HOME » NEWS » State » RAMANAGARA NIKHIL KUMARASWAMY GAVE HINT HIS FATHER WILL AGAIN BECAME CHIEF MINISTER POST RHHSN ATVR

ತಂದೆ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕ ಸುಳಿವು ನೀಡಿದ ಪುತ್ರ ನಿಖಿಲ್ ಕುಮಾರಸ್ವಾಮಿ?!

ಕುಮಾರಸ್ವಾಮಿ ಸಹ ಈ ಸಂದರ್ಭದಲ್ಲಿ ರಾಜಕೀಯ ಮಾಡೋದು ಬೇಕಿಲ್ಲ, ಜನರ ಜೊತೆಗಿದ್ದು ಕಷ್ಟ-ಸುಖ ಕೇಳುವುದು ಸೂಕ್ತ ಎಂದಿರುವ ಮಾತಿನ ಹಿಂದಿನ ಅರ್ಥವೂ ಸಹ ಇದೇ ಆಗಿದೆ.

news18-kannada
Updated:June 23, 2021, 9:56 PM IST
ತಂದೆ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕ ಸುಳಿವು ನೀಡಿದ ಪುತ್ರ ನಿಖಿಲ್ ಕುಮಾರಸ್ವಾಮಿ?!
ರಾಮನಗರ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ 200 ಜನ ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ.
  • Share this:
ರಾಮನಗರ : ಬಿಜೆಪಿ - ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಕಿತ್ತಾಟದ ವಿಚಾರವಾಗಿ ರಾಮನಗರದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಎರಡೂ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.  ರಾಮನಗರ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ 200 ಜನ ಪೌರ ಕಾರ್ಮಿಕರಿಗೆ ಫುಡ್ ಕಿಟ್ ಗಳನ್ನ ಜೆಡಿಎಸ್ ಪಕ್ಷದ ವತಿಯಿಂದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಜನರ ಕಷ್ಟ ಕೇಳುವುದಕ್ಕಿಂತ ಇವರಿಗೆ ಸಿಎಂ ಕುರ್ಚಿಯೇ ಹೆಚ್ಚಾಗಿದೆ. ಜನರಿಗೆ ಯಾರು ಸಿಎಂ ಆಗ್ತಾರೆ ಅನ್ನೋದು ಬೇಕಿಲ್ಲ. ಆದರೆ ಈಗ ಎರಡನೇ ಅಲೆ ಮುಗಿದು, ಮೂರನೇ ಅಲೆ ಬರಲಿದೆ. ಈಗಾಗಲೇ ಕೆಲವೆಡೆ ಮಕ್ಕಳಿಗೆ ಮೂರನೇ ಅಲೆಯ ವೈರಸ್ ಬಂದಿದೆ. ಸರ್ಕಾರ ಸರಿಯಾಗಿ ಬೆಡ್ ವ್ಯವಸ್ಥೆ ಮಾಡುತ್ತಿಲ್ಲ. ಅದರ ಬಗ್ಗೆ ಗಮನ ಹರಿಸುವುದನ್ನ ಬಿಟ್ಟು, ಸಿಎಂ ಕುರ್ಚಿಗೆ ಕಿತ್ತಾಟ ನಡೆಯುತ್ತಿದೆ. ಹಾಗಾಗಿ ಜನರ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.

ಇನ್ನು ರಾಜ್ಯದ ಜನರು ಎರಡೂ ರಾಷ್ಟ್ರೀಯ ಪಕ್ಷಗಳನ್ನ ನೋಡ್ತಿದ್ದಾರೆ. ಆ ಪಕ್ಷಗಳ ನಡವಳಿಕೆಗಳನ್ನು ಗಮನಿಸುತ್ತಿದ್ದಾರೆ. ಜನತಾ ದಳ ಪ್ರಾದೇಶಿಕ ಪಕ್ಷವಾಗಿ ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ. ಆ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಇನ್ನು ರಾಮನಗರ ಜಿಲ್ಲೆ ನಮಗೆ ಮನೆ ಇದ್ದಂತೆ. ನಾನು ರಾಮನಗರ ಜಿಲ್ಲೆಯ ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಪಕ್ಷ ಸಂಘಟನೆ ಮಾಡ್ತಿದ್ದೇನೆ. ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಈಗಾಗಲೇ ಪಕ್ಷದ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಲಾಗಿದೆ. ಈ ಕೂಡಲೇ ಎಲ್ಲವನ್ನು ಮರು ಆಯ್ಕೆ ಮಾಡಲಾಗುತ್ತೆ. ಸೋಮವಾರ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. ಅಗತ್ಯ ವಸ್ತುಗಳು, ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಹೋರಾಟ ಮಾಡಲಿದೆ ಎಂದು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಇದನ್ನು ಓದಿ: ಲಾಕ್ ಡೌನ್ ಬಳಿಕ ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ಬಾಲಕಾರ್ಮಿಕ ಪದ್ಧತಿ

ಹೆಚ್.ಡಿ.ಕೆ ಸಿಎಂ ಹಾದಿಯ ಸುಳಿವು ಬಿಚ್ಚಿಟ್ಟ ಪುತ್ರ ನಿಖಿಲ್

ರಾಜ್ಯದಲ್ಲಿ ಬಿಜೆಪಿ - ಕಾಂಗ್ರೆಸ್ ಪಕ್ಷದ ನಾಯಕರು ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿರುವ ಈ ಸಮಯದಲ್ಲಿ ಜೆಡಿಎಸ್ ಪಕ್ಷ ಮಾತ್ರ ಜನರ ನಡುವೆ ಇದ್ದು ಕೊರೋನಾ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಿನ‌ ಬಾರಿ ಸಿಎಂ ಆಗ್ತಾರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ಲೆಕ್ಕಾಚಾರ ಇತ್ತು. ಆದರೆ ಈಗ ಕಾಂಗ್ರೆಸ್ ನ ಮತ್ತೊಬ್ಬ ಪ್ರಭಾವಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸಿಎಂ ರೇಸ್ ನಲ್ಲಿರುವುದು ಡಿಕೆಶಿ ಗೆ ತಲೆನೋವಾಗಿದೆ.
Youtube Video

ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನ ರಾಜ್ಯದ ಜನರು ನೋಡ್ತಿದ್ದಾರೆ. ಈ ಸಂದರ್ಭದಲ್ಲಿ ಜನರ ಮಧ್ಯೆ ಇದ್ದು ಕೆಲಸ ಮಾಡಬೇಕಿದ್ದ ಇವರು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಹೇಳಿರುವ ನಿಖಿಲ್ ಕುಮಾರಸ್ವಾಮಿ ಪ್ರಾದೇಶಿಕ ಪಕ್ಷವೂ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎನ್ನುವ ಮೂಲಕ‌ ತಂದೆ ಕುಮಾರಸ್ವಾಮಿರ ಅವರ ಹೆಸರು ಬಳಸದೇ ಅವರೇ ಸಿಎಂ ಆದರೆ ಜನರ ಕಷ್ಟಕ್ಕೆ ಸ್ಪಂದನೆ ಸಿಗಲಿದೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿ ಸಹ ಈ ಸಂದರ್ಭದಲ್ಲಿ ರಾಜಕೀಯ ಮಾಡೋದು ಬೇಕಿಲ್ಲ, ಜನರ ಜೊತೆಗಿದ್ದು ಕಷ್ಟ-ಸುಖ ಕೇಳುವುದು ಸೂಕ್ತ ಎಂದಿರುವ ಮಾತಿನ ಹಿಂದಿನ ಅರ್ಥವೂ ಸಹ ಇದೇ ಆಗಿದೆ.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: June 23, 2021, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories