ಪಾದಯಾತ್ರೆ ವೇಳೆ ಡಿಕೆಶಿ ಜೊತೆ JDS MLA ಮಾತುಕತೆ.. ಎಚ್​ಡಿಕೆಗೆ ಮತ್ತೊಂದು ಶಾಕ್ ಕಾದಿದೆಯಾ?

ಜೆಡಿಎಸ್​ ಪಕ್ಷ ಹಾಗೂ ಎಚ್​.ಡಿ.ಕುಮಾರಸ್ವಾಮಿಗೆ ಮತ್ತೊಂದು ಶಾಕ್​ ಕಾದಿದೆಯಾ? ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್​​ ಸೇರ್ತಾರಾ? ಈ ಬಗ್ಗೆ ಮಾಜಿ ಶಾಸಕ ಬಾಲಕೃಷ್ಣ ಏನಂದರು?

ಡಿಕೆಶಿ ಜೊತೆ ಮಾತುಕತೆ

ಡಿಕೆಶಿ ಜೊತೆ ಮಾತುಕತೆ

  • Share this:
 ರಾಮನಗರ : ಎರಡನೇ ಹಂತದ ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ  (Congress Mekedatu Padayatra) ಎರಡನೇ ದಿನ ಭರ್ಜರಿಯಾಗಿ ನಡೆಯಿತು. ಬಿಡದಿಯಿಂದ ಬೆಂಗಳೂರು ಕಡೆಗೆ ಕೈ ಪಾದಯಾತ್ರೆ ಹೊರಟಿತು. ಇವತ್ತಿನ ಪಾದಯಾತ್ರೆ ಸ್ಥಳದಲ್ಲಿ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ (JDS MLA Gubbi Srinivas)  ಪ್ರತ್ಯಕ್ಷವಾಗಿದ್ದರು.  ಡಿ.ಕೆ.ಶಿವಕುಮಾರ್ ಜತೆಗೆ ಕಾಣಿಸಿಕೊಂಡರು.  ಈ ಬಗ್ಗೆ ಪ್ರಶ್ನೆ ಮಾಡಿದಾಗ ಶ್ರೀನಿವಾಸ್ ಜತೆಗಿದ್ದ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಮಾತನಾಡಿ ಇವತ್ತು ನನ್ನ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಲು ಬಂದಿದ್ದಾರೆ.  ಕುಮಾರಣ್ಣನನ್ನ ನೋಡಲು ಬಿಡದಿ ತೋಟದ ಮನೆಗೆ ಹೋಗ್ತಿದ್ದರಂತೆ.  ಹಾಗೇ ನನಗೆ ಶುಭಕೋರಲು ಬಂದಿದ್ದಾರೆ. ಕಾಂಗ್ರೆಸ್ ಸೇರ್ತಾರೆ ಎಂಬ ವಿಚಾರಕ್ಕೆ  ಆ ರೀತಿ ಇಲ್ಲ ಎಂದರು ಬಾಲಕೃಷ್ಣ.

ಇದನ್ನೂ ಓದಿ: ಅಣ್ಣಾ.. ಜನ ಛೀ ಥೂ ಅಂತಿದ್ದಾರೆ, ಮೊದಲು ನಾಲಿಗೆ ರಕ್ಷಣೆ ಮಾಡ್ಕೊಳಣ್ಣ; HDK ಗೆ ಡಿಕೆಶಿ ಸಖತ್ ಟಾಂಗ್

ಪಾದಯಾತ್ರೆಗೆ ತುಮಕೂರಿನ ಶಕ್ತಿ 

ತಡವಾಗಿ ವೇದಿಕೆಗೆ ಬಂದ ಸಿದ್ದರಾಮಯ್ಯ ಗೆ ಬೃಹತ್ ಹಾರ ಹಾಕಿ ಸ್ವಾಗತ ಮಾಡಲಾಯಿತು. ಸೆಲ್ಫಿಗೆ ಮುಗಿಬಿದ್ದ ಯುವಕನ ಮೇಲೆ ಸಿದ್ದರಾಮಯ್ಯ ಗರಂ ಆದರು.  ಇನ್ನು ವೇದಿಕೆಯಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ - ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೇ, ಆದರೆ ಅವರಿಗೆ ಈ ಯೋಜನೆ ಜಾರಿ ಮಾಡಲು ಆಗ್ತಿಲ್ಲ. ಯಡಿಯೂರಪ್ಪ ನವರಿಗೂ ಮನವಿ ಮಾಡಿದ್ದವು. ಈಗ ಬೊಮ್ಮಾಯಿರವರಿಗೂ ಸಹ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.  ಹಾಗಾಗಿ ಇವತ್ತು ನಾವು ಪಾದಯಾತ್ರೆ ಮಾಡ್ತಿದ್ದೇವೆ.  ಅಧ್ಯಕ್ಷರು ನಮಗೆ ಹೇಳಿದ್ದರು ತುಮಕೂರು ಜನ ಬರಬೇಕು ಎಂದು ನಾವು ಅವರಿಗೆ ಧನ್ಯವಾದ ಹೇಳ್ತೇನೆ.‌ ಇವತ್ತು ನಾವು ತುಮಕೂರು ಜಿಲ್ಲೆಯ ಜನ ಬಂದಿದ್ದೇವೆ, ಜಯಚಂದ್ರ, ವೆಂಕಟೇಶ್ ಸೇರಿದಂತೆ ಎಲ್ಲರೂ ಬಂದಿದ್ದೇವೆ. ನಮ್ಮ ಹೋರಾಟ ಮುಂದುವರೆಸುತ್ತಿದ್ದೇವೆ ಎಂದರು.

ಪಾದಯಾತ್ರೆಯಲ್ಲಿ ಮುರುಘಾ ಶ್ರೀ ಭಾಗಿ, ಡಿಕೆಶಿ ಖುಷ್ 
ಚಿತ್ರದುರ್ಗದ ಮುರುಘಾಶ್ರೀಗಳು ಪಾದಯಾತ್ರೆಗೆ ಬೆಂಬಲ ನೀಡಿದರು. ಶ್ರೀಗಳ ಜತೆಗೆ ಹಲವು ಮಠಾಧೀಶರು ಸಹ ಬೆಂಬಲ ನೀಡಿದರು. ಸಾಧುಸಂತರ ಕೆಲಸ ಏನೆಂದರೆ ಒಳ್ಳೆಯನ್ನ ಬಯಸೋದು.‌ ಮೇಕೆದಾಟು ಹೋರಾಟ ಒಳ್ಳೆಯ ಉದ್ದೇಶದಿಂದ ನಡೆಯುತ್ತಿದೆ.ಹಾಗಾಗಿ ಇವತ್ತು ನಾವು ಬೆಂಬಲ ಕೊಡಲು ಬಂದಿದ್ದೇವೆ. ಡಿಕೆಶಿ ಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಅವರ ಈ ಉದ್ದೇಶಕ್ಕೆ ಒಳ್ಳೆಯದಾಗಲಿ.‌ ನಾವು ಇವತ್ತು ಆರ್ಶೀವಾದ ಮಾಡಲು ಬಂದಿದ್ದೇವೆಂದರು.  ಬಿಡದಿಯ ಕಾಡುಮನೆ ಬಳಿ ಪಾದಯಾತ್ರೆ ಗೆ ಶ್ರೀಗಳು ಆಗಮಿಸಿದರು.  ಡಿಕೆಶಿ ಜತೆಗೆ ಪಾದಯಾತ್ರೆಗೆ ಆಗಮಿಸಿದ ಶ್ರೀ ಗಳಿಗೆ ಸನ್ಮಾನ‌ ಮಾಡಿ ಸಿಹಿ ವಿತರಣೆ ಮಾಡಿದರು ಡಿಕೆಶಿ. ಇನ್ನು ಶ್ರೀ ಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಾನು ಅವರಿಗೆ ತುಂಬುಹೃದಯದ ಧನ್ಯವಾದ ಹೇಳ್ತೇನೆ. ಅವರ ಈ ಬೆಂಬಲ ನಮಗೆ ಮತ್ತಷ್ಟು ಉತ್ಸಾಹ ತಂದಿದೆ.‌ ಶ್ರೀ ಗಳ ಕಾಲಿಗೆ ಬಿದ್ದು ಆರ್ಶೀವಾದ ಪಡೆದ ಡಿಕೆಶಿ ಜತೆಗೆ ಹೆಜ್ಜೆ ಹಾಕಿದ ಮುರುಗ ಶ್ರೀಗಳು ಶುಭವಾಗಲಿ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಗುಟುರು ಹಾಕಿದ್ರೆ ಸಾಕು, ಸೋನಿಯಾ ಅಲರ್ಟ್ ಆಗ್ತಾರೆ: CT Ravi ಒಳಗುದ್ದು!

ಕಾನೂನು ಎಲ್ಲರಿಗೂ ಒಂದೇ ಎಂದ ಸಿದ್ದರಾಮಯ್ಯ
ಕಾಂಗ್ರೆಸ್​​ ನಾಯಕರ ಮೇಲೆ FIR ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ಬಿಜೆಪಿಯವರು ಸಹ‌ ಪ್ರತಿಭಟನೆಗಳನ್ನ ಮಾಡಿಲ್ವಾ. ಅವರ ಮೇಲೂ ಸಹ ಕೇಸ್ ಹಾಕಲಿ, ಕಾನೂನು ಎಲ್ಲರಿಗೂ ಒಂದೇ ಅಲ್ವಾ.ನಮ್ಮ ಕೇಸ್ ಹಾಕಿದರೆ ಅದು ಅವರಿಗೆ ತಿರುಗುಬಾಣ ಆಗ್ತದೆ ಎಂದರು. ಇನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಸ್ ಹಾಕಿ ಜೈಲಿಗೆ ಕಳುಹಿಸಲಿ,  ಅದೇ ಅವರಿಗೆ ಬೇಕಾಗಿರುವುದು ಎಂದರು. 

ವಿಶೇಷವಾಗಿ ಅಭಿಮಾನ ಮೆರೆದ ವ್ಯಕ್ತಿ 
ಪಾದಯಾತ್ರೆಯಲ್ಲಿ ಡಿಕೆಶಿ ಅಭಿಮಾನಿಯೊಬ್ಬ ವಿಶೇಷ ಕ್ಯಾಂಪೇನ್ ಮಾಡಿದನು. ತಲೆಯ ಮೇಲೆ ಡಿಕೆಶಿ - ಮೇಕೆದಾಟು, ಸಿದ್ದು ಎಂದು ಡಿಸೈನ್ ಮಾಡಿಸಿರುವ ಅಭಿಮಾನಿ ರಾಮಕೃಷ್ಣ ಬೆಂಗಳೂರಿನ ಚಿಕ್ಕೇಗೌಡನಪಾಳ್ಯ ನಿವಾಸಿ. ವಿಶೇಷ ಕೇಶವಿನ್ಯಾಸ ಮಾಡಿಸಿಕೊಂಡು ಮೇಕೆದಾಟು ಪಾದಯಾತ್ರೆಯಲ್ಲಿ ಕ್ಯಾಂಪೇನ್ ಮಾಡಿದನು. ಹಸ್ತದ ಚಿತ್ರವನ್ನು ಬಿಡಿಸಿಕೊಂಡು ಕ್ಯಾಂಪೇನ್ ಮಾಡಿದನು. ಇನ್ನು ಪಾದಯಾತ್ರೆಗೆಹಣ ಕೊಟ್ಟು ಜನರನ್ನು ಕರೆತಂದಿದ್ದಾರೆಂದು ಕೈ ಮುಖಂಡರು ಎಂದು ಪಾದಯಾತ್ರೆಗೆ ಬಂದಿದ್ದ ವ್ಯಕ್ತಿಯೇ ಹೇಳಿದ್ದಾನೆ. ಪ್ರತಿ ಪಂಚಾಯತಿಗೂ ಒಂದು ಬಸ್ ವ್ಯವಸ್ಥೆ ಇದೇ. ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಹಣ ಸಂದಾಯವಾಗ್ತಿದೆ. ಬಸ್ ಹತ್ತುವ ಮುಂಚೆಯೇ 250 ರೂ ಹಂಚಿಕೆ ಮಾಡಿದ್ದಾರೆ. ಪ್ರತಿ ಪಾದಯಾತ್ರಿಗಳಿಗೆ 250 ರೂ ಹಂಚಿಕೆಯಾಗಿದೆ. ಸದ್ಯ ರಾಮನಗರದ ಬಿಡದಿಯಿಂದ ಬಂದ ಪಾದಯಾತ್ರೆ ಬೆಂಗಳೂರಿನ ಕೆಂಗೇರಿ ತಪುಲಿದೆ. ನಾಳೆ ಬೆಂಗಳೂರು ಕಡೆಗೆ ಬರಲಿದೆ.
Published by:Kavya V
First published: