ನಾಳೆಯಿಂದ ಮೇಕೆದಾಟು ಪಾದಯಾತ್ರೆ (Mekedatu padayatre ) ಶುರುವಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ (H.D Kumarsawamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನವರು (Congress) ರಾಮನಗರದಲ್ಲಿ ನಾಯಕರ ಫೋಟೋ ಹಾಕಿಕೊಂಡು ಬಲೂನ್ ಹಾರಿಸಿಕೊಂಡು ಕೂತ್ತಿದ್ದಾರೆ . ರಾಮನಗರದಲ್ಲಿ (Ramanagara) ಬಲೂನ್ ಗಳು ರಾರಾಜಿಸುತ್ತಿವೆ, ನೋಡಿಕೊಂಡು ಬಂದೆ, ಜಾತ್ರೆ ರೀತಿ ಮಾಡ್ತಿದ್ದಾರೆ. ಇದು ನೀರು ತರುವ ಪಾದಯಾತ್ರೆನಾ ಅಥವಾ ಅವರ ಪಕ್ಷದ ಪ್ರಚಾರಕ್ಕೆ ಮಾಡ್ತಿರುವ ಪಾದಯಾತ್ರೆನಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೇಕೆದಾಟು ಕಾಮಗಾರಿ ಪ್ರಾರಂಭ ಮಾಡಲು ಯಾರ ಒಪ್ಪಿಗೆ ಬೇಕಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. 5 ವರ್ಷ ಸರ್ಕಾರ ಇದ್ದಾಗ ಮಾಡಿದ್ದರೆ ಬಿಸಿಲಿನಲ್ಲಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಕುಮಾರಸ್ವಾಮಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕಿಡಿಕಾರಿದ್ದಾರೆ.
‘ರಾಜ್ಯದ ನೀರಾವರಿ ಉಳಿಸುವ ಸೂತ್ರ ನಮ್ಮ ಬಳಿ ಇದೆ’
ಮೊದಲ ಹಂತದ ಪಾದಯಾತ್ರೆ ನಿಲ್ಲಲು ಕುಮಾರಸ್ವಾಮಿ ಕಾರಣ ಅನ್ನೋ ಆರೋಪದ ವಿಚಾರದ ಬಗ್ಗೆ ಮಾತಾಡಿದ ಅವರು, ಕುಮಾರಸ್ವಾಮಿ ಶಕ್ತಿ ಅಷ್ಟು ದೊಡ್ಡಮಟ್ಟದಲ್ಲಿದೆ ಎಂದು ಅಂದುಕೊಂಡಿದ್ದಾರಲ್ಲ ಅಷ್ಟು ಸಾಕು ಬಿಡಿ. ಈ ಪಾದಯಾತ್ರೆಯಿಂದ ಯಾವ ಟಾಂಗ್ ಕೊಟ್ಟರು ತಲೆಕೆಡಿಸಿಕೊಳ್ಳಲ್ಲ. ನಮಗೆ ನಮ್ಮ ರಾಜ್ಯದ ನೀರು ಉಳಿಸಿಕೊಳ್ಳಬೇಕು. ಅದು ಇವರಿಂದ ಆಗಲ್ಲ. ಜನರು ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕಾರ ಮಾಡಿ, 5 ವರ್ಷ ನಮಗೆ ಸರ್ಕಾರ ಕೊಡಲಿ. ರಾಜ್ಯದ ನೀರಾವರಿ ಉಳಿಸುವ ಸೂತ್ರ ನಮ್ಮ ಬಳಿ ಇದೇ ಎಂದು ಕುಮಾರಸ್ವಾಮಿ ಹೇಳಿದ್ರು.
‘ನಾನು ಸಿಎಂ ಆಗಿದ್ದಾಗ ಯಾವ ಗಲಾಟೆ ಇರಲ್ಲ’
ನಾನು ಸಿಎಂ ಇದ್ದಾಗ ಹಿಂದೂ - ಮುಸ್ಲಿಂ ಗಲಾಟೆಯಾಗಲು ಬಿಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ 5 ಜನರನ್ನ ಕೊಲೆ ಮಾಡಿದ್ರು ಅಂತಾ ಬಿಜೆಪಿಯವರು ಹೇಳ್ತಾರೆ. ನನ್ನ ಸರ್ಕಾರದಲ್ಲಿ ಯಾಕೆ ಬರಲಿಲ್ಲ, ಈಗ ಯಾಕೆ ಬರುತ್ತೆ ಇದೆಲ್ಲಾ. ಕಾಂಗ್ರೆಸ್, ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಯಾಕೆ ಈ ಸಮಸ್ಯೆ ಉದ್ಭವವಾಗುತ್ತೆ ಅಂತ ಹೆಚ್ಡಿಕೆ ಪ್ರಶ್ನಿಸಿದ್ರು.
ಇದನ್ನೂ ಓದಿ: Press meet: ‘ಎಂಥಾ ಪಕ್ಷಕ್ಕೆ ದುಡಿದೆವು ಅಲ್ಲಿ ವಿಷ ಸರ್ಪವಿದೆ’, ಕುಮಾರಸ್ವಾಮಿ ವಿರುದ್ಧ ಮಾಜಿ JDS ಕಾರ್ಯಕರ್ತರ ಕಿಡಿ
ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು
CAA ಹೋರಾಟದಲ್ಲಿ ದೆಹಲಿ ಕೇಂದ್ರದಲ್ಲಿ 53 ಜನ ಸತ್ತರು. ಅದರಲ್ಲಿ 33 ಜನ ಮುಸ್ಲಿಂ ಬಂಧುಗಳು, 13 ಜನ ಹಿಂದೂಗಳು. ಇವತ್ತಿನವರೆಗೆ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಚರ್ಚೆ ಮಾಡಿದ್ರಾ. ಅದರ ಬಗ್ಗೆ ಸಣ್ಣ ಚರ್ಚೆ ಆಗಿದೆಯಾ, ಶಿಕ್ಷೆ ಆಯ್ತ ಹೊರಗೆ ಮಾತ್ರ ಮುಸ್ಲಿಂ ರಕ್ಷಣೆ ಮಾಡುವವರು ಅಂತಾರೆ, ಇವತ್ತು ಉತ್ತರಪ್ರದೇಶದಲ್ಲಿ 5 ಸೀಟ್ ತೆಗೆದುಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಪ್ರಧಾನಮಂತ್ರಿ ಆಳ್ವಿಕೆ ಮಾಡಿರುವ ರಾಜ್ಯ ಅದು, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಳ್ವಿಕೆ ಮಾಡಿದ್ದಾರೆ. ಮುಂದಿನ 1 ವರ್ಷ ಎಲ್ಲಾ ವಿಚಾರಗಳ ಬಗ್ಗೆ ಹೋರಾಟ ಮಾಡ್ತೇನೆ. ಬಿಜೆಪಿ - ಕಾಂಗ್ರೆಸ್ ಎರಡು ಒಂದೇ, ಒಂದೇ ನಾಣ್ಯದ ಎರಡು ಮುಖ ಇವು, ನಾನು ಯಾರ ಪರವೂ ಇಲ್ಲ, ಜನತೆ ಪರವಾಗಿದ್ದೇನೆ ಎಂದ್ರು ಕುಮಾರಸ್ವಾಮಿ
ಕುಮಾರಸ್ವಾಮಿ ಏಟಿಗೆ ಡಿಕೆಶಿ ತಿರುಗೇಟು
ಇನ್ನು ಮೇಕೆದಾಟು ಪಾದಯಾತ್ರೆಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇದು ಪಾದಯಾತ್ರೆ ಅಲ್ಲ, ಜಾತ್ರೆ ಎಂದಿದ್ದ ಕುಮಾರಸ್ವಾಮಿಗೆ ಕುಮಾರಣ್ಣ ನಮ್ಮ ಬಗ್ಗೆ ಮಾತನಾಡ್ತಾ ಇರಬೇಕು, ಅವರು ಮಾತನಾಡಲಿ. ಅವರು ಮಾತನಾಡುವುದನ್ನ ನಾನು ಬೇಡ ಎನ್ನಲು ಆಗಲ್ಲ. ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಕಲು ಅವಕಾಶ ಇಲ್ಲ. ಹೀಗಾಗಿ ಬಲೂನ್ ಹಾಕಿದ್ದೇವೆ, ಭೂಮಿ ಅಲ್ಲ, ಆಕಾಶದಲ್ಲೂ ನಮ್ಮ ಪಕ್ಷದ ಬಗ್ಗೆ ಗೊತ್ತಾಗಬೇಕು ಎಂದರು.
ಜೆಡಿಎಸ್ನವರು ನಮ್ಮ ಬ್ರದರ್ಸ್ ನಾವೆಲ್ಲಾ ಒಂದೇ
ಜೆಡಿಎಸ್ ನವರು ನಮ್ಮ ಬ್ರದರ್ಸ್ ಕಣ್ರೀ, ನಾನು ಜೆಡಿಎಸ್ ನವರಿಗೆ, ಬಿಜೆಪಿ ಯವರಿಗೆ ಆಹ್ವಾನ ಮಾಡ್ತೇನೆ. ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಲಿ. ನಾವೆಲ್ಲರೂ ಒಂದೇ ತಾಲೂಕು, ಜಿಲ್ಲೆಯವರು. ನಾನು ಜೈಲಿನಲ್ಲಿದ್ದಾಗ ಎಲ್ಲರೂ ಬಂದಿರಲಿಲ್ಲವಾ. ಅವರು ಬೇರೆ ಪಕ್ಷದಲ್ಲಿ ಇರಬಹುದು ಅಷ್ಟೇ, ಆದರೆ ಅವರು ಸಹ ನಮ್ಮವರೇ. ನಾನು ಕುಮಾರಸ್ವಾಮಿ ರವರ ಕೈಕೆಳಗೆ ಕೆಲಸ ಮಾಡಿದ್ದೇನೆ. ದೊಡ್ಡವರು ಸಾಮಾನ್ಯವಾಗಿ ಚಿಕ್ಕವರಿಗೆ ಹೊಡೆಯುತ್ತಾರೆ. ನಾನು ಚಿಕ್ಕವನು ಹೊಡೆಯಲು ಆಗುತ್ತಾ ಎನ್ನುತ್ತಲೇ ಡಿಕೆ ಶಿವಕುಮಾರ್, ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ