• Home
 • »
 • News
 • »
 • state
 • »
 • Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!

Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇವರ ಹೆಸರು ನಿಂಗಣ್ಣ ಅಂತ. ರಾಮನಗರದ ಅರೇಹಳ್ಳಿ ಗ್ರಾಮದವರು. ಇವ್ರು ಬರೇ ನಿಂಗಣ್ಣ ಆಗಿರ್ತಿದ್ರೆ ಸಾಧಕರಾಗ್ತಿರ್ಲಿಲ್ಲ, ಬದಲಿಗೆ ಸಾಲು ಮರದ ನಿಂಗಣ್ಣ ಆಗಿದ್ದೇ ಇವ್ರ ಸಾಧನೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಿದೆ.

 • News18 Kannada
 • Last Updated :
 • Ramanagara, India
 • Share this:

  ರಾಮನಗರ:  ಈ ವರ್ಷವೂ ಹಲವು ತೆರೆಮರೆಯ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದ್ರಲ್ಲಿ ಒಬ್ಬೊಬ್ಬರದ್ದು ಒಂದೊಂದು ಬಗೆಯ ಸಾಧನೆ. ಅದ್ರಲ್ಲೂ ರೇಷ್ಮೆನಾಡು ರಾಮನಗರದ (Ramanagara) ಈ ಸಾಧಕರದ್ದು ವಿಶಿಷ್ಟ ಕಥೆ. ಜಮೀನು ಮಾಲೀಕನಿಂದ ಆದ ಮೋಸಕ್ಕೆ ಪರಿಸರವನ್ನೇ ಸ್ನೇಹಿತನನ್ನಾಗಿಸಿಕೊಂಡ ಇವ್ರು ಈ ಸಾಲಿನ ರಾಜ್ಯೋತ್ಸವ (Karnataka Rajyotsava Award) ಪ್ರಶಸ್ತಿ ಪಡೆದ ಮಹಾನ್ ಸಾಧಕ.


  ಹೌದು, ಇವರ ಹೆಸರು ನಿಂಗಣ್ಣ ಅಂತ. ರಾಮನಗರದ ಅರೇಹಳ್ಳಿ ಗ್ರಾಮದವರು. ಇವ್ರು ಬರೇ ನಿಂಗಣ್ಣ ಆಗಿರ್ತಿದ್ರೆ ಸಾಧಕರಾಗ್ತಿರ್ಲಿಲ್ಲ, ಬದಲಿಗೆ ಸಾಲು ಮರದ ನಿಂಗಣ್ಣ ಆಗಿದ್ದೇ ಇವ್ರ ಸಾಧನೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಿದೆ. ಅರ್ಹವಾಗಿಯೇ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಒಂದು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿರುವ ನಿಂಗಣ್ಣ, ಸಾಲು ಮರದ ತಿಮ್ಮಕ್ಕ ಅವ್ರ ನಂತರ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಲು ಮರದ ಸಾಧಕ ಅನ್ನೋ ಹೆಸರಿಗೂ ಪಾತ್ರರಾಗಿದ್ದಾರೆ.


  ನಿಂಗಣ್ಣ ಸಾಲುಮರದ ನಿಂಗಣ್ಣ ಆಗಿದ್ದೀಗೆ
  ನಿಂಗಣ್ಣ ಸಾಲುಮರದ ನಿಂಗಣ್ಣ ಆಗಿ ಬದಲಾಗಿದ್ರ ಹಿಂದೆ ಒಂದು ರೋಚಕ ಕಥೆಯಿದೆ. ಹಲವು ವರ್ಷಗಳ ಹಿಂದೆ ಇವ್ರು ಇನ್ನೊಬ್ಬ ಭೂಮಾಲಿಕನ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡಿದ್ದರು. ಆದರೆ ಕೊನೆಗೆ ಭೂಮಾಲಿಕ ಕೈ ಎತ್ತಿಬಿಟ್ಟ. ಇವ್ರಿಗೆ ಸಲ್ಲಬೇಕಿದ್ದ ಪಾಲನ್ನ ಕೊಡದೇ ಮೋಸ ಮಾಡಿದ್ದ.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  ಇದ್ರಿಂದ ಪ್ರಕೃತಿಯನ್ನೇ ತನ್ನ ಸ್ನೇಹಿತನನ್ನಾಗಿಸಿದ ಈ ನಿಂಗಣ್ಣ, ಸುಮಾರು 20 ವರ್ಷಗಳಿಂದ ಗಿಡಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಅವುಗಳೆಲ್ಲವೂ ಈಗ ಮರಗಳಾಗಿ ಬೆಳೆದು ನಿಂತಿವೆ.


  ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


  ಹ್ಯಾಟ್ಸಾಪ್ ನಿಂಗಣ್ಣನವ್ರೇ!
  ಹೀಗೆ ನಿಂಗಣ್ಣ ಮರ ಗಿಡಗಳ ಸಾಮ್ರಾಜ್ಯದ ದೊರೆಯಾಗಿದ್ದಾರೆ. ತಾವು ನೆಟ್ಟ ಗಿಡಗಳು ತನಗೆ ರಾಜ್ಯೋತ್ಸವ ಪ್ರಶಸ್ತಿ ತಂದುಕೊಡುತ್ತೆ ಅನ್ನೋ  ಕಲ್ಪನೆ ಅವರಲ್ಲಿ ಇದ್ದಿರಲಿಲ್ಲವೋ ಏನೋ. ಆದರೆ ಅವರ ಸಾಧನೆ ಈ ನಾಡಿನ ಪ್ರತಿಯೊಬ್ಬರಿಗೂ ಮಾದರಿ ಅನ್ನೋದು ಮರೆಯುವಂತಿಲ್ಲ. ಹ್ಯಾಟ್ಸಾಪ್ ನಿಂಗಣ್ಣನವ್ರೇ!.


  ಮಾಹಿತಿ, ವಿಡಿಯೋ ಕೃಪೆ:  ಎಟಿ ವೆಂಕಟೇಶ್, ನ್ಯೂಸ್ 18 ಕನ್ನಡ

  Published by:ಗುರುಗಣೇಶ ಡಬ್ಗುಳಿ
  First published: