Nikhil Kumaraswamy- ರಾಮನಗರ ಕ್ಷೇತ್ರಾದ್ಯಂತ ನಿಖಿಲ್ ಕುಮಾರಸ್ವಾಮಿ ಓಡಾಟ; 2023ಕ್ಕೆ ತಯಾರಿಯೇ?

Ramanagara Politics- ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ವಿವಿಧೆಡೆ ಭೇಟಿ ನೀಡುತ್ತಿದ್ದಾರೆ. ಇಂದು ಕನಕಪುರದ ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕುಣಿದುಕುಪ್ಪಳಿಸಿದ್ಧಾರೆ.

ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

  • Share this:
ರಾಮನಗರ (ಕನಕಪುರ): ಸ್ಯಾಂಡಲ್ ವುಡ್ ನಟ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (JDS youth state president Nikhil Kumaraswamy) ಅವರು ಕನಕಪುರದಲ್ಲಿ ಮಕ್ಕಳ ಜೊತೆ ಬೆರೆತು ಕೆಲ ಕಾಲ ಸಮಯ ಕಳೆದಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದ ಕೊಳ್ಳಿಗಾನಹಳ್ಳಿ (Kolliganahalli village of Kanakapura) ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ ಮಕ್ಕಳ ಜೊತೆಗೆ ಕಾಲ ಕಳೆದ ಘಟನೆ ನಡೆಯಿತು. ನಿಖಿಲ್ ಕುಮಾರಸ್ವಾಮಿ ಅವರನ್ನ ಕಂಡು ಕುಣಿದು ಕುಪ್ಪಳಿಸಿದ ಮಕ್ಕಳು ಸಂತಸ ಪಟ್ಟರು. ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಪುಟ್ಟ ಮಕ್ಕಳಿಗೆ ಚಾಕಲೇಟ್ ನೀಡಿದರು‌.

ಕೋವಿಡ್ ನಿಂದಾಗಿ ಇಪ್ಪತ್ತು ತಿಂಗಳು ಮುಚ್ಚಿದ್ದ ಶಾಲೆ ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ತೆರೆದಿದೆ (School Reopened after decline in Covid cases). ಮಕ್ಕಳ ಓದಿನ ಕುರಿತು ನಿಖಿಲ್ ಕುಮಾರಸ್ವಾಮಿ ವಿಚಾರಣೆ ನಡೆಸಿ ಮಕ್ಕಳನ್ನು ಚೆನ್ನಾಗಿ ಓದುವಂತೆ ತಿಳಿಹೇಳಿ ಪ್ರೋತ್ಸಾಹಿಸಿದರು.

ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಓಡಾಟ:

2023 ರ ಸಾರ್ವತ್ರಿಕ ಚುನಾವಣೆಯಲ್ಲಿ ನಟ ಹಾಗೂ ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆಂದು ಹೇಳಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ನಿಖಿಲ್ ಕುಮಾರಸ್ವಾಮಿ ಸಹ ರಾಮನಗರ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ರಾಮನಗರ ಕ್ಷೇತ್ರದ ಕಾರ್ಯಕರ್ತರ ಸಭೆಗಳನ್ನ ನಡೆಸುತ್ತಿದ್ದಾರೆ. ಈ ಅಂಶಗಳನ್ನ ಗಮನಿಸಿದರೆ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗ್ತಾರೆಂಬ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿವೆ.

ಇದನ್ನೂ ಓದಿ: 40% Commission Govt ಆರೋಪ: ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ Congress ನಿಯೋಗ

ಯುವಪಡೆಯನ್ನ ಕಟ್ಟುವಲ್ಲಿ ನಿಖಿಲ್ ಕುಮಾರಸ್ವಾಮಿ ಬ್ಯುಸಿ‌ :

ಜೆಡಿಎಸ್ ಪಕ್ಷಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಹ ಯುವನಾಯಕರು. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನ ಕಟ್ಟುವಲ್ಲಿ ಈ ಇಬ್ಬರೂ ನಾಯಕರು ಸಹ ಹೆಚ್ಚಾಗಿ ಶ್ರಮವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿಯೂ ಸಹ ನಿಖಿಲ್ ಕುಮಾರಸ್ವಾಮಿ ಯುವಪಡೆಯ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಜೊತೆಗೆ ನಿಖಿಲ್ ಅವರಿಗೂ ಸಹ ರಾಮನಗರದ ಯುವ ಸಮೂಹ ದಿನಕಳೆದಂತೆ ಹತ್ತಿರವಾಗ್ತಿದೆ.

ಇದನ್ನೂ ಓದಿ: Puttur Collage ವಿದ್ಯಾರ್ಥಿನಿಯರ ವಿಷಯಕ್ಕೆ ಶುರುವಾದ ಗಲಾಟೆಗೆ ಕೋಮುದ್ವೇಷದ ಬಣ್ಣ..!?

ತಂದೆ ಹೆಚ್ ಡಿ ಕೆ, ತಾತ ದೇವೇಗೌಡರ ಕೃಪೆಯಲ್ಲಿ ನಿಖಿಲ್ ಕುಮಾರಸ್ವಾಮಿ:

ರಾಮನಗರ ಕ್ಷೇತ್ರದಿಂದ ಒಂದು ವೇಳೆ ಭವಿಷ್ಯದ ರಾಜಕಾರಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ನಿಖಿಲ್ ಅವರಿಗೆ ಜಯ ಗಳಿಸುವುದು ಅಷ್ಟು ಸುಲಭದ ಮಾತು ಸಹ ಇಲ್ಲ. ಗೆಲುವಿಗಾಗಿ ಸಾಕಷ್ಟು ಪರಿಶ್ರಮ ವಹಿಸಬೇಕಿದೆ. ಪ್ರತಿಪಕ್ಷ ಕಾಂಗ್ರೆಸ್ ಇಲ್ಲಿ ಸದೃಢವಾಗಿ ಬೆಳೆದಿದೆ. ಇನ್ನು ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ.

ಆದರೆ ನಿಖಿಲ್ ಅವರಿಗೆ ತಂದೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ತಾತ ಮಾಜಿ‌ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ನಾಮಬಲದ ಜೊತೆಗೆ ಜೆಡಿಎಸ್ ಪಕ್ಷದ ವರ್ಚಸ್ಸು ಬಹಳಷ್ಟು ಪರಿಣಾಮ ಬೀರಲಿದೆ. ಜೊತೆಗೆ ಮುಂದಿನ ಬಾರಿಯ ಚುನಾವಣೆಯ ಸಮಯಕ್ಕೆ ಕುಮಾರಸ್ವಾಮಿ - ದೇವೇಗೌಡರ ರಾಜಕೀಯ ವರ್ಚಸ್ಸು ಯಾವ ರೀತಿ ಇರಲಿದೆ ಎಂಬುದರ ಮೇಲೆ ಜೆಡಿಎಸ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: