ವಿರೋಧಿಗಳು ನಮ್ಮ ಪಕ್ಷದ ಜೊತೆ ಚೆನ್ನಾಗಿರುವುದರಿಂದ ನಾವೇ ವಿರೋಧ ಪಕ್ಷವಾಗಬೇಕಾಯ್ತು; ಸಚಿವ ಸಿ.ಪಿ. ಯೋಗೇಶ್ವರ್ ಟಾಂಗ್

ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆ ಚೆನ್ನಾಗಿದ್ದಾರೆ. ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಸಚಿವ ಸಿಪಿ ಯೋಗೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಸಚಿವ ಯೋಗೇಶ್ವರ್

ಸಚಿವ ಯೋಗೇಶ್ವರ್

  • Share this:
ಚನ್ನಪಟ್ಟಣ : ಹೈಕಮಾಂಡ್ ಸೂಚಿಸಿದರೆ ಯಾವುದೇ ಸಮಯದಲ್ಲಿಯೂ ರಾಜೀನಾಮೆಗೆ ಸಿದ್ಧ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ವಿಚಾರವಾಗಿ ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ‌. ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.  ನಾನು ರಾಜಕೀಯ ವಿಚಾರವಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ.‌ ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ನಾನು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ. ಸಿಎಂ ಬಗ್ಗೆ ಮಾತನಾಡಿದರೆ ಸುಖಾಸುಮ್ಮನೆ ವಿವಾದವಾಗ್ತಿದೆ. ವಿರೋಧ ಪಕ್ಷದವರು ನಮ್ಮ ಪಕ್ಷದವರ ಜೊತೆ ಚೆನ್ನಾಗಿಯೇ ಇರುವುದರಿಂದ ನಾವೇ ವಿರೋಧಪಕ್ಷವಾಗಬೇಕಾಯಿತು ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ನಾನು ಎಂದಿಗೂ  ಕಠೋರವಾಗಿ ಮಾತನಾಡಿಲ್ಲ, ನಾನು ಅವರ ಬಗ್ಗೆ ಯಾವತ್ತಿಗೂ ಸಾಫ್ಟ್ ಆಗಿದ್ದೇನೆ. ಆದರೆ ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಪಕ್ಷದಲ್ಲಿ ಉನ್ನತ ನಾಯಕರು ಇದ್ದಾರೆ. ಅವರು ನನಗೆ ಪಕ್ಷ ರಾಜೀನಾಮೆ ಕೊಡು ಎಂದರೇ ಕೊಡಬೇಕಾಗುತ್ತದೆ.‌ ಹಾಗಾಗಿ ಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕಿಸಬೇಡಿ ಎಂದು ಸಚಿವ ಸಿಪಿ ಯೋಗೇಶ್ವರ್ ಹೇಳಿದರು.

ವಿರೋಧ ಪಕ್ಷಗಳು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ, ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಟಾಂಗ್ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪನವರ ಬಗ್ಗೆ ನಾನು ಯಾವಾಗಲೂ ಮಾತನಾಡಿಲ್ಲ. ಅವರು ನಮ್ಮ ನಾಯಕರು. ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರೇ ನಾಯಕರು. ಹಾಗಾಗಿ ನಾನು ಅವರ ಬಗ್ಗೆ ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ. ಅವರ ಬಗ್ಗೆ ನಾನು‌ ಯಾವಾಗಲೂ ಸಾಫ್ಟ್, ಅವರು ನಮ್ಮ ನಾಯಕರು ಎಂದು ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದರು.‌

ಇದನ್ನೂ ಓದಿ: CM BS Yediyurappa: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಖಚಿತ?; ರಾಜೀನಾಮೆಗೆ ಸಿದ್ಧ ಎಂದ ಸಿಎಂ ಯಡಿಯೂರಪ್ಪ!

ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆಂದು ಕೆಲವು ಬಿಜೆಪಿ ನಾಯಕರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ವಿರೋಧ ಬಣಕ್ಕೆ ಚುರುಕು ಮುಟ್ಟಿಸಲು ಸಿಎಂ ಯಡಿಯೂರಪ್ಪ ತಮ್ಮ ಮಗ ಬಿ.ವೈ. ವಿಜಯೇಂದ್ರ ಮೂಲಕ ದೆಹಲಿಯ ಹೈಕಮಾಂಡ್ ನಾಯಕರಿಗೆ ದೂರು ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನನ್ನ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ಅವರು ಎಷ್ಟು ದಿನ ವಿಶ್ವಾಸ ಇಟ್ಟು ಮುಂದುವರೆಯಿರಿ ಅನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ಯಾವಾಗ ರಾಜೀನಾಮೆ ಕೊಡಿ ಅಂತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ರಾಜ್ಯ ಬಿಜೆಪಿ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ ಎಂದು ಮತ್ತೆ ಸಾಬೀತಾಗಿದೆ. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲಿಯೇ ಬಿಜೆಪಿಯ ಹಲವು ಶಾಸಕರು, ಸಚಿವರು, ಮುಖಂಡರು, ನಾಯಕರು ಯಡಿಯೂರಪ್ಪ ಪರವಾಗಿ ಬ್ಯಾಟ್ ಮಾಡಿದ್ದಾರೆ.‌ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಯಡಿಯೂರಪ್ಪ ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ. ಈ ಸರ್ಕಾರದ ಪೂರ್ಣ ಅವಧಿಯನ್ನ ಪೂರೈಸಲಿದ್ದಾರೆಂದು ತಿಳಿಸಿದ್ದಾರೆ. ಈ ಬಗ್ಗೆ ಬಸವರಾಜ್ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಇನ್ನು ಹಲವರು ಯಡಿಯೂರಪ್ಪ ಪರವಾಗಿ ಮಾತನಾಡಿದ್ದಾರೆ.‌

ಹಾಗಾಗಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಇವತ್ತಿಗೆ ಕೊನೆ ಎಂದು ಬಿಜೆಪಿಯ ಹಲವು ನಾಯಕರು ಸ್ಪಷ್ಟಪಡಿಸಿದ್ದಾರೆ. ಇನ್ನು ಸಚಿವ ಯೋಗೇಶ್ವರ್ ಸಹ ಯಡಿಯೂರಪ್ಪ ವಿರುದ್ಧ ಈವರೆಗೆ ಗರಂ ಅಗಿದ್ದ ಸಿಪಿವೈ ಈಗ ಇದ್ದಕ್ಕಿದ್ದಂತೆ ಯಡಿಯೂರಪ್ಪ ಪರವಾಗಿ ಮಾತನಾಡ್ತಿದ್ದಾರೆ. ಅವರೇ ನಮ್ಮ ನಾಯಕರು‌ ಎನ್ನುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಈ ನಡುವೆಯೂ ರಾಜ್ಯ ಬಿಜೆಪಿ ನಾಯಕತ್ವ ಮುಂದುವರೆಯುತ್ತಾ ? ಇಲ್ಲ ಬೇರೆ ನಾಯಕ ಬರುತ್ತಾರಾ? ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

(ವರದಿ : ಎ.ಟಿ. ವೆಂಕಟೇಶ್)
Published by:Sushma Chakre
First published: