Crime News: 2 ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ರೊಚ್ಚಿಗೆದ್ದ ಗಂಡ ಬೀಸಿಯೇ ಬಿಟ್ಟ ಮಚ್ಚು..!

ರಾಮು ಪತ್ನಿಯ ಜೊತೆಗೆ ಅದೇ ಗ್ರಾಮದ ಜಗದೀಶ್‌ ವಿವಾಹೇತರ ಸಂಬಂಧ ಹೊಂದಿದ್ದಎನ್ನಲಾಗ್ತಿದೆ.  ಈ ಸಂಬಂಧ ರಾಮು ದಂಪತಿ ನಡುವೆ ಆನೇಕ ಬಾರಿ ಕೌಟುಂಬಿಕ ಕಲಹ ಉಂಟಾಗಿತ್ತು.

ಆರೋಪಿ ಜಗದೀಶ , ಕೊಲೆಯಾದ ರಾಮು

ಆರೋಪಿ ಜಗದೀಶ , ಕೊಲೆಯಾದ ರಾಮು

  • Share this:
ರಾಮನಗರ(ಕನಕಪುರ) :  ಅಕ್ರಮ ಸಂಬಂಧದ (Extra Marital Affair ) ಹಿನ್ನೆಲೆ ವ್ಯಕ್ತಿಯೊಬ್ಬನನ್ನ ಮಚ್ಚಿನಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆ ತೇರಿನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕನಕಪುರ (Kanakapura) ತಾಲೂಕಿನ ಕಸಬಾ ಹೋಬಳಿಯ ತೇರಿನದೊಡ್ಡಿ ಗ್ರಾಮದ ಜಗದೀಶ್‌(28) ಕೊಲೆಯಾದ ವ್ಯಕ್ತಿ. ಈತ ಅದೇ ಗ್ರಾಮದ ರಾಮು (35) ಎಂಬಾತನಿಂದ ಕೊಲೆಯಾಗಿದ್ದಾನೆ. ಆರೋಪಿ ರಾಮು ತನ್ನ ಸೋದರ ಮಾವನ ಮಗಳನ್ನೇ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ರಾಮು ಪತ್ನಿಯ ಜೊತೆಗೆ ಅದೇ ಗ್ರಾಮದ ಜಗದೀಶ್‌ ವಿವಾಹೇತರ ಸಂಬಂಧ ಹೊಂದಿದ್ದಎನ್ನಲಾಗ್ತಿದೆ.  ಈ ಸಂಬಂಧ ರಾಮು ದಂಪತಿ ನಡುವೆ ಆನೇಕ ಬಾರಿ ಕೌಟುಂಬಿಕ ಕಲಹ ಉಂಟಾಗಿತ್ತು. ಎರಡು ಮೂರು ಬಾರಿ ನ್ಯಾಯ ಪಂಚಾಯ್ತಿ ಮಾಡಿ ಗ್ರಾಮದ ಮುಖಂಡರು ರಾಮು ಪತ್ನಿಗೆ ತಿಳಿ ಹೇಳಿದ್ದರು. ಆದರೂ ಇವರ ಸಂಬಂಧ ಮುಂದುವರಿದಿತ್ತು.

ಇದನ್ನೂ ಓದಿ: Hassan Murder: ಬಾಡೂಟಕ್ಕೆ ಕರೆಯಲಿಲ್ಲ ಎಂದು ಹೊಡೆದಾಟ; ಬಿದ್ದೇ ಬಿಡ್ತು ಯುವಕನ ಹೆಣ!

ಹೆಂಡತಿಯ ಬಾಯ್​​ಫ್ರೆಂಡ್​ ಗೆ ಇಟ್ಟೇ ಬಿಟ್ಟ ಮುಹೂರ್ತ 

ಇನ್ನು ಇದರಿಂದ ಕೆರಳಿದ ರಾಮು, ಜಗದೀಶನ ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆಯಾದ ಜಗದೀಶ್‌ ಶನಿವಾರ ರಾತ್ರಿ 8 ಗಂಟೆಗೆ ಬಸ್‌ ನಿಲ್ದಾಣದಲ್ಲಿ ಬಂದು ಕುಳಿತ್ತಿದ್ದ. ಈ ವೇಳೆ ಹಿಂಬದಿಯಿಂದ ಬಂದ ಆರೋಪಿ ರಾಮು, ಜಗದೀಶನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಜಗದೀಶ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಹಲ್ಲೆ ಬಳಿಕ ಕೃತ್ಯಕ್ಕೆ ಬಳಸಿದ್ದ ಮಚ್ಚಿನ ಸಮೇತ ಆರೋಪಿ ರಾಮು ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಶರಣಾಗಿದ್ದಾನೆ. ಇದಕ್ಕೂ ಮುನ್ನ ರಾಮು ತನ್ನ ಪತ್ನಿಯನ್ನು ಸಹ ಕೊಲೆ ಮಾಡಲು ಮುಂದಾಗಿದ್ದಾನೆ.‌ ಆದರೆ ಅದೃಷ್ಟವಶಾತ್ ಆಕೆಯ ಆಯಸ್ಸು ಗಟ್ಟಿಯಾಗಿತ್ತು, ಹಾಗಾಗಿ ಅವಳು ಎಸ್ಕೇಪ್ ಆಗಿದ್ದಾಳೆ.

ಬಿಡು ಎಂದರೂ ಬಿಡಲಿಲ್ಲ, ಕೊನೆಗೆ ಪ್ರಾಣವನ್ನೇ ಬಿಟ್ಟ 

ಈ ಹಿಂದೆಯೂ ಸಹ ಹಲವು ಬಾರಿ ಜಗದೀಶ್ ಗೆ ರಾಮು ಎಚ್ಚರಿಕೆ ನೀಡಿದ್ದಾನೆ. ನನ್ನ ಹೆಂಡತಿಯನ್ನ ಬಿಡು ಎಂದು ಬೇಡಿಕೊಂಡಿದ್ದಾನೆ. ಆದರೆ ಈತ ಬಿಡದ ಹಿನ್ನೆಲೆ ಕೊಲೆ ಮಾಡಿ ಕೊನೆಗೆ ಶರಣಾಗಿದ್ದಾನೆ.  ಇನ್ನು ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸ್ಥಳ ಮಹಜರು ಮಾಡಿ, ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೊಲೆ ಆರೋಪಿಗೆ ಆರೋಗ್ಯ ತಪಾಸಣೆ ನಡೆಸಿದ್ದು ಆತನಿಗೆ ಕೋವಿಡ್‌ ದೃಢಪಟ್ಟಿದೆ. ಆರೋಪಿ ರಾಮು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಒಟ್ಟಾರೆ ಅಕ್ರಮ ಸಂಬಂಧದ ಹಿನ್ನೆಲೆ ಒಂದು ಸಂಸಾರವೇ ಬೀದಿಪಾಲಾಗಿದೆ. ರಾಮುವಿನ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.

ಇದನ್ನೂ ಓದಿ: Mandya: ಪ್ರೇಯಸಿ ಜೊತೆ ಹೋದವ ಸಿಕ್ಕಿದ್ದು ಶವವಾಗಿ; ಸ್ನೇಹಿತ ಹಾಗೂ ಹುಡುಗಿ ತಾಯಿಯಿಂದಲೇ ನಡೀತಾ ಹತ್ಯೆ.?

ಮತ್ತೊಂದು ಪ್ರಕರಣದಲ್ಲಿ ಆತ್ಮಹತ್ಯೆಗೆ ಶರಣಾದ ಗಂಡ 

ಇನ್ನು ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿ ಮಗನನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೇಕೊಪ್ಪಲು ಗ್ರಾಮದಲ್ಲಿ ನಡೆದಿದೆ.  38 ವರ್ಷದ ಗಂಗಾಧರ್ ಗೌಡ ಆತ್ಮಹತ್ಯೆಗೆ ಶರಣಾದ ಪತಿ. ತಂದೆಯ ದುಡುಕಿನ ನಿರ್ಧಾರದಿಂದ ಆರು ವರ್ಷದ ಜಸ್ವಿತ್ ಸಹ ಸಾವನ್ನಪ್ಪಿದ್ದಾನೆ. ಪಿಟ್ಟೇಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಗಂಗಾಧರ್ ಗೌಡಗೆ ಎಂಟು ವರ್ಷಗಳ ಹಿಂದೆ ಸಿಂಧೂ ಜೊತೆ ಮದುವೆಯಾಗಿತ್ತು.ದಂಪತಿಗೆ ಒಂದು ಗಂಡು ಮಗು ಸಹ ಆಗಿತ್ತು. ಸುಂದರ ಸಂಸಾರ ಇದ್ರೂ ಸಿಂಧೂ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧ ಗ್ರಾಮಸ್ಥರು ಮತ್ತು ಕುಟುಂಬಸ್ಥರು ರಾಜಿ ಪಂಚಾಯ್ತಿ ಸಹ ಮಾಡಿಸಿದ್ದರು. ಆದ್ರೂ ಸಿಂಧೂ ಮಾತ್ರ ಎಲ್ಐಸಿ ಏಜೆಂಟ್ ಆಗಿರುವ ಜಿ.ಸಿ.ನಂಜೇಗೌಡನಿಂದ ದೂರ ಆಗಿರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಸಿಂಧೂ ಇನಿಯನ ಜೊತೆ ಸೇರಿ ಗಂಗಾಧರ್ ಗೌಡಗೆ ಪದೇ ಪದೇ ತೊಂದರೆ ನೀಡಲು ಆರಂಭಿಸಿದ್ದಾರೆ. ಇದರಿಂದ ನೊಂದ ಗಂಗಾಧರ್ ಗ್ರಾಮದ ಹೊರ ವಲಯದಲ್ಲಿರುವ ತೊರೆಗೆ ಮಗನ ಜೊತೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published by:Kavya V
First published: