ಅಂತಹವರಿಗೆ ದೇವರು ಒಳ್ಳೆಯದು ಮಾಡಲ್ಲ.. ರಾಮನಗರದಲ್ಲಿ ಕಣ್ಣೀರಾಕಿದ ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರದ ಜನ ನಮ್ಮ ಕುಟುಂಬವಿದ್ದಂತೆ. ನಿಮ್ಮ ಋಣ ನಮ್ಮ ಕುಟುಂಬದ ಮೇಲಿದೆ. ಆದರೆ ಕೆಲವರು ನಮ್ಮ ವಿರುದ್ಧವೇ ರಾಜಕೀಯ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ಹೆಸರು ಬಳಸದೇ ಅನಿತಾಕುಮಾರಸ್ವಾಮಿ ಟಾಂಗ್ ನೀಡಿದರು.

ಶಾಸಕಿ ಅನಿತಾ ಕುಮಾರಸ್ವಾಮಿ

ಶಾಸಕಿ ಅನಿತಾ ಕುಮಾರಸ್ವಾಮಿ

  • Share this:
ರಾಮನಗರ/ಹಾಸನ: ಸ್ಲಂ ಬೋರ್ಡ್ ವತಿಯಿಂದ ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಭಾವುಕರಾದರು. ಕೊತ್ತಿಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾವೋದ್ವೇಗಕ್ಕೆ ಒಳಗಾದ ಅವರು ಕಣ್ಣಲ್ಲಿ ನೀರು ತುಂಬಿಕೊಂಡರು. ನಂತರ ಮಾತನಾಡಿದ ಅವರು ಇಲ್ಲಿ ಕೆಲವರು ನಮ್ಮ ವಿರುದ್ಧ ರಾಜಕೀಯ ಮಾಡ್ತಿದ್ದಾರೆ. ಆದರೆ ಬಡವರ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಅಂತಹವರಿಗೆ ದೇವರು ಒಳ್ಳೆಯದು ಮಾಡಲ್ಲ. ರಾಮನಗರದ ಜನ ನಮ್ಮ ಕುಟುಂಬವಿದ್ದಂತೆ. ನಿಮ್ಮ ಋಣ ನಮ್ಮ ಕುಟುಂಬದ ಮೇಲಿದೆ. ಆದರೆ ಕೆಲವರು ನಮ್ಮ ವಿರುದ್ಧವೇ ರಾಜಕೀಯ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ಹೆಸರು ಬಳಸದೇ ಅನಿತಾಕುಮಾರಸ್ವಾಮಿ ಟಾಂಗ್ ನೀಡಿದರು.

ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ‌ ಅವರು ಶಾಸಕ ಪ್ರೀತಂ ಗೌಡಗೆ ತಿರುಗೇಟು ನೀಡಿದರು. ಯಾವ ಮಂತ್ರಿಗಳನ್ನು ಮನೆಗೆ ಬನ್ನಿ ಎಂದು ಯಾರನ್ನೂ ಕರೆಯಲ್ಲ, ಬಂದರೆ ಚೆನ್ನಾಗಿ ನೋಡಿಕೊಳ್ತೇವೆ. ಬರದೆ ಇದ್ದರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ. ಜೆಡಿಎಸ್ ನಾಯಕರ ಮನೆಗೆ ಯಾವ ನಾಯಕರು ಹೋಗಬಾರದು ಎಂಬ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದರು. ಸಿಎಂ ಒಂದು ಪಕ್ಷಕ್ಕೆ ಸೀಮಿತ ಆದವರಲ್ಲ, ಅವರು ಏನೆಂದು ಪ್ರಮಾಣವಚನ ಸ್ವೀಕಾರ ಮಾಡಿರ್ತಾರೆ. ದಯವಿಟ್ಟು ಯಾವ ಸಚಿವರು‌ ವಿಪಕ್ಷ ನಾಯಕರ ಮನೆಗೆ ಹೋಗಬೇಡಿ. ನಾವು ನಮ್ಮ ಹಣ ಖರ್ಚು ಮಾಡಿ ಅವರಿಗೆ ಏಕೆ ಬೈಯ್ಯೋ ಹಾಗೆ ಮಾಡ್ಬೇಕು. ಬಂದ್ರೆ ಒಂದು ಊಟ ಹಾಕ್ತೀವಿ, ಬರದಿದ್ರೆ ಅದೆ ದುಡ್ಡು ಉಳಿತು ಬುಡಿ ಅಂತೀವಿ ಎಂದು ಹೆಸರು ಹೇಳದೇ ಪ್ರೀತಂಗೌಡಗೆ ರೇವಣ್ಣ ತಿರುಗೇಟು ನೀಡಿದ್ರು.

ಇದನ್ನೂ ಓದಿ: ನಾನು ಸಿಎಂ ಆಗಿದ್ರೆ ಲಾಕ್‌ಡೌನ್ ವೇಳೆ 10 ಸಾವಿರ ಕೊಡ್ತಿದ್ದೆ; ಆದ್ರೆ ಅಪ್ಪ-ಮಗ ಲೂಟಿ ಹೊಡೆದ್ರು; ಸಿದ್ದರಾಮಯ್ಯ

ರಾಜ್ಯದಲ್ಲಿ ಜಿ.ಪಂ., ತಾ.ಪಂ. ಚುನಾವಣೆ ನಡೆಯಬೇಕಿದೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಬೇಕಿಲ್ಲ. ಚುನಾವಣೆ ಆಯೋಗ ಇದನ್ನು ಗಮನಿಸಬೇಕು. ಚುನಾಯಿತ ಪ್ರತಿನಿಧಿಗಳ ಆಳ್ವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ಚುನಾವಣೆ ನಗರದಲ್ಲಿ ನಡೆಯಲ್ಲ ಹಾಗಾಗಿ ಚುನಾವಣೆ ನಡೆಸಿ ಎಂದು ರೇವಣ್ಣ ಒತ್ತಾಯ ಮಾಡಿದರು. ಬೇಕಿದ್ದರೆ ಮತಗಟ್ಟೆಗಳನ್ನು ಹೆಚ್ಚು ಮಾಡಿ, ಅಧಿಕಾರಿಗಳ ಕೈಗೆ ಅಧಿಕಾರ ಕೊಡಬೇಡಿ. ಯಾವುದೋ ನೆಪ ಮಾಡಿ ಚುನಾವಣೆ ಪಾವಿತ್ರ್ಯತೆ ಹಾಳು ಮಾಡಬೇಡಿ ಎಂದರು.

ಹಾಸನ ಗ್ರಾಮಾಂತರ ಭಾಗದಲ್ಲಿ ಪಾಸಿಟಿವಿಟಿ ಕಡಿಮೆಯಾಗಿದೆ. ಬೆಳಗಾವಿ, ಹುಬ್ಬಳಿ, ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಮಾಡ್ತೀರಾ ಆದರೆ ಹಾಸನದಲ್ಲಿ ಚುನಾವಣೆ ಮಾಡೋಕೆ ಏನಾಗಿದೆ ಎಂದು ರೇವಣ್ಣ ಪ್ರಶ್ನಿಸಿದರು. ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಆಗಿದ್ದಾರೆ. ಸೆಪ್ಟೆಂಬರ್ ಮೊದಲನೆ ವಾರದಲ್ಲಿ ಕೊರೊನಾ ಮೂರನೇ ಅಲೆ ಆರಂಭ ಆಗುತ್ತೆ ಎನ್ನಲಾಗುತ್ತಿದೆ. ನಾನು ಸಿಎಂ ಹಾಗೂ ಅರೋಗ್ಯ ಸಚಿವರಿಗೆ ಮನವಿ ಮಾಡುತ್ತೇನೆ. ಕೊರೊನಾ ಮೂರನೇ ಅಲೆಗೆ ತಾಲ್ಲೂಕು, ಸಮುದಾಯದ ಆಸ್ಪತ್ರೆಗೆ ಬೇಕಾದ ಸೌಲಭ್ಯ ಕೊಡಿ. ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗುತ್ತೆ ಎಂದು ಚರ್ಚೆ ಆಗುತ್ತಿದೆ. ಹಾಸನ ಜಿಲ್ಲೆಗೆ ಸಾಕಷ್ಟು ಸೌಲಭ್ಯಗಳು ಬೇಕಾಗಿದೆ. ಎಲ್ಲದಕ್ಕೂ ಪ್ರಸ್ತಾವನೆ ಸಲ್ಲಿಸಿದ್ದೇವೆ ಯಾವುದು ಅನುಮೋದನೆ ಆಗಿಲ್ಲ ಎಂದು ಡಿಸಿ ಹೇಳುತ್ತಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿ ಎಲ್ಲಾ ಶಾಸಕರ ಸಭೆ ಕರೆಯಬೇಕು, ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆ ಆಗಬೇಕು. ಕೊರೊನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಪರೀಕ್ಷೆಗಳು ಹೆಚ್ಚಾಗಬೇಕು. ಮೂಲ ಸೌಕರ್ಯ ಹೆಚ್ಚಿಸಲು ಸರ್ಕಾರ ಮಾಡಿದ್ದ ಘೋಷಣೆ ಘೋಷಣೆ ಆಗಿಯೇ ಉಳಿದಿದೆ ಎಂದು ಅಸಮಾಧಾನ ಅಸಮಾಧಾನ ವ್ಯಕ್ತಪಡಿಸಿದರು.
Published by:Kavya V
First published: