Oscar Fernandes- ಆಸ್ಕರ್ ಫರ್ನಾಂಡಿಸ್ ಓರ್ವ ಸರಳ ಸಜ್ಜನಿಕೆ ರಾಜಕಾರಣಿ: ಸಂಸದ ಡಿ.ಕೆ. ಸುರೇಶ್

DK Suresh in Ramanagara- ಆಸ್ಕರ್ ಫರ್ನಾಂಡಿಸ್ ಅವರನ್ನ ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ರಾಜ್ಯಕ್ಕೆ ಅವರ ಕೊಡುಗೆ ಅಪಾರ ಇದೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕಂಬನಿ ಮಿಡಿದಿದ್ದಾರೆ.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ರಾಮನಗರ: ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಸಾವಿಗೆ ಸಂಸದ ಡಿ. ಕೆ. ಸುರೇಶ್ (Congress MP DK Suresh) ಅವರು ರಾಮನಗರದಲ್ಲಿ ಸಂತಾಪ ಸೂಚಿಸಿದ್ದಾರೆ. ಪಕ್ಷದ ಹಿರಿಯ ನಾಯಕನ ಅಗಲಿಕೆಗೆ ಸಂತಾಪ ಸೂಚಿಸಿದ ಡಿ. ಕೆ. ಸುರೇಶ್, ಕೇಂದ್ರದ ಸಚಿವರಾಗಿ ಆಸ್ಕರ್ ಫರ್ನಾಂಡಿಸ್ (Oscar Fernandes) ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಪಾರ ಕೊಡುಗೆ ರಾಜ್ಯಕ್ಕೂ ಸಹ ಇದೆ ಎಂದಿದ್ಧಾರೆ. ಆಸ್ಕರ್ ಫರ್ನಾಂಡಿಸ್ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳ ರಾಜಕೀಯ ನಾಯಕರಾಗಿದ್ದವರು.‌ ಇವತ್ತು ಅವರನ್ನ ನಾವು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಇದು ಬಹಳ ದೊಡ್ಡ ನಷ್ಟ. ‌ಈ ದುಃಖವನ್ನ ಭರಿಸುವ ಶಕ್ತಿಯನ್ನ ಅವರ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಅವರು ಕಂಬನಿ ಮಿಡಿದರು.

ಬಿಜೆಪಿ ನಾಯಕರು ಆತ್ಮವಲೋಕನ ಮಾಡಿಕೊಳ್ಳಲಿ: ಕೇಂದ್ರ - ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ (Congress protest in Karnataka and Nation-wide) ವಿಚಾರವಾಗಿ ಬಿಜೆಪಿ ನಾಯಕರ ಟೀಕೆಗೆ ರಾಮನಗರದಲ್ಲಿ ಸಂಸದ ಡಿ. ಕೆ. ಸುರೇಶ್ ಅವರು ತಿರುಗೇಟು ಕೊಟ್ಟರು. ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿವೆ. ಈ ಹಿಂದೆ 10, 20 ಪೈಸೆ ಪೆಟ್ರೋಲ್ - ಡೀಸೆಲ್‌ ಬೆಲೆ ಏರಿಕೆಯಾಗಿತ್ತು. ಆಗ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಯಾವ ರೀತಿ ಮಾತನಾಡಿದರು? ಅದರ ಬಗ್ಗೆ ಪ್ರಜ್ಞೆ ಇದೆಯಾ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ತಿಳಿಹೇಳಿದರು.

ಮಾತನಾಡಿದ್ರೆ ಎಲ್ಲರೂ ಮಾತನಾಡ್ತಾರೆ, ಇವರಿಗೆ ಅಧಿಕಾರ ಮಾತ್ರ ಮುಖ್ಯ. ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಬದುಕು ಕಷ್ಟವಾಗ್ತಿದೆ. ಜನರು ಉದ್ಯೋಗ ಕಳೆದುಕೊಳ್ತಿದ್ದಾರೆ. ಜನ ಭಯದ ವಾತಾವರಣದಲ್ಲಿದ್ದಾರೆ. ಆದರೆ ಬೆಲೆ ಏರಿಕೆ ತಡೆಯುವಲ್ಲಿ ಈ ಸರ್ಕಾರ ವಿಫಲವಾಗಿದೆ. ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಈ ಸರ್ಕಾರದ ವಿರುದ್ಧ ನಿರಂತರವಾಗಿ ರಾಜ್ಯ ಹಾಗೂ ದೇಶಾದ್ಯಂತ ಹೋರಾಟ ಮುಂದುವರೆಯುತ್ತೆ ಎಂದು ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Vaccine Record- 75 ಕೋಟಿ ಲಸಿಕೆ ದಾಖಲೆ: ಭಾರತದ ವೇಗಕ್ಕೆ ಬೆರಗಾದ ಡಬ್ಲ್ಯೂಎಚ್ಒ

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಬಡಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಕಾರಣವಾಗಿವೆ ಎಂದೂ ಅವರು ಕಿಡಿಕಾರಿದರು.

ಕೆ.ಎಸ್.ಆರ್.ಟಿ.ಸಿ ಇಲಾಖೆಗೆ (KSRTC) ಸಂಸದ ಡಿ. ಕೆ. ಸುರೇಶ್ ಕಟ್ಟುನಿಟ್ಟಿನ ಆದೇಶ:

ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಸಿದ ಸಂಸದ ಡಿ. ಕೆ. ಸುರೇಶ್ ಅವರು, ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದರು. ಕೊರೋನಾ ಬ್ರೇಕ್ ಮಧ್ಯೆ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಆದರೆ ಕೆಲ ರಿಮೋಟ್‌ ಏರಿಯಾಗೆ ಬಸ್ ಗಳು ಸಂಚರಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗ್ತಿದೆ. ಹಾಗಾಗಿ ಜಿಲ್ಲೆಯ ಗಡಿಭಾಗದಲ್ಲಿ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ದಿಶಾ ಸಭೆಯಲ್ಲಿ ಡಿ. ಕೆ. ಸುರೇಶ್ ಸೂಚನೆ ನೀಡಿದರು‌.

ಇನ್ನು ಆದಾಯದ ನಿರೀಕ್ಷೆಯ ನೆಪದಲ್ಲಿ ಬಸ್ ಸಂಚಾರಕ್ಕೆ ಬ್ರೇಕ್ ಹಾಕಬಾರದು ಎಂದೂ ಅವರು ಆಗ್ರಹಿಸಿದರು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: