Farmers Protest: ಮಾಗಡಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ರೈತರ ವಿರೋಧ; ಕ್ರಮ ವಹಿಸಲು ಅನ್ನದಾತರ ಹೋರಾಟ

ಮಾಗಡಿ ಕ್ಷೇತ್ರಕ್ಕೆ ಕೈಗಾರಿಕೆ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ, ಆದರೆ ರೈತರ ಕೃಷಿ ಭೂಮಿಯನ್ನ ವಶಕ್ಕೆ ಪಡೆದು ಕೈಗಾರಿಕೆ ಸ್ಥಾಪನೆ ಮಾಡುವುದು ಸರಿಯಾದ ನಿರ್ಧಾರ ಅಲ್ಲ ಎಂದು ಈ ಭಾಗದ ರೈತರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧಿಸಿ ಮಾಗಡಿ ರೈತರ ಪ್ರತಿಭಟನೆ

ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧಿಸಿ ಮಾಗಡಿ ರೈತರ ಪ್ರತಿಭಟನೆ

  • Share this:
ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ (Magadi Taluku Ramanagara District) ತಾಲೂಕು ವ್ಯಾಪ್ತಿಯಲ್ಲಿ 3200 ಎಕರೆ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ರೈತರಿಂದ ಭೂಮಿ ಪಡೆಯುವ ನಿರ್ಧಾರಕ್ಕೆ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. (Farmers Against Industrial Start In Farming Land)  ದುಡಿದು ತಿನ್ನುತ್ತೇವೆ. ಸರ್ಕಾರ ದುಪ್ಪಟ್ಟು ಹಣ ಕೊಟ್ಟರೂ ನಾವು ಒಂದಿಚ್ಚು ಭೂಮಿ ಕೊಡುವುದಿಲ್ಲ. ಎಲ್ಲೋ ಕುಳಿತುಕೊಂಡು ನಮ್ಮ ಭೂಮಿ ಬರಡಾಗಿದೆ. ಹೆಚ್ಚು ಗೋ ಮಾಳ ಜಾಗವಿದೆ ಎಂದು ವರದಿ ಕೊಟ್ಟಿದ್ದಾರೆ. ಯಾವ ಮಾನದಂಡಗಳ ಮೇಲೆ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಸ್ಥಳೀಯ ಶಾಸಕ ಎ.ಮಂಜುನಾಥ್ (MLA A Manju) ಹಾಗೂ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ರೈತರು ಕಿಡಿಕಾರಿದರು.

ಯೋಜನೆ ಜಾರಿಯಾದರೆ ಇಲ್ಲಿನ ರೈತರ ಜೀವನವೇ ಹಾಳಾಗುತ್ತದೆ. ಮಾಗಡಿಯ ಶಿವನಸಂದ್ರ, ನಾರಸಂದ್ರ, ತಾಳೇಕೆರೆ ಸೇರಿದಂತೆ 3 ಹೋಬಳಿ ವ್ಯಾಪ್ತಿಯ‌ ಸುಮಾರು 30 ಹಳ್ಳಿಗಳ ರೈತಾಪಿ ಸಮುದಾಯ ಭಿಕ್ಷೆ ಬೇಡಬೇಕಾಗುತ್ತದೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ, ನಮಗೆ ಯಾವ ರಾಜಕೀಯವೂ ಬೇಕಾಗಿಲ್ಲ. ಇದು ರೈತರ ಭವಿಷ್ಯದ ಬದುಕಿನ ಪ್ರಶ್ನೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನ ಮಾಡಬಾರದು.‌ ಒಂದು ವೇಳೆ ಹಠಮಾರಿತನ ಪ್ರದರ್ಶಿಸಿ ಭೂಮಿ  ವಶಪಡಿಸಿಕೊಳ್ಳಲು  ಮುಂದಾದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದರು.

ಸ್ಥಳೀಯ ರೈತರಿಂದ ಯಾವುದೇ ಅನುಮತಿ ಪಡೆದಿಲ್ಲ

ಮಾಗಡಿಯಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರ ಬಹಳ ಒಳ್ಳೆಯ ನಿರ್ಧಾರ. ಇದರಿಂದಾಗಿ ಸ್ಥಳೀಯ ಯುವಕರಿಗೆ ಕೆಲಸ ಸಿಗುತ್ತದೆ. ಆದರೆ ರೈತರ ಕೃಷಿ ಭೂಮಿಯನ್ನ ಹೊರತುಪಡಿಸಿ ಸರ್ಕಾರಿ ಗೋಮಾಳದಲ್ಲಿ ಕೈಗಾರಿಕೆ ಸ್ಥಾಪಿಸಲಿ ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ. ಇವತ್ತು ಖಾಸಗಿ ಕಂಪನಿಯವರು ಬಂದು ಒಂದಕ್ಕೆ ಎರಡರಂತೆ ಹಣ ನೀಡಿ ಜಮೀನನ್ನ ಖರೀದಿ ಮಾಡ್ತಾರೆ. ನಂತರ ಅವರು ನೀಡಿದ ಹಣ ಸಂಪೂರ್ಣವಾಗಿ ಖಾಲಿಯಾಗಲಿದೆ. ಆಗ ಅದೇ ಕಂಪನಿಗಳಲ್ಲಿ ನಾವು ವಾಚ್ ಮೆನ್ ಆಗಿ ಕೆಲಸ ಮಾಡಬೇಕಾಗುತ್ತದೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಚಾರವಾಗಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಕೇವಲ ಬಂಡವಾಳಶಾಹಿಗಳನ್ನ ಮುಂದಿಟ್ಟುಕೊಂಡು ಯೋಚನೆ ಮಾಡಬಾರದು. ರೈತರನ್ನ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಯೋಚಿಸಬೇಕು. ಹಾಗಾಗಿ ಮಾಗಡಿ ಕ್ಷೇತ್ರಕ್ಕೆ ಕೈಗಾರಿಕೆ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ, ಆದರೆ ರೈತರ ಕೃಷಿ ಭೂಮಿಯನ್ನ ವಶಕ್ಕೆ ಪಡೆದು ಕೈಗಾರಿಕೆ ಸ್ಥಾಪನೆ ಮಾಡುವುದು ಸರಿಯಾದ ನಿರ್ಧಾರ ಅಲ್ಲ ಎಂದು ಈ ಭಾಗದ ರೈತರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪ್ರಮುಖವಾಗಿ ಈ ವಿಚಾರವಾಗಿ ಸ್ಥಳೀಯ ಶಾಸಕರಾದ ಎ.ಮಂಜು ಅವರು ಸೂಕ್ಷ್ಮವಾಗಿ ಯೋಚಿಸಬೇಕಿದೆ. ಆತುರದ ನಿರ್ಧಾರದಿಂದ ಯಾವುದೇ ಪ್ರಯೋಜನ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನು ಓದಿ: Vijay Jyothi: ಸ್ವರ್ಣಿಮ್ ವಿಜಯ ದಿವಸ್; ಕಾರವಾರದ ಕದಂಬ ನೌಕ ನೆಲೆ ತಲುಪಿದ ವಿಜಯ್ ಜ್ಯೋತಿ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: