ಚನ್ನಪಟ್ಟಣಕ್ಕೆ 10 ಆಕ್ಸಿಜನ್ ಕಾನ್ಸಂಟ್ರೆಟರ್ ಕೊಡುಗೆ, ಕೊರೋನಾ ಸೋಂಕಿತರ ಭೇಟಿಯಾದ ಸಂಸದ ಡಿ.ಕೆ.ಸುರೇಶ್

ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನಾನು ನಿಮ್ಮ ಸೇವೆಗೆ ಸಿದ್ಧನಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮ್ಮ ಕಾರ್ಯಕರ್ತರು ಸಹಾಯ ಮಾಡಲಿದ್ದಾರೆ. ಯಾರಿಗೂ ಆತಂಕ‌ ಬೇಡ ಎಂದು  ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಆಕ್ಸಿಜನ್ ಕಾನ್ಸಂಟ್ರೆಟರ್ ವಿತರಿಸಿದ ಸಂಸದ ಡಿ.ಕೆ. ಸುರೇಶ್.

ಆಕ್ಸಿಜನ್ ಕಾನ್ಸಂಟ್ರೆಟರ್ ವಿತರಿಸಿದ ಸಂಸದ ಡಿ.ಕೆ. ಸುರೇಶ್.

  • Share this:
ಚನ್ನಪಟ್ಟಣ : ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ 10 ಉಚಿತ ಆಕ್ಸಿಜನ್ ಕಾನ್ಸಂಟ್ರೆಟರ್ ವಿತರಣೆ ಮಾಡುವ ಮೂಲಕ ಸಂಸದ ಡಿ.ಕೆ.ಸುರೇಶ್ ಉತ್ತಮ ಕಾರ್ಯ ಮಾಡಿದ್ದಾರೆ. ತಾಲೂಕಿನ 5 ಕೊರೋನಾ ಕೇರ್ ಸೆಂಟರ್ ಗಳಾದ ಹೊನ್ನನಾಯಕನಹಳ್ಳಿ, ಚಕ್ಕೆರೆ, ಜೆ.ಬ್ಯಾಡರಹಳ್ಳಿ, ಮಹದೇಶ್ವರ ನಗರ, ಸಾರ್ವಜನಿಕ ಆಸ್ಪತ್ರೆ  ಸೆಂಟರ್ ಗೂ ತಲಾ 2 ಆಕ್ಸಿಜನ್ ಕಾನ್ಸಂಟ್ರೆಟರ್ ಕೊಡಲಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಇದರ ಜೊತೆಗೆ ಚನ್ನಪಟ್ಟಣದ 5 ಕೋವಿಡ್ ಕೇರ್ ಸೆಂಟರ್​ ಗೆ ಭೇಟಿ ಕೊಟ್ಟು ಸೋಂಕಿತರ ಆರೋಗ್ಯ ವಿಚಾರಿಸಿದರು.

ಸೋಂಕಿತರಿಗೆ ಧೈರ್ಯ ತುಂಬಿದ ಡಿ.ಕೆ.ಸುರೇಶ್ ಮಾತನಾಡಿ, ನನ್ನ ಲೋಕಸಭಾ ಕ್ಷೇತ್ರದ ಎಲ್ಲಾ ಕೋವಿಡ್ ಕೇರ್ ಸೆಂಟರ್ ಗೂ ಭೇಟಿ ಕೊಡ್ತಿದ್ದೇನೆ. ಇವತ್ತು ಚನ್ನಪಟ್ಟಣಕ್ಕೆ 10 ಉಚಿತ ಆಕ್ಸಿಜನ್ ಕಾನ್ಸಂಟ್ರೆಟರ್ ನೀಡಿದ್ದೇನೆ.‌ ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಬೇಕು. ಯಾರು ಸಹ ಕೊರೋನಾಗೆ ಹೆದರಬಾರದು. ಧೈರ್ಯದಿಂದ ಎದುರಿಸಬೇಕು ಎಂದು ಮನವಿ ಮಾಡಿದರು‌. ಇನ್ನು ನಮ್ಮಿಂದ ಯಾವುದೇ ಸಹಾಯ ಬೇಕಾದರೂ ನಾವು ಮಾಡಲು ಸಿದ್ಧ ಎಂದು ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕೊರೋನಾ ಟೆಸ್ಟಿಂಗ್ ಕಡಿಮೆ ಮಾಡಿದ್ದಾರೆ, ಇದು ಸರಿಯಲ್ಲ

ಒಂದೆಡೆ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮುಂದುವರೆಸಬೇಕೋ, ಇಲ್ಲವೋ ಎಂಬ ಚರ್ಚೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ. ಈ ಬಗ್ಗೆ  ಮಾತನಾಡಿದ ಸಂಸದ ಡಿ.ಕೆ. ಸುರೇಶ್ ‌ಅವರು, ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಮುಂದುವರೆಸುವ ಬದಲು ಸೂಕ್ತವಾಗಿ ಕೊರೋನಾ ಟೆಸ್ಟಿಂಗ್ ನಡೆಸಲಿ. ಈಗ ನಮ್ಮ ರಾಮನಗರ ಜಿಲ್ಲೆಯಲ್ಲಿಯೇ ದಿನಕ್ಕೆ 500 ಟೆಸ್ಟಿಂಗ್ ಮಾತ್ರ ಮಾಡುತ್ತಿರುವ ಮಾಹಿತಿ ಇದೆ. ಆದರೆ ಕೊರೋನಾ ಲಾಕ್ ಡೌನ್ ಜಾರಿ ಇರುವ ಈ ಸಮಯದಲ್ಲಿ ಕನಿಷ್ಠ 2 ರಿಂದ 3 ಸಾವಿರ ಜನರಿಗೆ ಟೆಸ್ಟಿಂಗ್ ನಡೆಸಿದರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಲಿದೆ. ಆದರೆ ಈಗ ಟೆಸ್ಟಿಂಗ್ ಕಡಿಮೆ ಮಾಡಿದರೆ ಸೋಂಕು ನಿಯಂತ್ರಿಸಲು ಅಸಾಧ್ಯ ಎಂದರು.

ಇದನ್ನು ಓದಿ: Modi vs Mamata: ಬಂಗಾಳ ಮುಖ್ಯ ಕಾರ್ಯದರ್ಶಿ ನಿವೃತ್ತಿ; ಸಿಎಂ ಮುಖ್ಯ ಸಲಹೆಗಾರರಾಗಿ ನೇಮಿಸಿದ ಮಮತಾ ಬ್ಯಾನರ್ಜಿ!

ಪಿಪಿಇ ಕಿಟ್ ಇಲ್ಲದೇ ಸೋಂಕಿತರನ್ನು ಭೇಟಿ ಮಾಡಿದ ಸಂಸದ

ಚನ್ನಪಟ್ಟಣದ 5 ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿದ ಸಂಸದ ಡಿ.ಕೆ.ಸುರೇಶ್ ಪಿಪಿಇ ಕಿಟ್ ಧರಿಸದೆಯೇ ಸೋಂಕಿತರನ್ನ ಭೇಟಿ ಮಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಜನರಿಗೆ ನಾವು ಕೊರೋನಾ ಸೋಂಕಿನ ಬಗ್ಗೆ ಭಯ ತೋರಿಸಬಾರದು. ಬದಕಾಗಿ ಸೋಂಕಿತರ ಜೊತೆಗೆ ಧೈರ್ಯವಾಗಿ ಅವರ ಜೊತೆಗೆ ಮಾತನಾಡಬೇಕು. ಆಗ ಅವರಿಗೂ ಸಹ ಧೈರ್ಯ ಬರಲಿದ್ದು, ಆದಷ್ಟು ಬೇಗ ಸೋಂಕನ್ನ ದೂರ ಮಾಡಿ ಆರೋಗ್ಯವಂತರಾಗಿ ಹೊರಬರಲಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಜಿಲ್ಲೆಯ ಜನರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಯಾರು ಹೆದರಬೇಡಿ. ಧೈರ್ಯದಿಂದ ಕೊರೋನಾ ವಿರುದ್ಧ ಹೋರಾಟ ಮಾಡಿ. ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನಾನು ನಿಮ್ಮ ಸೇವೆಗೆ ಸಿದ್ಧನಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮ್ಮ ಕಾರ್ಯಕರ್ತರು ಸಹಾಯ ಮಾಡಲಿದ್ದಾರೆ. ಯಾರಿಗೂ ಆತಂಕ‌ ಬೇಡ ಎಂದು  ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ವರದಿ : ಎ.ಟಿ.ವೆಂಕಟೇಶ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: