MLC Electionನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ; ಮೋದಿ-ದೇವೇಗೌಡ್ರ ಭೇಟಿ ಬೆನ್ನಲ್ಲೇ HD Kumaraswamy ರಣತಂತ್ರ!

ಯಡಿಯೂರಪ್ಪ ಅವರು ಈಗಾಗಲೇ ಬಹಿರಂಗವಾಗಿ ಬೆಂಬಲ ಕೇಳಿದ್ದಾರೆ. ಕಾಂಗ್ರೆಸ್ ನಾಯಕರು ನಮಗೆ ಜೆಡಿಎಸ್ ಬೆಂಬಲ ಬೇಡ ಅಂತಾ ಹೇಳಿದ್ದಾರೆ. ಕರೆಯದೆ ಇರುವ ಮನೆಯವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ ಎಂದರು. 

ಎಚ್​.ಡಿ.ಕುಮಾರಸ್ವಾಮಿ

ಎಚ್​.ಡಿ.ಕುಮಾರಸ್ವಾಮಿ

  • Share this:
ರಾಮನಗರ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(H. D. Kumaraswamy) ವಿಧಾನ ಪರಿಷತ್ ಚುನಾವಣೆಯಲ್ಲಿ(MLC Election) ಬಿಜೆಪಿಗೆ (BJP) ಬೆಂಬಲ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್ (JDS) ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿದರು‌. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ವಿಧಾನಪರಿಷತ್ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಪರವಾಗಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ ಬಿ.ಎಸ್​. ಯಡಿಯೂರಪ್ಪ ಅವರು ಈಗಾಗಲೇ ಬಹಿರಂಗವಾಗಿ ಬೆಂಬಲ ಕೇಳಿದ್ದಾರೆ. ಕಾಂಗ್ರೆಸ್ ನಾಯಕರು ನಮಗೆ ಜೆಡಿಎಸ್ ಬೆಂಬಲ ಬೇಡ ಅಂತಾ ಹೇಳಿದ್ದಾರೆ. ಕರೆಯದೆ ಇರುವ ಮನೆಯವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ ಎಂದರು. ಹಾಗಾಗಿ ಸದ್ಯದಲ್ಲೆ ಬೆಂಬಲದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದರು.

ಮೋದಿ ಜೊತೆ ಮೈತ್ರಿ ಮಾತುಕತೆ ಬಗ್ಗೆ ಗೊತ್ತಿಲ್ಲ: ಪ್ರಧಾನಿ ಮೋದಿ ಅವರಿಗೆ ದೇವೇಗೌಡರ ಮೇಲೆ ಅಪಾರ ವಿಶ್ವಾಸ ಹಾಗೂ ಗೌರವ ಇದೆ. ಹಾಸನದ ಐಐಟಿ ಸ್ಥಾಪನೆ ವಿಚಾರದಲ್ಲಿ ದೇವೇಗೌಡ್ರು, ಮೋದಿ ಭೇಟಿ ಮಾಡಿದ್ದಾರೆ. ಮೈತ್ರಿ ಬಗ್ಗೆ ಮೋದಿ ಅವರ ಜತೆಗೆ ದೇವೇಗೌಡ್ರು ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ದೇವೇಗೌಡ್ರು ದೆಹಲಿಯಿಂದ ಬಂದ ನಂತ್ರ ಮೈತ್ರಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾತುಕತೆ ಮಾಡಲಿದ್ದೇನೆ ಎಂದರು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದೂರು: ಇನ್ನು ಎಚ್​ಡಿಕೆ ಅಪ್ತ ಲೋಕಾಯುಕ್ತ ಡಿವೈಎಸ್ಪಿ ಪುರಷೊತ್ತಮ್ ಬಗ್ಗೆ ದೂರು ಹಿನ್ನಲೆ ದೂರಿನ ಬಗ್ಗೆ ನನಗೆ ಗೊತ್ತಿಲ್ಲ ಅವರು ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವ ವಿಚಾರದಲ್ಲಿ ಅವರ ಹೆಸರು ಕೇಳಿ ಬರುತ್ತಿದೆ ಅಂತಾ ನನಗೆ ಗೊತ್ತಿಲ್ಲಾ.ನನಂತೂ ಅಧಿಕಾರಿಗಳನ್ನ ಬಳಸಿಕೊಂಡು ಯಾವತ್ತು ಚುನಾವಣೆ ನಡೆಸಿಲ್ಲಾ.ಕಾರ್ಯಕರ್ತರ ವಿಶ್ವಾಸದಿಂದ ಚುನಾವಣೆ ನಡೆಸಿಕೊಂಡು ಬಂದಿದ್ದೇನೆ. ಕಾರ್ಯಕರ್ತರು ಚುನಾವಣೆಯಲ್ಲಿ ಮತ ಹಾಕಿಸುತ್ತಾರೆ, ಅಧಿಕಾರಿಗಳು ಮತ ಹಾಕಿಸಲು ಸಾಧ್ಯವಾಗುತ್ತಾ. ಆದರೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದೂರು ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲಾ, ತನಿಖೆ ನಂತರ ಸತ್ಯಾಂಶ ಹೊರ ಬರಬೇಕಿದೆ.ಪೋನ್ ಮಾಡಿ ಬೆದರಿಕೆ ಹಾಕಿದ್ರೆ ತನಿಖೆಯಲ್ಲಿ ತಿಳಿದು ಬರಬೇಕಿದೆ ಎಂದರು.

ಕೊನೆ ಉಸಿರಿರೋವರೆಗೂ ರಾಮನಗರ ಬಿಡಲ್ಲ

ಇನ್ನು ಈ ವಿಧಾನ ಪರಿಷತ್ ಚುನಾವಣೆ 2023 ರ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ. ಆದರೆ ಚುನಾಯಿತ ಪ್ರತಿನಿಧಿಗಳ ಬೆಂಬಲ ಯಾವ ಪಕ್ಷಕ್ಕೆ ಎಂಬುದು ಗೊತ್ತಾಗಲಿದೆ. ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ಬೆಂಬಲ ಇದೇ. ಆದರೆ ಚುನಾವಣೆ ಗೆಲ್ಲುವಷ್ಟು ಬೆಂಬಲ ಇಲ್ಲ, ಆದರೆ ಯಾರನ್ನ ಗೆಲ್ಲಿಸಬಹುದು ಎಂಬ ಶಕ್ತಿ ಜನ ಕೊಟ್ಟಿದ್ದಾರೆ ಎಂದರು. ಪಕ್ಷ ಬಯಸಿದರೆ ಸ್ಪರ್ಧೆ ಮಾಡ್ತೇನೆಂಬ ನಿಖಿಲ್ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು ಪಕ್ಷ ಬಯಸಿದರೆ ಸ್ಪರ್ಧೆ ಎಂದಿದ್ದಾರೆ. ಅದಕ್ಕೆ ಇನ್ನು 2 ವರ್ಷಗಳ ಕಾಲ ಸಮಯವಿದೆ. ನೋಡೋಣ, ಆದರೆ ರಾಮನಗರ ನಮ್ಮ ಕರ್ಮಭೂಮಿ ಕೊನೆ ಉಸಿರಿರೋವರೆಗೂ ರಾಮನಗರ ಬಿಡಲ್ಲ. ನಾವು ಮಣ್ಣಾಗುವುದು ಸಹ ರಾಮನಗರದಲ್ಲೇ ಎಂದರು. ಸಭೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಶಾಸಕ ಎ.ಮಂಜು ಉಪಸ್ಥಿತಿ ಇದ್ದರು.

ಇದನ್ನೂ ಓದಿ: HD Devegowda: ಹಾಸನಕ್ಕಾಗಿ ಪ್ರಧಾನಿಯನ್ನೇ ಭೇಟಿ ಮಾಡಿ ಬಂದ್ರಾ ದೇವೇಗೌಡ್ರು? ಅವರ ಡಿಮ್ಯಾಂಡ್ ಕೇಳಿ ಜನ ಫುಲ್ ಖುಷ್!

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: