ರಾಮನಗರ: ಕಾಂಗ್ರೆಸ್(Congress) ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ (Mekedatu Padayatra) ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕನಕಪುರದ ಮಾದಪ್ಪನದೊಡ್ಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ಸರ್ಕಾರ, ನನ್ನ ಮೇಲೆ ಹಾಗೂ ಪಕ್ಷದ ಮೇಲೆ ದೊಡ್ಡ ಸಂಚು ರೂಪಿಸಿದೆ. ಹೇಗಾದರೂ ಮಾಡಿ ಈ ಪಾದಯಾತ್ರೆ ನಿಲ್ಲಿಸುವ ಸಂಚು ರೀಪಿಸಿದ್ದಾರೆ ಎಂದು ಆರೋಪಿಸಿದರು. ನಿನ್ನೆ ರಾತ್ರಿ ನನ್ನನ್ನು ಬಂದು ಭೇಟಿ ಮಾಡಿ, ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಹೇಳಿದ ಆರೋಗ್ಯ ಅಧಿಕಾರಿಗೆ ಪಾಸಿಟಿವ್ ಎಂದು ಹೇಳುತ್ತಿದ್ದಾರೆ. ಇವುಗಳ ಹಿಂದೆ ಬಿಜೆಪಿ ಸರ್ಕಾರದ ಷಢ್ಯಂತ್ರ ಇದೆ. ಕೋವಿಡ್ ಹೆಚ್ಚಾಗಿರುವುದು ರಾಜ್ಯ ಸರ್ಕಾರದಿಂದ, ಈ ಇರುವುದು ಬಿಜೆಪಿ ಓಮಿಕ್ರಾನ್. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ನಂಬರ್ ಏರಿಕೆ ಮಾಡ್ತಿರುವ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಪಾಪ ಬೊಮ್ಮಾಯಿಗೆ ಈ ವಿದ್ಯೆ ಇಲ್ಲ..
ನನ್ನಗೆ ಕೊರೋನಾ ಸರ್ಟಿಫಿಕೇಟ್ ಕೊಡಲು ಸರ್ಕಾರ ಯತ್ನಿಸುತ್ತಿದೆ. ನನ್ನ ಭೇಟಿ ಮಾಡಿದ ಆಫೀಸರ್ಗೆ ಕೊರೋನಾ ಅಂತೆ.. ಅವರನ್ನು ನೀವು ಯಾಕ್ರೀ ನನ್ನ ಬಳಿ ಕಳುಹಿಸಿದ್ರಿ? ಈ ವಿದ್ಯೆಯನ್ನು ಎಲ್ಲಿ ಕಲಿತ್ರಿ..? ಪಾಪ ಈ ವಿದ್ಯೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಇಲ್ಲ. ಆದರೆ ಇದು ಹೋಮ್ ಮಿನಿಸ್ಟರ್, ಆರೋಗ್ಯ ಸಚಿವರ ವಿದ್ಯೆ ಇರಬೇಕು. ಯಾಕೆಂದರೆ ಈ ಡಿಎಚ್ಒ ಅವರ ಕೈ ಕೆಳಗೆ ಬರೋದು. ಗೃಹ ಸಚಿವರ ಊರಲ್ಲೇ ಜಾತ್ರೆ ಮಾಡಿದ್ದಾರೆ, ಯಾಕೆ ಕೇಸ್ ರಿಜಿಸ್ಟರ್ ಮಾಡಿಸಿಲ್ಲ. ಸಿಎಂ ರಾಜಕೀಯ ಕಾರ್ಯದರ್ಶಿ ಜನರು ಸೇರಿಸಿದ್ದಾರೆ, ಅವರ ವಿರುದ್ದ ಯಾಕೆ ಕ್ರಮ ಇಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಾಳೆ ರಾಮನಗರಕ್ಕೆ ಸಚಿವ ಅಶ್ವತ್ಥ ನಾರಾಯಣ ಎಂಟ್ರಿ.. ಮತ್ತೆ DK Brothers ಜೊತೆ ಜಟಾಪಟಿ ಶುರುವಾಗುತ್ತಾ?
ಎಲ್ಲರ ಮೇಲೂ ಕೇಸ್ ಹಾಕಿ..
ಬಿಜೆಪಿ ನಾಯಕರ ಜನ ಸೇರಿಸಿರುವ ವೀಡಿಯೋವನ್ನು ಡಿಕೆಶಿ ಪ್ರದರ್ಶಿಸಿದರು. ಸ್ಟೇಜ್ ಮೇಲೆ ಇರೋ 30 ಜನರ ವಿರುದ್ಧ ಕ್ರಮ ಹಾಕಿದ್ದಾರೆ. ಅವ್ರ ಮಾತ್ರ ಇದ್ರಾ..? ಯಾಕೆ ಜನರು ಸಾವಿರಾರು ಸಂಖ್ಯೆಯಲ್ಲಿ ಇರಲಿಲ್ವಾ..? ಅವರ ವಿರುದ್ಧ ಯಾಕೆ ದೂರು ದಾಖಲು ಮಾಡಿಲ್ಲ..? ಇನ್ನೂ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಯಾಕೆ ದೂರು ದಾಖಲು ಮಾಡಿಲ್ಲ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ, ಕಾನೂನು ಹೋರಾಟದ ಜೊತೆಗೆ ಪೊಲಿಟಿಕಲ್ ಫೈಟ್ ಮಾಡ್ತೇನೆ.. ಬಿಬಿಎಂಪಿ ಚುನಾವಣೆ ಇರುವಾಗ ಈ ಪಾದಯಾತ್ರೆ ನೋಡಿ, ಸಹಿಸುತ್ತಿಲ್ಲ.ನೀವು ಜನರು ಸೇರಿಸಿದರ ಬಗ್ಗೆ ದೂರು ದಾಖಲು ಮಾಡಿಲ್ಲ, ಅಂದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳೇ ನಂಗೆ ಮಾಹಿತಿ ಕೊಟ್ಟಿದ್ದಾರೆ..
ನನ್ನ ಭೇಟಿ ಮಾಡಿ ಹೋದವನಿಗೆ ಪಾಸಿಟಿವ್ ಅಂತೆ. ನನ್ನ ಏನು ಮಾಡಬೇಕು ಅಂದುಕೊಂಡಿದ್ದಾರೆ. ಇಂತಹ ನೀಚ ರಾಜಕಾರಣವನ್ನು ನಾನು ಎಲ್ಲಿಯೂ ನೋಡಿಲ್ಲ. ನಾನು ಏನು ಕೊರೋನಾ ಬಂದು ಕೆಳಗೆ ಬಿದ್ದಿಗೋದ್ದೀನಾ..? ಕೊರೋನಾ ಸರ್ಟಿಫಿಕೇಟ್ ಕೊಡಿಸಲು ಸರ್ಕಾರ ಯತ್ನಿಸುತ್ತಿದೆ. ಈ ಬಗ್ಗೆ ಅಲ್ಲಿರುವ ಮಂತ್ರಿಗಳು, ಅಧಿಕಾರಿಗಳೇ ನನಗೆ ಹೇಳ್ತಾರೆ. ಹುಷಾರು ನಿಮ್ಮನ್ನು ಪರೀಕ್ಷೆ ಮಾಡಲು ಬರ್ತಾರೆ, ಪಾಸಿಟಿವ್ ಮಾಡಲು ಅಂತಾ. ನಿಮಗೆ ಹೇಗೇ ಮಾಹಿತಿ ಸಿಗುತ್ತೋ, ಹಾಗೇ ನಮಗೂ ಮಾಹಿತಿ ಸಿಗುತ್ತೆ ಎಂದು ಡಿಕೆಶಿ ತಿರುಗೇಟು ಕೊಟ್ಟರು.
ಲಾಕ್ಡೌನ್ ಬಗ್ಗೆ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಲಾಕ್ಡೌನ್ ಮಾಡಿ ಜನರನ್ನು ಸಾಯಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಮೂರು ದಿನಗಳು ನಾನು ಏನು ಮಾತಾಡಲ್ಲ, ಮೌನವಾಗಿ ನಾನು ಪಾದಯಾತ್ರೆ ಮಾಡ್ತೀನಿ. ಮೌನವಾಗಿಯೇ ನಾನು ನಡೀತ್ತೀನಿ, ಈ ಮೌನ ಪಾದಯಾತ್ರೆ ನಿಮ್ಮ ವಿರುದ್ದ ಅಲ್ಲ. ಯಾರಿಗೆ ಈ ಮೌನ ಪ್ರತಿಭಟನೆಯೋ ಅವರಿಗೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ