• Home
 • »
 • News
 • »
 • state
 • »
 • ರಾಮನಗರದಲ್ಲಿ ರಾಜ್ಯದ ಮೊದಲ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸಮೂಹ.. ರೈತರಿಗೆ ಲಾಭ

ರಾಮನಗರದಲ್ಲಿ ರಾಜ್ಯದ ಮೊದಲ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸಮೂಹ.. ರೈತರಿಗೆ ಲಾಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯ ಮೂಲಕ ಸ್ಥಾಪಿಸಲಾಗುವ ತೋಟಗಾರಿಕೆಬೆಳೆಗಳ ಸಂಸ್ಕರಣಾ ಘಟಕದ ಸಮೂಹದ ಸ್ಥಾಪನೆಗೆ ಅಂದಾಜು 500 ಕೋಟಿ ರೂಪಾಯಿಯ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತಿದೆ.

 • Share this:

  ರೈತರು ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳನ್ನು ದೂರದ ಸಂಸ್ಕರಣಾ ಘಟಕಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಬೆಳೆಗಳನ್ನು ಸಂಸ್ಕರಣೆ ಮಾಡಿ ನಂತರ ಮಾರುಕಟ್ಟೆಗೆ ಅದನ್ನು ಮಾರಲು ಒಯ್ಯುವುದು ವಾಡಿಕೆ. ಆದರೆ ಈಗ ಕರ್ನಾಟಕ ಸರ್ಕಾರವು ರಾಜ್ಯದಲ್ಲಿಯೇ ಮೊದಲನೆಯ ಬಾರಿಗೆ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸಮೂಹವನ್ನು ರಾಮನಗರ ಜಿಲ್ಲೆಯಲ್ಲಿ ಅತೀ ಶೀಘ್ರದಲ್ಲಿಯೇ ಸ್ಥಾಪಿಸಲಿದೆ ಎಂದು ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.


  ರಾಜ್ಯದಲ್ಲಿ ಮೊದಲನೆಯ ಬಾರಿಗೆತೋಟಗಾರಿಕೆಬೆಳೆಗಳ ಸಂಸ್ಕರಣಾ ಘಟಕಗಳ ಸಮೂಹವನ್ನು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯ ಮೂಲಕ ಸ್ಥಾಪಿಸಲಾಗುವುದು ಮತ್ತು ಇದರ ಅಂದಾಜು ಹೂಡಿಕೆಯು ಸುಮಾರು 500 ಕೋಟಿ ರೂಪಾಯಿ ಆಗಬಹುದು ಎಂದು  ಅಶ್ವತ್ಥ ನಾರಾಯಣ ಹೇಳಿದ್ದಾರೆ.


  ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯ ಮೂಲಕ ಸ್ಥಾಪಿಸಲಾಗುವ ತೋಟಗಾರಿಕೆಬೆಳೆಗಳ ಸಂಸ್ಕರಣಾ ಘಟಕದ ಸಮೂಹದ ಸ್ಥಾಪನೆಗೆ ಅಂದಾಜು 500 ಕೋಟಿ ರೂಪಾಯಿಯ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಮೊದಲಿಗೆ ಬರುವಂತಹ ಖಾಸಗಿ ಪಾಲುದಾರರಿಗೆ 40 ಪ್ರತಿಶತಕ್ಕಿಂತ ಹೆಚ್ಚಿನ ಸಬ್ಸಿಡಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದು, ಖಾಸಗಿ ಪಾಲುದಾರರಿಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.
  ರಾಮನಗರದ ಹತ್ತಿರವಿರುವಂತಹಭೈರಪಟ್ಟಣದಲ್ಲಿ 40 ಎಕರೆ ಭೂಮಿಯನ್ನು ಈ ಯೋಜನೆಗಾಗಿ ಈಗಾಗಲೇ ಗುರುತಿಸಲಾಗಿದ್ದು ಅದನ್ನು ಬಳಸಿಕೊಳ್ಳಲಾಗುವುದು, ಎಲ್ಲವನ್ನೂ ಒಂದೇ ಬಾರಿಗೆ ಬಳಸಿಕೊಳ್ಳದೆ 40 ಎಕರೆಯಲ್ಲಿ ಮೊದಲನೇ ಹಂತದಲ್ಲಿ 15 ಎಕರೆ ಭೂಮಿಯನ್ನು ಈ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಮಾವಿನ ಸಂಸ್ಕರಣಾ ಘಟಕದ ಜೊತೆಗೆ ಸಾಮಾನ್ಯವಾಗಿ ಬೇಕಾದಂತಹ ಮೂಲಭೂತ ಸೌಲಭ್ಯಗಳನ್ನು ಸಹ 4 ಎಕರೆಗಳಲ್ಲಿ ಕಲ್ಪಿಸಿ ಕೊಡಲಾಗುವುದು ಮತ್ತು ಉಳಿದ 11 ಎಕರೆ ಭೂಮಿಯಲ್ಲಿ ಸುಮಾರು 5ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು  ಹೇಳಿದ್ದಾರೆ.


  ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ರಫ್ತಾರ್ ಯೋಜನೆಯ ಅಡಿಯಲ್ಲಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕದ ಸಮೂಹದ ಸ್ಥಾಪನೆಯಿಂದ ಸ್ಥಳೀಯ ರೈತರಿಗೆ ಬೆಳೆದಂತಹ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂದೂ ತಿಳಿಸಿದ್ದಾರೆ.


  ಇನ್ನು ಹೊಸದಾಗಿ ಹೈಟೆಕ್ ರೇಷ್ಮೆ ಮಾರುಕಟ್ಟೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ, ರಾಮನಗರದಲ್ಲಿರುವ ರೇಷ್ಮೆ ಹುಳು ಸಾಕಾಣೆ ತರಬೇತಿ ಸಂಸ್ಥೆಯ ಆವರಣದಲ್ಲಿಹೈಟೆಕ್ ರೇಷ್ಮೆ ಮಾರುಕಟ್ಟೆಯ ನಿರ್ಮಾಣಕ್ಕೆಸುಮಾರು 20 ಎಕರೆ ಭೂಮಿ ನೀಡಲಾಗುವುದು ಎಂದು ಹೇಳಿದರು. ಈ ಯೋಜನೆಗಾಗಿ ನಬಾರ್ಡ್ ಕಡೆಯಿಂದ 75 ಕೋಟಿ ರೂಪಾಯಿಯನ್ನು ಕಾಯ್ದಿರಿಸಿದ್ದಾರೆ ಮತ್ತು ಇದನ್ನು ಬಜೆಟ್‌ನಲ್ಲಿಯೂ ಘೋಷಿಸಲಾಗಿದೆ ಎಂದು ಹೇಳಿದರು.

  First published: