HOME » NEWS » State » RAMANAGARA HD KUMARSWAMY VISITS RAMANAGARA COVID CARE CENTRE ATVR SESR

ಕ್ಯಾಬಿನೆಟ್​ ಸಭೆ ಮಧ್ಯದಲ್ಲಿ ಸುಧಾಕರ್​ ಎದ್ದು ಹೋಗಿದ್ದು, ಸರ್ಕಾರದ ಒಗ್ಗಟ್ಟು ತೋರಿಸುತ್ತದೆ; ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ

news18-kannada
Updated:May 5, 2021, 7:08 PM IST
ಕ್ಯಾಬಿನೆಟ್​ ಸಭೆ ಮಧ್ಯದಲ್ಲಿ ಸುಧಾಕರ್​ ಎದ್ದು ಹೋಗಿದ್ದು, ಸರ್ಕಾರದ ಒಗ್ಗಟ್ಟು ತೋರಿಸುತ್ತದೆ; ಕುಮಾರಸ್ವಾಮಿ
ರಾಮನಗರ ಕೋವಿಡ್​ ಕೇರ್​ ಕೇಂದ್ರಕ್ಕೆ ಭೇಟಿ ನೀಡಿದ ಎಚ್​ಡಿಕೆ
  • Share this:
ರಾಮನಗರ (ಮೇ. 5): ಚಾಮರಾಜನಗರ ಘಟನೆ ಬೆನ್ನಲ್ಲೆ ಮಾಜಿ ಸಿಎಂ ಕುಮಾರಸ್ವಾಮಿ ದಿಢೀರ್​ ಎಂದು ರಾಮನಗರ-ಚನ್ನಪಟ್ಟಣದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿನ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು, ಎಲ್ಲಾ ವ್ಯವಸ್ಥೆ ಸರಿಯಾಗಿ ಮಾಡಬೇಕು. ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಸರಿಯಾಗಿರಬೇಕು. ರಾಮನಗರ ಜಿಲ್ಲೆಯಲ್ಲಿ ಯಾವುದೇ ದೂರು ಬರಬಾರದು. ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು  ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ  ಎರಡೂ ಪ್ರಮುಖ ಕೇರ್ ಸೆಂಟರ್ ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ಜಿಲ್ಲೆಯ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು. ಕೇರ್ ಸೆಂಟರ್ ನ ಪರಿಶೀಲನೆ ನಡೆಸಿದ ಎಚ್. ಡಿ. ಕುಮಾರಸ್ವಾಮಿ, ರಾಮನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆ ಸಂಕೀರ್ಣದಲ್ಲೇ ಆಕ್ಸಿಜನ್ ಸಹಿತ ನೂರು ಬೆಡ್ ಕೋವಿಡ್ ಅಸ್ಪತ್ರೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.‌

ಬೆಡ್​ ಬ್ಲಾಕಿಂಗ್​ ದಂಧೆ ನಾಟಕ:

ಚಾಮರಾಜನಗರ ಆಕ್ಸಿಜನ್​ ದುರಂತದ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಇದೇ ವೇಳೆ ವ್ಯಂಗ್ಯ ವಾಡಿದರು. ಬೆಡ್ ಬ್ಲಾಕಿಂಗ್ ದಂಧೆ ವಿಚಾರವಾಗಿ ಕೆಲವರನ್ನು ಬಂಧಿಸಲಾಗಿದೆ. ಬಂಧಿತರು ಎನ್‌ಜಿ‌ಓ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಇವರಿಗೆ ಬೆಡ್ ಅಲರ್ಟ್ ಮಾಡಲು ಜವಾಬ್ದಾರಿ ಕೊಟ್ಟವರು ಯಾರು ಎಂದು  ಪ್ರಶ್ನೆ ಮಾಡಿದರು. ‌ಸಂಸದರು 8 ವಾರ್ ರೂಂ‌ಗಳ ಪೈಕಿ ಕೇವಲ ಒಂದಕ್ಕೆ ಹೋಗಿ ನೋಡಿದ್ದಾರೆ. ಕಂಪ್ಯೂಟರ್‌‌ನಲ್ಲಿರುವ ಮಾಹಿತಿಗಿಂತ ಆಸ್ಪತ್ರೆಗೆ ತೆರಳಿ ವಾಸ್ತವತೆ ನೋಡಬೇಕು. ಡ್ರಗ್ ದಂಧೆಯಲ್ಲಿ ಒಂದೆರಡು ಹೆಣ್ಣುಮಕ್ಕಳನ್ನು ಜೈಲಿಗೆ ಹಾಕಿದ್ದು ಬಿಟ್ಟರೆ ನಿಮ್ಮ ಸಾಧನೆ ಏನು ಎಂದು ಇದೇ ವೇಳೆ ಪ್ರಶ್ನಿಸಿದರು.

ಇದನ್ನು ಓದಿ: ಚಾಮರಾಜನಗರ ದುರಂತ ಮರುಕಳಿಸದಂತೆ ಎಚ್ಚರವಹಿಸಿ; ಸಿಎಂ ಬಿಎಸ್​ವೈಗೆ ದೇವೇಗೌಡರಿಂದ ಸಲಹೆ

ಇನ್ನು ಸಿಡಿ ವಿಚಾರ ಏನಾಯ್ತು? ಚಾಮರಾಜನಗರ ದುರಂತ, ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ತನಿಖೆ ಮಾಡಿ ಏನು ಮಾಡುತ್ತೀರಾ?  ಇವೆಲ್ಲವೂ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗಿದೆ ಎಂದರು

ರಾಜ್ಯ ಸರ್ಕಾರ ಆಕ್ಸಿಜನ್ ಕೊರತೆ  ಬಗ್ಗೆ ಜನಕ್ಕೆ ಸತ್ಯ ಹೇಳಬೇಕು. ಕೊರೋನಾ ನಿರ್ವಹಣೆಗೆ 5 ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟ ಮೇಲೆ ಆರೋಗ್ಯ ಮಂತ್ರಿ ಸುಧಾಕರ್ ಕ್ಯಾಬಿನೆಟ್ ಸಭೆ ಬಿಟ್ಟು ಎದ್ದು ಹೋದರು ಎಂಬ ಮಾಹಿತಿ ಇದೆ. ಇದು ಸರ್ಕಾರದ ಒಗ್ಗಟ್ಟನ್ನು ಪ್ರಶ್ನೆ ಮಾಡುತ್ತದೆ ಎಂದು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.

ಬೆಡ್ ಬ್ಲಾಕಿಂಗ್​​ ಕೇಸನ್ನು ಸಿಸಿಬಿಗೆ ವಹಿಸಿದ್ದೀರಿ. ಪೊಲೀಸರು ವಾರ್ ರೂಂ‌ಗೆ ತೆರಳಿ ತನಿಖೆ ಮಾಡಿದರೆ, ನಾಳೆಯಿಂದ ಅಲ್ಲಿ ಯಾರು ಕೆಲಸ ಮಾಡುತ್ತಾರೆ. ಜನರಿಗೆ ಬೆಡ್ ಕೊಡುವವರು ಯಾರು..? ಕೋವಿಡ್ ವಾರಿಯರ್ಸ್ ಪೈಕಿ 5- 6% ಜನ ದುಡ್ಡು ಮಾಡಲು ಇರಬಹುದು. ಯಾಕೆಂದರೆ ನೀವು ಪೊಸ್ಟಿಂಗ್ ಹಾಕಬೇಕಾದರೆ ಹಣ ಪಡೆದು ಹಾಕಿದ್ದೀರಿ. ಈಗ ಆತ ದುಡ್ಡು ಮಾಡಲು ಹೊರಟಿದ್ದಾನೆ. ನಿಮ್ಮಲ್ಲಿ ತಪ್ಪು ಇಟ್ಟು ಕೊಂಡು ಜನರ ಹಾದಿ ತಪ್ಪಿಸಬೇಡಿ. ಜನರು ಬೀದಿಯಲ್ಲಿ ಸಾಯುತ್ತಿದ್ದರೆ ನೀವು ಹುಡುಗಾಟ ಆಡುತ್ತಿದ್ದೀರಾ.? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.(ವರದಿ : ಎ. ಟಿ. ವೆಂಕಟೇಶ್)
Published by: Seema R
First published: May 5, 2021, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories