Mekedatu Padayatre: ಮತ್ತೆ 'ಕೈ' ನಾಯಕರ ಮೇಲೆ ಬಿತ್ತು ಕೇಸ್, ಸಿದ್ದು, ಡಿಕೆಶಿ ಸೇರಿ 38 ಮಂದಿ ವಿರುದ್ಧ FIR

ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ 2.0 ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್  ದಾಖಲಿಸಲಾಗಿದೆ.

ಮೇಕೆದಾಟು ಪಾದಯಾತ್ರೆ

ಮೇಕೆದಾಟು ಪಾದಯಾತ್ರೆ

  • Share this:
ರಾಮನಗರ (ಫೆ.28) : ಕೊರೊನಾ (Corona) ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ (Mekedatu padayatre) 2.0 ಕೈಗೊಂಡಿರುವ ಕಾಂಗ್ರೆಸ್ ನಾಯಕರ (Congress leaders) ವಿರುದ್ಧ  ಎಫ್ಐಆರ್ (FIR) ದಾಖಲಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿರುದ್ಧ ಸಮರ ಸಾರಲು ಮುಂದಾಗಿರುವ ಬಿಜೆಪಿ ಸರ್ಕಾರ ಇಂದು 38 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ ಆದ್ರೆ  ಕೊರೊನಾ ಮತ್ತೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ರಾಜ್ಯ ಸರ್ಕಾರ ಕೊರೊನಾ ನಿಯಮ ಪಾಲಿಸುವಂತೆ ಆದೇಶ ಹೊರಡಿಸಿದೆ. ಕೊರೊನಾ ನಿಯಮ (Corona Rule) ಲೆಕ್ಕಿಸದೆ ರಾಜ್ಯ ಕಾಂಗ್ರೆಸ್ ನಾಯಕರು  ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದಾರೆ. ಮಾರ್ಗಸೂಚಿ ಪಾಲಿಸದೆ ಪಾದಯಾತ್ರೆ ಕೈಗೊಂಡ ನಾಯಕರಿಗೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದ್ದು, 38 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ಸಿದ್ದು, ಡಿಕೆಶಿ ಸೇರಿ 38 ಮಂದಿ ಮೇಲೆ FIR

ಕೊರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ 2.0 ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್  ದಾಖಲಿಸಲಾಗಿದೆ. ರಾಮನಗರದ  ನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ. ಈಗ ಎಫ್ ಐ ಆರ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (A1) ಮೊದಲ ಆರೋಪಿಯನ್ನಾಗಿ ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ (A2), ಸಂಸದ ಡಿ ಕೆ ಸುರೇಶ್ (A3) ಸೇರಿದಂತೆ 38 ನಾಯಕರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ.

ರಾಮನಗರ ತಹಶೀಲ್ದಾರ್​ ರಿಂದ ದೂರು

ಈ ಬಾರಿ ಯಶಸ್ವಿಯಾಗಿ ಮೇಕೆದಾಟು ಪಾದಯಾತ್ರೆ ನಡೆಸಲು ಕಾಂಗ್ರೆಸ್​ಗೆ​ ಮುಂದಾಗಿದೆ. ಆದ್ರೆ ರಾಮನಗರದಲ್ಲಿ ಫೆಬ್ರವರಿ 28ರ ವರೆಗೆ ಜಿಲ್ಲೆಯಾದ್ಯಂತ ಕೊರೊನಾ ಮಾರ್ಗಸೂಚಿ ಪಾಲನೆಗೆ ಅವಕಾಶ ನೀಡಲಾಗಿತ್ತು. ಆದ್ರೆ ಕಾಂಗ್ರೆಸ್ ಸಾವಿರಾರು ಜನರನ್ನು ಕಟ್ಟಿಕೊಂಡು ಪಾದಯಾತ್ರೆ ನಡೆಸುತ್ತಿದೆ. ಎಲ್ಲಾ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ ಎಂದು ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್ ರಿಂದ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಕಾಂಗ್ರೆಸ್ನ 38 ಮಂದಿ ವಿರುದ್ಧ FIR ಹಾಕಿದ್ದಾರೆ.​ ರಾಮನಗರದ  ನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ.

ಇದನ್ನೂ ಓದಿ: Russia-Ukraine War: ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡರಿಂದ ಪತ್ರ, ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ

2ನೇ ದಿನವೂ ಭರ್ಜರಿ ಪಾದಯಾತ್ರೆ

ನಿನ್ನೆ 15 ಕಿ.ಲೋ ಮೀಟರ್ ಪಾದಯಾತ್ರೆ ಮಾಡಿ ಮೊದಲ ದಿನದ ಪಾದಯಾತ್ರೆಯನ್ನು ಅಂತ್ಯಗೊಳಿಸಿದ್ದ ಕಾಂಗ್ರೆಸ್​. ಇಂದು ಬಿಡದಿಯಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಎರಡನೇ ದಿನದ ಪಾದಯಾತ್ರೆಯಲ್ಲಿ ಡಿಕೆಶಿ , ಸಿದ್ದು ಜೋಡಿ ಕಮಾಲ್ ಮಾಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮವೇ ಹರಿದು ಬಂದಿದೆ. ಇದೇ ವೇಳೆ ಮಾತಾಡಿದ ಡಿಕೆಶಿ ನಮ್ಮ ಪಾದಯಾತ್ರೆಗೆ ಸುಮಾರು 40 ಜನ ಸ್ವಾಮೀಜಿ ಗಳು ಬರ್ತಿದ್ದಾರೆ, ಮುರುಗಾನಂದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಗೆ ಮುಂದುವರಿಯುತ್ತೆ. ಎಲ್ ಇ ಡಿ ಸ್ಕ್ರೀನ್ ಇರುವ ವಾಹನ‌ ರೆಡಿ ಮಾಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ .

ಜೊತೆ ಜೊತೆಯಾಗಿ ಹೆಜ್ಜೆ ಹಾಕಿದ ಸಿದ್ದು-ಡಿಕೆಶಿ

ಇವತ್ತು ಮಾಗಡಿ ಬಾಲಕೃಷ್ಣ ಅವರ ಹುಟ್ಟಿದಹಬ್ಬ, ಅವರು ಕುಟುಂಬದ ಸಮೇತ ತಿರುಪತಿಗೆ ಹೋಗಬೇಕಿತ್ತು. ಆದರೆ ಜನರ ಮಧ್ಯೆ ಇರಲು ಬಂದಿದ್ದಾರೆ. ನಾನು ಅವರಿಗೆ ಎಲ್ಲರ ಪರವಾಗಿ ಶುಭ ಕೋರುತ್ತೇನೆ ಎಂದ್ರು ಡಿಕೆಶಿ. ನಮ್ಮ ತುಮಕೂರಿನ ಟೈಗರ್ಸ್ ಬಂದಿದ್ದಾರೆ ಜೊತೆಗೆ ರಾಯಚೂರಿನ ಶಾಸಕರು ಬಂದಿದ್ದಾರೆ ಅಂತ ವೇದಿಕೆ ಮೇಲೆ ಡಿ.ಕೆ ಶಿವಕುಮಾರ್​ ಅಬ್ಬರಿಸಿದ್ರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಿಗೆ ಪಾದಯಾತ್ರೆಗೆ ಧುಮುಕ್ಕಿದ್ರು.

ಇದನ್ನೂ ಓದಿ: Coronavirus: ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ತಿವೆ ಈ ಹೊಸ ಸಮಸ್ಯೆಗಳು, ಇದಕ್ಕೆ ವೈದ್ಯರು ಏನಂತಾರೆ?

ಪಾದಯಾತ್ರೆಯಲ್ಲಿ ಮುರುಗ ಶ್ರೀಗಳು ಭಾಗಿ

ಮೇಕೆದಾಟು ಪಾದಯಾತ್ರೆಯಲ್ಲಿ ಮುರುಗ ಶ್ರೀಗಳು ಭಾಗಿಯಾಗಿದ್ರು. ಈ ವೇಳೆ ಮುರುಗ ಶ್ರೀಗಳಿಗೆ ಸನ್ಮಾನ‌ ಮಾಡಿ ಸಿಹಿ ವಿತರಣೆ ಮಾಡಿದ ಡಿಕೆಶಿ, ಶ್ರೀಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಾನು ಅವರಿಗೆ ತುಂಬುಹೃದಯದ ಧನ್ಯವಾದ ಹೇಳ್ತೇನೆ, ಅವರ ಈ ಬೆಂಬಲ ನಮಗೆ ಮತ್ತಷ್ಟು ಉತ್ಸಾಹ ತಂದಿದೆ ಎಂದು ಶ್ರೀಗಳ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.
Published by:Pavana HS
First published: