ ಜನರು ಕೋಡಂಬಳ್ಳಿಯಲ್ಲಿ ಸೇರುತ್ತಾರೆ. ದಿನಸಿ ಅಂಗಡಿ, ಕಟಿಂಗ್ ಶಾಪ್, ಬೇಕರಿ, ಹೋಟೆಲ್, ಬಾರ್, ಪೆಟ್ರೋಲ್ ಬಂಕ್, ಚಾಟ್ಸ್ ಸೆಂಟರ್ ಸೇರಿದಂತೆ ಹಲವು ಬಗೆಯ ಅಂಗಡಿಗಳು ಕೋಡಂಬಳ್ಳಿಯಲ್ಲಿ ಲಭ್ಯವಿದೆ. ಹಾಗಾಗಿ ಇಲ್ಲಿಯೇ ಜನರು ಬೇಕಾಬಿಟ್ಟಿ ವರ್ತನೆ ತೋರಿದರೆ ಕೊರೋನಾ ತಡೆಯಲು ಹೇಗೆ ಸಾಧ್ಯ ಎಂದು ಈ ಭಾಗದ ಪ್ರಜ್ಞಾವಂತರು ಪ್ರಶ್ನೆ ಮಾಡಿದ್ದಾರೆ.


ಅಧಿಕಾರಿಗಳ ಆದೇಶಕ್ಕೂ ಜನರ ಡೋಂಟ್ ಕೇರ್:
ಮುಖ್ಯವಾಗಿ ಈ ಭಾಗದ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳ ವರ್ಗದವರು ಮಾಡಿರುವ ಆದೇಶಕ್ಕೂ ಸಹ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಚನ್ನಪಟ್ಟಣ ತಾಲೂಕು ಆರೋಗ್ಯಾಧಿಕಾರಿ ರಾಜುರನ್ನ ಪ್ರಶ್ನೆ ಮಾಡಿದಾಗ ನಮ್ಮಿಂದ ಏನು ಮಾಡಲು ಸಾಧ್ಯ, ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ಆದರೆ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸುತ್ತೇನೆಂದು ಹೇಳುತ್ತಾರೆ.


ಇದನ್ನೂ ಓದಿ: ನಾಳೆ ಲಾಕ್​ಡೌನ್; ಇಂದು ಬೆಂಗಳೂರು ಗಿಜಿಗಿಜಿ; ರೈಲ್ವೆ ನಿಲ್ದಾಣಗಳಲ್ಲಿ ಕಾರ್ಮಿಕರ ಸ್ತೋಮ


ಈ ಬಗ್ಗೆ ತಹಶೀಲ್ದಾರ್ ನಾಗೇಶ್ ಅವರನ್ನ ಕೇಳಿದಾಗ, ನಾವು ಈಗಾಗಲೇ ಕೋಡಂಬಳ್ಳಿ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಆದರೆ ಈ ಬಗ್ಗೆ ಯಾರು ಸಹ ದೂರು ಕೊಡದ ಹಿನ್ನೆಲೆ ನಾವು ಕ್ರಮವಹಿಸಲು ಆಗಿಲ್ಲ ಎನ್ನುತ್ತಾರೆ.


ಒಟ್ಟಾರೆ ಕೋಡಂಬಳ್ಳಿ ವ್ಯಾಪ್ತಿಯಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಯಾಗುತ್ತಿದ್ದು ಕೊರೋನಾ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ಜೊತೆಗೆ ಆರೋಗ್ಯಾಧಿಕಾರಿಯೂ ಸಹ ಯಾವುದೇ ಕ್ರಮವಹಿಸುತ್ತಿಲ್ಲ. ಆದರೆ ಮುಂದೊಂದು ದಿನ‌ ಇಲ್ಲಿ ಕೊರೋನಾ ಕೇಕೆ ಹಾಕಿ ಸಾವುನೋವು ಆದರೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಉತ್ತರ ಮೌನ. ಹಾಗಾಗಿ ಜನರೇ ಎಚ್ಚರಿಕೆವಹಿಸಬೇಕಿದೆ.‌


ವರದಿ: ಎ.ಟಿ.ವೆಂಕಟೇಶ್

Published by:Vijayasarthy SN
First published: