HOME » NEWS » State » RAMANAGARA MINISTER MURUGESH NIRANI ACCEPTED THE FACT THAT STATE DOES NOT HAVE VACCINE AT ALL ATVR KVD

ರಾಜ್ಯದಲ್ಲಿ ಸದ್ಯಕ್ಕೆ ವ್ಯಾಕ್ಸಿನ್ ಇಲ್ಲ: ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಮುರುಗೇಶ್ ನಿರಾಣಿ

ವಿರೋಧ ಪಕ್ಷದವರು ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಲಸಿಕೆ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಮುರುಗೇಶ್​ ನಿರಾಣಿ ಆರೋಪಿಸಿದರು.

news18-kannada
Updated:May 22, 2021, 7:30 PM IST
ರಾಜ್ಯದಲ್ಲಿ ಸದ್ಯಕ್ಕೆ ವ್ಯಾಕ್ಸಿನ್ ಇಲ್ಲ: ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್​ ನಿರಾಣಿ
  • Share this:
ರಾಮನಗರ : 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರೂ ಲಸಿಕೆಗೆ ಅರ್ಹರಾಗಿದ್ದರೂ, ರಾಜ್ಯದಲ್ಲಿ ಲಸಿಕಾ ಅಭಿಯಾನ ಚುರುಕು ಪಡೆದುಕೊಂಡಿಲ್ಲ. ರಾಜ್ಯದಲ್ಲಿ ಲಸಿಕೆ ಕೊರತೆ ಇರುವುದನ್ನು ಸಚಿವ ಮುರುಗೇಶ್ ನಿರಾಣಿ ಒಪ್ಪಿಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದ ಮುರುಗೇಶ್ ನಿರಾಣಿ ನಂತರ ಮಾತನಾಡಿ  ಸದ್ಯ  ರಾಜ್ಯದಲ್ಲಿ ಲಸಿಕೆ ಅಭಾವ ಇದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಆದರೆ ಮಾರ್ಕೆಟ್ ನಲ್ಲಿ ಲಸಿಕೆ ಸಿಗುತ್ತಿಲ್ಲ. ಆದರೆ ರಾಜ್ಯ ಸರ್ಕಾರ ಪ್ರಯತ್ನದಲ್ಲಿದೆ ಆದಷ್ಟು ಬೇಗ ಲಸಿಕೆ ಬರಲಿದೆ. ಆದರೆ ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಟೀಕೆ ಮಾಡ್ತಿದ್ದಾರೆ. ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಲಸಿಕೆ ಇಲ್ಲ ಎಂದು ಹೇಳ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ಸಮಯ ಅಲ್ಲ, ಸರ್ಕಾರಕ್ಕೆ ಸಲಹೆ ಕೊಡಲಿ. ಈ ಸಮಯದಲ್ಲಿ ಟೀಕೆ ಮಾಡೋದು ಬೇಡ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ 5.5 ಕೋಟಿ ರೂ. ನೀಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಭಾಗ ಮಟ್ಟಕ್ಕೆ 2 ರಂತೆ 10 ಆಕ್ಸಿಜನ್ ಟ್ಸಾಂಕರ್, 10 ಆಕ್ಸಿಜನ್ ಜನರೇಟರ್‌ಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ. 1000 ಆಮ್ಲಜನಕ ಸಾಂದ್ರಕ ಖರೀದಿಸಲು ಯೋಜಿಸಲಾಗಿದ್ದು, ಮೊದಲು 100 ಆಮ್ಲಜನಕ ಸಾಂದ್ರಕ ಖರೀದಿಸಲಾಗಿದೆ. ಅದರ ಕಾರ್ಯವೈಖರಿ ಗುಣ ಮಟ್ಟ ನೋಡಿ ಉಳಿದ ಆಮ್ಲಜನಕ ಸಾಂದ್ರಕವನ್ನು ಖರೀದಿಸಲಾಗುವುದು. ಹೊಸದಾಗಿ ಆಕ್ಸಿಜನ್ ಜನರೇಟರ್ ಯುನಿಟ್ ಬದಲು ಮುವಿಂಗ್ ಆಕ್ಸಿಜನ್ ಜನರೇಟರ್ ಖರೀದಿಗೆ ಯೋಜಿಸಲಾಗುತ್ತಿದೆ. ಇದರಿಂದ ಜಿಲ್ಲಾ ಮಟ್ಟದಿಂದ ಆಮ್ಲಜನಕ ಜನರೇಟರ್ ನ್ನು ತಾಲ್ಲೂಕುಗಳಿಗೆ ತೆಗೆದುಕೊಂಡಿ ಹೋಗಿ ಅವಶ್ಯಕತೆಗೆ ತಕ್ಕಂತೆ 300-500 ಸಿಲಿಂಡರ್‌ಗಳನ್ನು ತುಂಬಿಸಿ ಬರಬಹುದು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ 250 ಮಂದಿಗೆ ಬ್ಲ್ಯಾಕ್ ಫಂಗಸ್ ತಗುಲಿದೆ, ಶೀಘ್ರವೇ ಹೆಚ್ಚಿನ ಔಷಧ ಲಭಿಸಲಿದೆ : ಸಚಿವ ಸುಧಾಕರ್

ಜಿಲ್ಲೆಯಲ್ಲಿ 110 ಬಿಲ್ಡಿಂಗ್ ಸ್ಟೋನ್ ಕ್ರಷರ್‌ಗಳಿದ್ದು, 53 ಕ್ರಷರ್‌ಗಳಿದ್ದು, 13 (ಡೈರೆಕ್ಟರ್ ಜನರಲ್ ಆಫ್ ಮೈನ್ಸ್ ಸೇಫ್ಟಿ) ಡಿ.ಜಿ.ಎಂ.ಎಸ್ ಪರವಾನಗಿ ಹೊಂದಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಪುರದಲ್ಲಿ ನಡೆದ ಘಟನೆಯಿಂದ ಡಿ.ಜಿ.ಎಂ.ಎಸ್ ಪರವಾನಗಿ ಕಡ್ಡಾಯ ಮಾಡಲಾಗಿದೆ. ಆದರೆ ರಾಜ್ಯದಲ್ಲಿ 5%ಗಣಿಗಾರಿಕೆ ನಡೆಸುವವರ ಬಳಿ ಮಾತ್ರ ಡಿ.ಜಿ.ಎಂ.ಎಸ್ ಪರವಾನಗಿ ಇರುತ್ತದೆ‌ ಉಳಿದ ಗಣಿಗಾರಿಕೆ ನಡೆಸುವವರು ಡಿ.ಜಿ.ಎಂ.ಎಸ್ ಪರವಾನಗಿ ಪಡೆದುಕೊಳ್ಳಲು 90 ದಿನ ಕಲಾವಕಾಶ ನೀಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಬಹಳಷ್ಟು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಗಣಿಕಾರಿಕೆ ಸಂಬಂಧಿಸಿದಂತೆ ಯಾವುದೇ ಅನಾಹುತ ಸಂಭವಿಸಿದಂತೆ ಗಣಿ ಮಾಲೀಕರಿಗೆ ಒಂದು ದಿನದ ಕಾರ್ಯಗಾರ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದರು.
Youtube Video

ಹೊಸದಾಗಿ ನ್ಯೂ ಮೈನಿಂಗ್ ಪಾಲಿಸಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ವಿಭಾಗೀಯವಾರು ಮೈನಿಂಗ್ ಅದಾಲತ್‌ನ್ನು ಲಾಕ್‌ಡೌನ್ ತೆರವುಗೊಳಿಸಿದ ನಂತರ ನಡೆಸಲಾಗುವುದು. ಇದರಿಂದ ಗಣಿಗಾರಿಕೆಗೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಸ್ಥಳೀಯವಾಗಿ ನಿವಾರಿಸಬಹುದು. ಸಿಂಗಲ್ ವಿಂಡೋ ಸಿಸ್ಟ್ಂ ಜಾರಿಗೆ ತಂದು ಗಣಿಗಾರಿಕೆಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆ ಇಲಾಖೆಗೆ ಹೋಗಿ ಎನ್.ಓ.ಸಿ ತರುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಬಹುದು ಎಂದರು.

ಗಣಿಗಾರಿಕೆ ಹಾಗೂ ಡೀಮ್ಡ್ ಅರಣ್ಯ ಕುರಿತು ಬಹಳ ತೊಂದರೆಗಳಿವೆ. ಗಣಿಗಾರಿಕೆಗೆ ಪರವಾನಗಿ ನೀಡಿ ನಂತರ ಸ್ಥಳ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುತ್ತದೆ ಎಂಬ ಗೊಂದಲಗಳಿದ್ದು, ಅದನ್ನು ನಿವಾರಿಸಲು ಕೇಂದ್ರ ಗಣಿಗಾರಿಕೆ ಸಚಿವರಾದ ಪ್ರಹ್ಲಾದ್ ಜೋಷಿ, ಅರಣ್ಯ ಸಚಿವರಾದ ಅರವಿಂದ ಲಿಂಬಕವಾಳಿ, ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದರು.
Published by: Kavya V
First published: May 22, 2021, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories