ಬಿಜೆಪಿಯವರು ತಮಿಳುನಾಡಲ್ಲಿ ಈ ಬಗ್ಗೆ ಮಾತಾಡ್ಲಿ, ಹೊಡೆದು ಕಳುಹಿಸ್ತಾರೆ: ಡಿಕೆ ಶಿವಕುಮಾರ್ ಸವಾಲು!

dk shivkumar criticize national education policy : ನಾನು ಒಬ್ಬ ಶಿಕ್ಷಣ ತಜ್ಞ, ವಿದ್ಯಾ ಸಂಸ್ಥೆ ನಡೆಸುತ್ತಿರುವವನು. ಅನೇಕ ಸಂಸ್ಥೆಗಳಲ್ಲಿ ಟ್ರಸ್ಟಿ ಆಗಿದ್ದೇನೆ. ನನಗೆ ಶಿಕ್ಷಣ ನೀತಿ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ.

ಡಿಕೆ ಶಿವಕುಮಾರ್​

ಡಿಕೆ ಶಿವಕುಮಾರ್​

  • Share this:
ಬೆಂಗಳೂರು/ ರಾಮನಗರ: ರಾಷ್ಟ್ರೀಯ ಶಿಕ್ಷಣ ನೀತಿ(national education policy )ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (dk shivkumar )ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ನೀತಿ ರಾಷ್ಟ್ರ ವ್ಯಾಪಿ ಚರ್ಚೆ ಆಗಬೇಕು. ನಾನು ಒಬ್ಬ ಶಿಕ್ಷಣ ತಜ್ಞ, ವಿದ್ಯಾ ಸಂಸ್ಥೆ ನಡೆಸುತ್ತಿರುವವನು. ಅನೇಕ ಸಂಸ್ಥೆಗಳಲ್ಲಿ ಟ್ರಸ್ಟಿ ಆಗಿದ್ದೇನೆ. ನನಗೆ ಶಿಕ್ಷಣ ನೀತಿ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ರಾಜ್ಯದ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿ ಮಾಡಲು‌ ಮುಂದಾಗಿದೆ. ಪಾರ್ಲಿಮೆಂಟ್, ಅಸೆಂಬ್ಲಿಯಲ್ಲಿ ಚರ್ಚೆ ಆಗಿಲ್ಲ, ಶಿಕ್ಷಕರ ಜೊತೆ ಚರ್ಚೆ ಆಗಿಲ್ಲ. ಏಕಾಏಕಿ ಜಾರಿ‌ ಮಾಡ್ತೇವೆ ಎಂದು ಮಿನಿಸ್ಟರ್ ಹೇಳಿಕೆ ಕೊಟ್ಟರೇ ಶಿಕ್ಷಕರು ಗಾಬರಿಯಾಗಿದ್ದಾರೆ. NEP ಎಂದ್ರೆ ನಾಗಪೂರು ಎಜುಕೇಶನ್ ಪಾಲಿಸಿ. ರಾಷ್ಟ್ರೀಯ ಶಿಕ್ಷಣ ನೀತಿಗೆ ಕಾಂಗ್ರೆಸ್ ಸಂಪೂರ್ಣ ವಿರೋಧವಿದೆ ಎಂದರು.

ತಮಿಳುನಾಡಲ್ಲಿ ಹೇಳಿ ನೋಡಿ ಹೊಡೆಯುತ್ತಾರೆ

ಕನ್ನಡ ಪರ ಸಂಘಟನೆಗಳು ಬಂದು ಮನವಿ ಮಾಡುತ್ತಿದ್ದಾರೆ. ಹಿಂದಿ ಏರಲು ಪ್ರಯತ್ನ ನಡೆಯುತ್ತಿದೆ‌. ಹಿಂಬಾಗಿಲಿಂದ ಹಿಂದಿ ಏರಲು ಹೊರಟಿದ್ದಾರೆ‌ ಎಂದು ಡಿಕೆಶಿ ಆರೋಪಿಸಿದರು. ತಮಿಳುನಾಡಲ್ಲಿ ಈ ಬಗ್ಗೆ ಮಾತಾಡಿದ್ರೆ ಹೊಡೆಯುತ್ತಾರೆ‌.ಆಡಳಿತ ಪಕ್ಷದವರು ಏನೇ ತಿಪ್ಪರಲಾಗ ಹಾಕಿದ್ರು ಜಾರಿ ಆಗಲು‌ ನಾವು ಬಿಡಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಇನ್ನು ರಾಜ್ಯದ 29 ಕ್ಷೇತ್ರಗಳ ಎಂಎಲ್ಸಿ ಚುನಾವಣೆಯ ಹಿನ್ನಲೆಯಲ್ಲಿ ಅರ್ಜಿ ಆಹ್ವಾನಿಸಿದ್ದೇನೆ. ಮುಂದಿನ ಹತ್ತು ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ ತಿಂಗಳು ಎಲ್ಲಾ 29 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಲಾವುದುವು ಎಂದು ತಿಳಿಸಿದರು.

ಹಿಂದುತ್ವದ ವಿಚಾರ ಬೇಕಿಲ್ಲ

ಸಂಸದ ಡಿ.ಕೆ.ಸುರೇಶ್ ಸಹ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಪ್ರಧಾನಿ ಮೋದಿ ವಿರುದ್ಧ ಕನಕಪುರದಲ್ಲಿ ವಾಗ್ದಾಳಿ ನಡೆಸಿದರು. ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸರಿಯಲ್ಲ. ಮೋದಿ ಸರ್ಕಾರದಲ್ಲಿ ಎಲ್ಲವೂ ನಾವೇ ಮಾಡಿದ್ದು ಅನ್ನೋದು ನಡೆಯುತ್ತಿದೆ. ಆದರೆ ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಈಗ ಕೋವಿಡ್ ನಿಂದಾಗಿ ಯಾವ ಶಾಲೆಗಳು ನಡೆದಿಲ್ಲ. ಈ ಹೊತ್ತಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಬೇಕು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಇದೇ, ಹಿಂದುತ್ವದ ವಿಚಾರ ಬೇಕಿಲ್ಲ. ಇದರಿಂದಾಗಿ ಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದರು ಆಕ್ಷೇಪ ವ್ಯಕ್ತಪಡಿಸಿದರು.

ಬೆಲೆ ಏರಿಸೋದೇ ಸರ್ಕಾರದ ಕೆಲಸವಾಗಿದೆ

ಬಿಜೆಪಿಯವರಿಗೆ ಕೋವಿಡ್ ಬಗ್ಗೆ ಯಾವುದೇ ಗಮನವಿಲ್ಲ ಎಂದು ಸಂಸದ ಡಿಕೆ ಸುರೇಶ್​ ಟೀಕಿಸಿದರು. ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಬೇರೆ ಬೇರೆ ಕಾಯಿಲೆಗಳು ಬರುತ್ತಿವೆ. ಯುವಕರಿಗೆ ಬ್ಲಾಕ್ ಫಂಗಸ್ ಹಾಗೂ ಇತರೆ ಕಾಯಿಲೆ ಕಾಣಿಸಿಕೊಳ್ತಿದೆ. ಆದರೆ ಇವರಿಗೆ ಯಾವುದೇ ಜವಾಬ್ದಾರಿ ಇಲ್ಲ, ಬರೀ ಕಾರ್ಯಕ್ರಮ, ರ್ಯಾಲಿಗಳನ್ನ ಮಾಡ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ ಅಷ್ಟೇ, ಕಳೆದ ಏಳು ವರ್ಷದಲ್ಲಿ ಇದನ್ನೇ ಇವರು ಮಾಡಿದ್ದು ಎಂದು ಕಿಡಿಕಾಡಿದರು.

ಇದನ್ನೂ ಓದಿ: Abhishek Ambareesh Enter Politics: ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ಬಗ್ಗೆ ಬಾಯ್ಬಿಟ್ಟ ಸುಮಲತಾ ಅಂಬರೀಶ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: