• Home
  • »
  • News
  • »
  • state
  • »
  • Woman stood Nude- ಕನಕಪುರದಲ್ಲಿ ನಿಧಿಗಾಗಿ ಮಹಿಳೆಯನ್ನ ಬೆತ್ತಲಾಗಿಸಿ ಪೂಜೆ; 6 ಮಂದಿ ಬಂಧನ

Woman stood Nude- ಕನಕಪುರದಲ್ಲಿ ನಿಧಿಗಾಗಿ ಮಹಿಳೆಯನ್ನ ಬೆತ್ತಲಾಗಿಸಿ ಪೂಜೆ; 6 ಮಂದಿ ಬಂಧನ

ಸಾತನೂರು ಪೊಲೀಸ್ ಠಾಣೆ

ಸಾತನೂರು ಪೊಲೀಸ್ ಠಾಣೆ

Black Magic: ಹಣಕಾಸು ಕಷ್ಟ ಹೇಳಿಕೊಂಡ ವ್ಯಕ್ತಿಗೆ ಮನೆಯಲ್ಲಿ ನಿಧಿ ಇದೆ ಎಂದು ಆಸೆ ಹುಟ್ಟಿಸಿ ತಮಿಳುನಾಡಿನ ಇಬ್ಬರು ವ್ಯಕ್ತಿಗಳು ವಾಮಾಚಾರಕ್ಕೆ ಯತ್ನಿಸಿದ್ಧಾರೆ. ಮಹಿಳೆಯೊಬ್ಬರನ್ನ ಬೆತ್ತಲಾಗಿಸಿ ಪೂಜೆ ಮಾಡಿದ್ದಾರೆ. ಪೊಲೀಸರು ಆರು ಮಂದಿಯನ್ನ ಬಂಧಿಸಿದ್ಧಾರೆ.

  • Share this:

ರಾಮನಗರ: ನಿಧಿಗಾಗಿ (Hidden Treasure) ತಮಿಳುನಾಡು ರಾಜ್ಯದಿಂದ ಬಂದ ತಂಡ ಪೊಲೀಸರ ಅತಿಥಿಯಾಗಿದ್ದಾರೆ. ಇವರನ್ನ ನಂಬಿ ಮನೆಗೆ ಕರೆದ ಮಾಲೀಕ ಕಂಗಾಲಾಗಿದ್ದಾನೆ. ಓರ್ವ ಮಹಿಳೆಯನ್ನ ಬೆತ್ತಲಾಗಿಸಿ (Woman made to stand nude) ಪೂಜೆ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿದ್ದಾರೆ ಅರು ಮಂದಿ ಖದೀಮರು.


ನಿಧಿ ಆಸೆಗಾಗಿ ಮನೆಯೊಂದರಲ್ಲಿ ವಾಮಾಚಾರಕ್ಕೆ ಮುಂದಾದವರು ಇದೀಗ ಪೊಲೀಸರ ಅತಿಥಿಗಳಾಗಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಭೂಹಳ್ಳಿ ಗ್ರಾಮದಲ್ಲಿ (Bhuhalli village of Sathanur in Kanakapura Taluk, Ramangara district) ನಡೆದಿದೆ. ಅಂದಹಾಗೆ ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹೊಂದಿದ್ದ. ಇರೋ ಬರೋ ಜಮೀನನ್ನ ಕೂಡ ಮಾರಾಟ ಮಾಡಿದ್ದ. ಕಳೆದ ಆರು ತಿಂಗಳಿಂದ ಸಾಕಷ್ಟು ಪರದಾಟ ನಡೆಸುತ್ತಿದ್ದ. ಹೀಗಾಗಿ ಮನೆಯಲ್ಲಿ ವಾಮಾಚಾರ ಮಾಡಿದ್ರೆ ನಿಧಿ ಸಿಗುತ್ತೆ ಎಂಬ ಬಗ್ಗೆ ಗುರೂಜಿ ಒಬ್ಬ ಈತನಿಗೆ ಹೇಳಿದ್ದ. ಅಂದರಂತೆ ನಿನ್ನೆ ತಡರಾತ್ರಿ ಮನೆಯಲ್ಲಿ ವಾಮಾಚಾರ ಮಾಡಿಸುವ ವೇಳೆ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.


ಅಂದಹಾಗೆ ಸಾಕಷ್ಟು ನಷ್ಟ ಹೊಂದಿದ್ದ ಶ್ರೀನಿವಾಸನಿಗೆ ಮದುವೆಯೊಂದರಲ್ಲಿ ತಮಿಳುನಾಡು ಮೂಲದ ಪಾರ್ಥಸಾರಥಿ (Parthasarathy from Tamil Nadu) ಎಂಬುವವನು ಪರಿಚಯವಾಗುತ್ತಾನೆ. ಅವನ ಬಳಿ ತನ್ನ ಕಷ್ಟಗಳನ್ನ ಶ್ರೀನಿವಾಸ್ ಹೇಳಿಕೊಳ್ಳುತ್ತಾನೆ. ಆಗ ಪಾರ್ಥಸಾರಥಿ ನನಗೆ ತಮಿಳುನಾಡಿನಲ್ಲಿ ಗೂರುಜಿ ಒಬ್ಬರು ಪರಿಚಯ ಎಂದು ಹೇಳಿ ಭೇಟಿ ಮಾಡಿಸುತ್ತಾನೆ. ಈ ವೇಳೆ ತಮಿಳುನಾಡು ಮೂಲದ ಶಶಿಕುಮಾರ್ (Shashikumar Guruji from Tamil Nadu) ಎಂಬ ಆ ಗುರೂಜಿ, ನಿನ್ನ ಮನೆಯಲ್ಲಿ ನಿಧಿ ಇದೆ. ಹೀಗಾಗಿ ನಿನಗೆ ಈ ಸಮಸ್ಯೆಗಳು ಆಗುತ್ತಿವೆ. ಮನೆಯಲ್ಲಿ ಪೂಜೆ ಮಾಡಿದರೆ ನಿಧಿ ಸಿಗುತ್ತದೆ ಎಂದು ಹೇಳುತ್ತಾನೆ. ಅಲ್ಲದೆ ಪೂಜೆಗೆ 45 ಸಾವಿರ ಹಣ ಕೂಡ ಕೊಡಬೇಕು ಎಂದು ತಿಳಿಸಿರುತ್ತಾನೆ. ಅದರಂತೆ ನೆನ್ನೆ ರಾತ್ರಿ ಪೂಜೆ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.


ಮಹಿಳೆಯನ್ನ ಬೆತ್ತಲಾಗಿಸಿ ಪೂಜೆ: 


ಇನ್ನು, ಮಾಟಗಾರನ ಮಾತಿನಂತೆ ಶ್ರೀನಿವಾಸ್ ಮನೆಯಲ್ಲಿ ಇದೇ ತಿಂಗಳ 2ರಂದು ಅಮಾವಾಸೆ ದಿನ ಕೂಡ ಪೂಜೆ ಮಾಡುತ್ತಾರೆ. ಆದ್ರೆ ಪೂಜೆ ಯಶಸ್ವಿ ಆಗುವುದಿಲ್ಲ. ಮತ್ತೆ ಮುಂದಿನ ಮಂಗಳವಾರ ಮಹಿಳೆಯೊಬ್ಬಳನ್ನ ಬೆತ್ತಲೆಯಾಗಿ ನಿಲ್ಲಿಸಿ, ಮನೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿದ್ರೆ ನಿಧಿ ಸಿಗುತ್ತದೆ ಎಂದು ಸಲಹೆ ನೀಡುತ್ತಾನೆ. ಅದರಂತೆ ನಿನ್ನೆ ರಾತ್ರಿ ಕೂಡ ಮನೆಯಲ್ಲಿ ಬೆಂಗಳೂರಿನ ಕೆಂಗೇರಿ ಮೂಲದ ಕೂಲಿ ಕೆಲಸ ಮಾಡುವ ಮಹಿಳೆಯನ್ನ ಕರೆದುಕೊಂಡು ಬಂದು ಬೆತ್ತಲೆ ಮಾಡಿ ಪೂಜೆ ಸಹಾ ಮಾಡಿದ್ದಾರೆ. ಆ ಮಹಿಳೆ ತನ್ನ 4 ವರ್ಷದ ಮಗುವನ್ನು ಸಹಾ ಜೊತೆಗೆ ಕರೆದುಕೊಂಡು ಬಂದಿದ್ದಳು. ಇದು ಸಹಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: Puneeth Rajkumar- ಪುನೀತ್ ಪ್ರೇರಣೆ: ಮದುವೆ ಮಂಟಪದಲ್ಲೇ ನವದಂಪತಿ, ಪೋಷಕರಿಂದ ನೇತ್ರದಾನ


ಇನ್ನು ಪ್ರಕರಣ ಸಂಬಂಧ ಪಾರ್ಥಸಾರಥಿ, ಮೇಸ್ತ್ರಿ ನಾಗರಾಜು, ಗೂರುಜಿ ಶಶಿಕುಮಾರ್, ಆತನ ಶಿಷ್ಯ ಮೋಹನ್ ಲಕ್ಷ್ಮೀ ನರಸಪ್ಪ ಮತ್ತು ಲೋಕೇಶ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.


ಒಟ್ಟಾರೆ, ಮನೆಯಲ್ಲಿ ವಾಮಾಚಾರ ಮಾಡಿದ್ರೆ ನಿಧಿ ಸಿಗುತ್ತದೆ ಎಂದು ಹೇಳಿ ಯಾಮಾರಿಸಿ ಮಹಿಳೆಯೊಬ್ಬಳನ್ನ ಬೆತ್ತಲೆ ಕೂಡ ಮಾಡಿ ಪೂಜೆ ಮಾಡಲು ಮುಂದಾದವರು ಇದೀಗ ಪೊಲೀಸರ ಅಥಿತಿಗಳಾಗಿದ್ದಾರೆ.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published: