Ramanagara Politics: ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು: HDK, ಯೋಗೇಶ್ವರ್, ಡಿ.ಕೆ.ಸುರೇಶ್ ಮುಖಾಮುಖಿ

HD Kumaraswamy, DK Suresh and CP Yogeshwar: ಸಿ.ಪಿ.ಯೋಗೇಶ್ವರ್ ಮತ್ತೆ ಮಂತ್ರಿ ಆಗ್ತಾರೆ ಎನ್ನುವ ಮೂಲಕ ಸಂಸದ ಡಿ.ಕೆ.ಸುರೇಶ್ ಅಚ್ಚರಿ ಮೂಡಿಸಿದರು.

ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು

ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು

  • Share this:
ರಾಮನಗರ: ಇಂದು ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳು ಸಂಗಮವಾಗಿತ್ತು. ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯನವರ ನುಡಿನಮನ ಕಾರ್ಯಕ್ರಮದಲ್ಲಿ  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಮಾಡಿಸಿಕೊಂಡರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು ಸಿ.ಪಿ.ಯೋಗೇಶ್ವರ್ ಮತ್ತೆ ಮಂತ್ರಿ ಆಗ್ತಾರೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಯೋಗೇಶ್ವರ್ ಮಂತ್ರಿ ಆಗ್ತಿದ್ದಾರೆ, ಅವರಿಗೆ, ಅವರ ಬೆಂಬಲಿಗರಿಗೆ ಶುಭ ಕೋರುತ್ತೇನೆ. ನಾನು ಇನ್ನು ಹೆಚ್ಚು ಮಾತನಾಡಲ್ಲ. ಯಾಕೆಂದರೆ ನಾಳೆ ಅವರು ಮಂತ್ರಿ ಆದರೆ ಕಷ್ಟ ಆಗ್ತದೆ ಎಂದು ನಕ್ಕರು. ಡಿ.ಕೆ.ಸುರೇಶ್ ಹೇಳಿಕೆ ಗೆ ಸಿ.ಪಿ.ಯೋಗೇಶ್ವರ್ ಏನನ್ನು ಪ್ರತಿಕ್ರಿಯಿಸಲಿಲ್ಲ. ನನಗೆ ಏನು ಗೊತ್ತಿಲ್ಲಪ್ಪ ಅದರ ಎಂದು ಕೈ ಮುಗಿದು ಹೊರಟ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹೊರ ನಡೆದರು.

ನಂತರ ವೇದಿಕೆ ಮೇಲಿನ ಹೇಳಿಕೆ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟನೆ ನೀಡಿದರು. ನಾನೇನು ಸಚಿವರಾಗಿ ಮಾಡಿಲ್ಲ. ವೇದಿಕೆಯಲ್ಲಿ ಸ್ವಾಮೀಜಿಗಳು ಸಚಿವರಾಗ್ತಾರೆ ಅಂದ್ರು. ನಾನು ಶುಭಾಶಯ ಹೇಳಿದೆ ಅಷ್ಟೇ. ನಾನು ಭಯ ಅಂದಿದ್ದು, ಎಲ್ಲೆಲ್ಲಿ ಏನೇನೂ ಬಿಡ್ತಾರೋ ಅಂತಾ ಆಗೇಳಿದೆ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್​ ಮಹಿಳಾ ಸಮಾವೇಶ: ಪಕ್ಷದ ಏಕೈಕ ಶಾಸಕಿ ಅನಿತಾ ಕುಮಾರಸ್ವಾಮಿ ಗೈರು

ಕಾರ್ಯಕ್ರಮದ ಬಳಿಕ ಮಾತನಾಡಿದ ಮಾಜಿ ಸಿಎಂ‌ ಹೆಚ್.ಡಿ. ಕುಮಾರಸ್ವಾಮಿ,  ಜೆಡಿಎಸ್​ ಮುಳುಗುವ ಹಡಗು ಎಂಬ ಅರುಣ್​​ ಸಿಂಗ್​ ಹೇಳಿಕೆ ವಿರುದ್ಧ ಕೆಂಡಮಂಡಲರಾಗಿ ತಿರುಗೇಟು ನೀಡಿದ್ದಾರೆ. ದೇಶವನ್ನ ಆಳುತ್ತಿರೋ ಪಕ್ಷ ಬಿಜೆಪಿ, ಎರಡನೇ ಬಾರಿಗೆ ದೇಶವನ್ನ ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಲಘುವಾಗಿ ಮಾತನಾಡುವುದನ್ನ ನಿಲ್ಲಿಸಬೇಕು. ನನಗೆ ಬುದ್ದಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನ ನೋಡಿಕೊಳ್ಳಲಿ. ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ. ನನ್ನ ಬಗ್ಗೆ, ನಮ್ಮ ಪಕ್ಷದ ಮಾಹಿತಿ ಇಲ್ಲ ಅಂದ್ರೆ ಪ್ರಧಾನಮಂತ್ರಿ ಅವರ ಹತ್ತಿರ ಕೇಳಿ ತಿಳಿದುಕೊಳ್ಳಲಿ ಎಂದು ಕುಟುಕಿದರು.

ತೈಲ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳಲಿ. ಬಡ ಜನರ ಮೇಲೆ ಹೊರೆ ಏರಿಕೆ ಮಾಡಿದ್ದಾರೆ. ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರೋ ಕೊಡುಗೆ ಇದು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಮ್ಯಾಪ್ ಇದಿಯೋ ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನು ತೊಂದರೆ ಆಗುತ್ತಿದ್ದೆ, ಅನ್ಯಾಯವಾಗಿದೆ ಎಂಬುದುನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ನೀಡಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ. ಕೇಂದ್ರ ಸರ್ಕಾರ ಜನರ ಸಾಮಾನ್ಯರಿಗೆ ಎಷ್ಟು ಸ್ವಂದಿಸಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: