HDK: ಬೆಳಗಾವಿ ಅಧಿವೇಶನ ವ್ಯರ್ಥ; ಕರ್ನಾಟಕ ಬಂದ್​ನಿಂದ ಮಹಾರಾಷ್ಟ್ರಕ್ಕೆ ಹಾನಿ ಇಲ್ಲ: ಕುಮಾರಸ್ವಾಮಿ

HDK comment on Karnataka Bandh: ಎಂಇಎಸ್ ಪುಂಡಾಡಿಕೆಯನ್ನ ವಿರೋಧಿಸಿ ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದರಿಂದ ಮಹಾರಾಷ್ಟ್ರಕ್ಕೆ ಹಾನಿ ಆಗುವುದಿಲ್ಲ. ನಮ್ಮವರಿಗೇ ಕಷ್ಟ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ರಾಮನಗರ (ಚನ್ನಪಟ್ಟಣ): ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (Former CM H D Kumaraswamy) ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ (Karnataka Bandh) ಮಾಡುವುದರಿಂದ ಏನು ಪ್ರಯೋಜನ, ಅನುಕೂಲ ಯಾರಿಗೆ, ಅನನುಕೂಲ ಯಾರಿಗೆ ಅನ್ನೋದು ಮುಖ್ಯ. ನಮ್ಮ ರಾಜ್ಯದಲ್ಲಿ ಬಂದ್ ಕರೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರಕ್ಕೆ (No Effect on Maharashtra from Karnataka Bandh) ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ಕಠಿಣವಾದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದ ಅವರು, ಬಂದ್ ಘೋಷಣೆಯಿಂದ ನಮ್ಮವರಿಗಷ್ಟೇ ತೊಂದರೆಯಾಗಲಿದೆ ಎಂದರು.

ಇನ್ನು ಬಂದ್ ನಿಂದ ರಾಜ್ಯದ ಜನರಿಗೆ ನಷ್ಟವಾಗಲಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವ್ರಿಗೆ ಆಗುವ ಪರಿಣಾಮದ ಬಗ್ಗೆ ಯೋಚಿಸಬೇಕು. ಬಂದ್ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು. ಬಂದ್ ನಿಂದ ಕನ್ನಡಿಗರಿಗೆ ಅನನುಕೂಲವೇ ಹೆಚ್ಚು ಎಂಬುದನ್ನು ಅರಿತುಕೊಳ್ಳಬೇಕು. ಹೋರಾಟಗಾರರು ಬಂದ್ ಆಚರಿಸುವ ಬದಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಅಧಿವೇಶನ ವೃಥಾ ವ್ಯರ್ಥ: 

ಬೆಳಗಾವಿ ವಿಧಾನಸಭಾ ಕಲಾಪ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸದನ ಕಲಾಪವನ್ನ ಸಂಪೂರ್ಣ ವ್ಯರ್ಥ ಮಾಡಲಾಯಿತು ಎಂದು ಕಿಡಿಕಾರಿದರು.

ಇದನ್ನೂ ಓದಿ: Raitha Vidya Nidhi: ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೂ Scholarship: ಸಂಪೂರ್ಣ ಮಾಹಿತಿ ಇಲ್ಲಿದೆ

ಮೊದಲ ಐದು ದಿನ ಸಂಪೂರ್ಣ ವ್ಯರ್ಥವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆಯೂ ಚರ್ಚಿಸಿಲ್ಲ. ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜ್ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ. ಯಾವುದಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಿತ್ತೋ ಅದಕ್ಕೆ ಪ್ರಾರಂಭಿಕ ಹಂತದಲ್ಲಿ ನೀಡಿಲ್ಲ. ಕೊನೆ ಎರಡು ದಿನವೆಂದು ಆಗ ಕೂಡ ಸರಿಯಾದ ಚರ್ಚೆ ನಡೆಯಲಿಲ್ಲ. ಕೊನೆಯಲ್ಲಿ ಮತಾಂತರ ವಿಚಾರ ತಂದರು. ಸದನದ ಕಲಾಪ ನಡೆಯಬೇಕೆಂಬ ಆಶಯ ಈಡೇರಲಿಲ್ಲ. ಕೆಲವರು ಈ ನಿಟ್ಟಿನಲ್ಲಿ ಯೋಚಿಸುತ್ತಾರೆ. ಆದ್ರೆ ಅವರ ಆಶಯ ಈಡೇರಲಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಎಂಇಎಸ್ ಸಂಘಟನೆ ನಿಷೇಧ ವಿಚಾರವಾಗಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಂಘಟನೆ ನಿಷೇಧ ಕಾನೂನಾತ್ಮಕವಾಗಿ ಮಾಡಬೇಕು. ಸರಿಯಾದ ತೀರ್ಮಾನ ಮಾಡಬೇಕು. ಕೋರ್ಟ್​ಗೆ ಹೋಗಿ ಸ್ಟೇ ತರುವಂತೆ ನಿಷೇಧ ಹೇರಬಾರದು. ಸರ್ಕಾರ ಈ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Anekal Suicide: 'ಅಪ್ಪ ನಾನು ಸಾಯ್ತಾ ಇದ್ದೇನೆ.. ಇನ್ಮುಂದೆ ನನ್ನ ಹೆಂಡತಿ-ಮಕ್ಕಳಿಗೆ ಕಾಟ ಕೊಡಬೇಡ..'

ಚನ್ನಪಟ್ಟಣ ಪ್ರವಾಸ ಮಾಡಿದ ಕುಮಾರಸ್ವಾಮಿ, ಜನರಿಗೆ ಭರವಸೆ :

ವಿವಿಧ ಕಾರ್ಯಕ್ರಮಗಳ ನಿಮಿತ್ತವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರ ಪ್ರವಾಸ ಮಾಡಿದರು. ಬೇವೂರು ನಂತರ ಗೌಡಗೆರೆ ಗ್ರಾಮದ 68 ಅಡಿಯ ಚಾಮುಂಡೇಶ್ವರಿ ವಿಗ್ರಹ ವೀಕ್ಷಣೆ ಮಾಡಿದರು. ನಂತರ ಗುಡ್ಡೆಅವ್ವೇರಹಳ್ಳಿ, ಗೋವಿಂದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜನರೊಂದಿಗೆ ಮಾತನಾಡಿ‌ದ ಕುಮಾರಸ್ವಾಮಿ, ನಾನು ಇನ್ನು ಮುಂದೆ ಬೆಂಗಳೂರಿನ ಕಡೆಗೆ ಹೋಗಲ್ಲ, ಬಿಡದಿಯಲ್ಲಿಯೇ ಖಾಯಂ ವಾಸ. ಹಾಗಾಗಿ ಕ್ಷೇತ್ರದ ಜನರು ಯಾವುದೇ ಸಮಸ್ಯೆ ಇದ್ದರೂ ಸಹ ಬನ್ನಿ ಎಂದು ಭರವಸೆ ನೀಡಿದರು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: